viral video: ತೀರ್ಥ ಅಂತ ಭಕ್ತರು ಕುಡಿದಿದ್ದು ತೀರ್ಥನೇ ಅಲ್ಲ, ಮತ್ತಿನ್ನೇನು ?!
ಜನ ದೇವರು ಹಾಗೂ ಭಕ್ತಿಯ ವಿಚಾರದಲ್ಲಿ ಹೇಗೆಲ್ಲ ಮೋಸ ಹೋಗ್ತಾರೆ ಎನ್ನುವುದು ಈ ವಿಡಿಯೋ ಸಾಕ್ಷಿ. ದೇವಸ್ಥಾನ ಹಾಗೂ ದೇವರ ವಿಚಾರದಲ್ಲಿ ನಮ ಜನರಿಗೆ ವಿಶೇಷ ಗೌರವ ಹಾಗೂ ಭಕ್ತಿಭಾವ ಇದೆ. ಆದರೆ, ಕೆಲವೊಮ್ಮೆ ಇದು ಅತಿರೇಕಕ್ಕೆ ಇಲ್ಲವೇ ಹಾಸ್ಯಕ್ಕೆ ಗುರಿಯಾಗುವುದು ಇದೆ. ಹಿಂದೂ ದೇವಾಲಯದಲ್ಲಿ ನಡೆದ ದೃಶ್ಯವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಜನ ಇದನ್ನು ನೋಡಿ ನಗ್ತಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ನೋಡಿ.
ನಮ್ಮ ದೇಶದಲ್ಲಿ ನಂಬಿಕೆಗಳಷ್ಟೇ ಮೂಢನಂಬಿಕೆಗಳು ಸಹ ಇವೆ. ಕೆಲವೊಮ್ಮೆ ಜನ ತಮಗೇ ತಿಳಿಯದೆ ಯಾರೋ ಒಬ್ಬರು ಮಾಡಿದ್ದನ್ನು ಕಣ್ಣು ಮುಚ್ಚಿಕೊಂಡು ಫಾಲೋ ಮಾಡುವುದು ಇದೆ. ಇದಕ್ಕೆ ಜನರಲ್ಲಿ ದೇವರ ಬಗ್ಗೆ ಇರುವ ಅಪಾರ ಗೌರವ ಮಾತ್ರವಲ್ಲದೇ. ಮೂಢನಂಬಿಕೆಯೂ ಸಹ ಕಾರಣವಾಗಿದೆ. ಇನ್ನೂ ಕೆಲವೊಮ್ಮೆ ಅಮಾಯಕ ಭಕ್ತರು ಈ ರೀತಿ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ.

ದೇವರ ತೀರ್ಥ ಅಂತ ಎಸಿ ನೀರು ಕುಡಿದರು: ದೇವರ ಗರ್ಭಗುಡಿಯಿಂದ ಬರ್ತಿದೆ ಅಂತ ತಿಳಿದಿಕೊಂಡು ಭಕ್ತರು ಎಸಿ ನೀರು ಕುಡಿದಿರಯವ ಘಟನೆಯೊಂದು ನಡೆದಿದೆ. ಭಕ್ತರು ಎಸಿಯಿಂದ ಬರ್ತಿರೋ ನೀರನ್ನು ಗ್ಲಾಸ್‌ನಲ್ಲಿ ಹಿಡಿದುಕೊಂಡು ಕುಡಿಯುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ದೇವಸ್ಥಾನದಲ್ಲಿ ದೇವರ ಮೂರ್ತಿಯ ದರ್ಶನ ಪಡೆದ ಮೇಲೆ ಪ್ರದಕ್ಷಿಣೆ ಹಾಕುವಾಗ ಭಕ್ತರು ಎಸಿ ನೀರನ್ನೇ ಗಡಗಡ ಅಂತ ಕುಡ್ದಿದ್ದಾರೆ. ನಮ್ಮ ಜನ ಏನೆಲ್ಲ ಮಾಡ್ತಾರೆ ನೋಡಿ, ಸ್ವಲ್ಪ ವಿಚಾರ ಮಾಡಿ ತಿಳಿದುಕೊಂಡು ಏನಾದರೂ ಮಾಡಿ ಅಂತ ಈ ವೈರಲ್ ವಿಡಿಯೋಗೆ ಜನ ಕೆಮೆಂಟ್ ಮಾಡ್ತಾ ಇದ್ದಾರೆ.
ಈ ದೇಶ ಹಿಂದುಳಿಯಲು ಇದು ಕಾರಣ ನೋಡಿ 🤦
— Goudrusarkar - ಗೌಡ್ರುಸರ್ಕಾರ್ (@Gs_0107) November 3, 2024
Ac ಯಿಂದ ವೇಸ್ಟ ಆದ ನೀರು ಸೋರಿಕೆ ಆಗ್ತಾ ಇದೆ ದೇವರ ತೀರ್ಥದ ನೀರು ಎಂದು ಸೇವನೆ ಮಾಡ್ತಾ ಇದ್ದಾರೆ 😮pic.twitter.com/KgzLccYX4o
ಬಿಹಾರದಲ್ಲಿ ಘಟನೆ: ಇನ್ನು ಈ ವೈರಲ್ ವಿಡಿಯೋ ಬಿಹಾರ ರಾಜ್ಯಕ್ಕೆ ಸಂಬಂಧಿಸಿದ್ದು ಅಂತ ಹೇಳಲಾಗ್ತಿದೆ. ಬಿಹಾರದಲ್ಲಿ ನಡೆದಿರುವ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ದೇವಸ್ಥಾನದ ಪ್ರದಕ್ಷಿಣೆ ಹಾಕಿದ ಭಕ್ತರು ದೇವರ ಮೂರ್ತಿಯ ಹಿಂದೆ ಬೀಳುತ್ತಿರುವ ನೀರನ್ನು ಹಿಡಿದುಕೊಂಡು ಕುಡಿದಿದ್ದಾರೆ. ಅಲ್ಲದೇ, ಕೆಲವರು ಅದನ್ನು ಪ್ರೋಕ್ಷಣೆಯಂತೆಯೂ ಹಾಗೂ ಕೈ ಮುಗಿದು ಹಿಡಿದುಕೊಳ್ಳುವುದು ವೈರಲ್ ಆಗಿದೆ. ಇದು ಚರಣಾಮೃತ ಎಂದು ಭಕ್ತರು ಭಾವಿಸಿದ್ದರು ಅಂತ ಹೇಳಲಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ: ಬಿಹಾರದ ದೇವಸ್ಥಾನದಲ್ಲಿ ನಡೆದಿದೆ ಎನ್ನಲಾಗಿರುವ ಈ ವಿಡಿಯೋ ಭಾರೀ ವೈರಲ್ ಆಗಿದೆ. ಅದರಲ್ಲಿ ಭಕ್ತರು ಎಸಿ ನೀರನ್ನು ಹಿಡಿದುಕೊಂಡು ಕುಡಿಯುತ್ತಿದ್ದಾರೆ. ಹೊರಗಿನಿಂದ ನೋಡುವುದಕ್ಕೆ ಇದು ಎಸಿ ನೀರು ಅಂತ ಕಾಣಿಸಲ್ಲ. ಆದರೆ, ದೇವಸ್ಥಾನದ ವಿಗ್ರಹದಿಂದ ಈ ನೀರು ತೊಟ್ಟಿಕುತ್ತಿದೆ.
ಹಲವರು ಈ ನೀರನ್ನು ಹಿಡಿದುಕೊಂಡು ಕುಡಿಯುತ್ತಿದ್ದು, ಮೇಡಂ ಅದು ತೀರ್ಥವಲ್ಲ, ಎಸಿ ನೀರು. ಇದನ್ನು ಕುಡಿಯಬೇಡಿ. ಈ ನೀರು ಕುಡಿದರೆ ಆರೋಗ್ಯ ಹಾಳಾಗುತ್ತದೆ ಎಂದು ವ್ಯಕ್ತಿಯೊಬ್ಬರು ಭಕ್ತಾಧಿಗಳಲ್ಲಿ ಜಾಗೃತಿ ಮೂಡಿಸುತ್ತಿರುವ ದೃಶ್ಯ ಈ ವೈರಲ್ ವಿಡಿಯೋದಲ್ಲಿ ಇದೆ. ಭಕ್ತಾಧಿಗಳ ಅಜ್ಞಾನ ಹಾಗೂ ಮೂಢನಂಬಿಕೆಗೆ ಜನ ವ್ಯಂಗ್ಯವಾಡಿದ್ದಾರೆ.












Click it and Unblock the Notifications