Donald Trump: ಭಾರತದ ಬೆನ್ನಿಗೆ ಚೂರಿ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಭಾರತೀಯರು ಆಕ್ರೋಶ ಹೊರ ಹಾಕುತ್ತಾ, ಕೋಪಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಬೇಕು ಅಂತಾ ಭಾರತ & ಭಾರತ ಮೂಲದ ಅಮೆರಿಕನ್ನರ ಬಗ್ಗೆ ಹೊಗಳಿದ್ದ ಇದೇ ಡೊನಾಲ್ಡ್ ಟ್ರಂಪ್, ಚುನಾವಣೆ ಗೆದ್ದ ನಂತರ ತಮ್ಮ ವರಸೆಯನ್ನೇ ಬದಲಾಯಿಸಿದ್ದಾರೆ. ಹಾಗಾದ್ರೆ, ಭಾರತದ ಬೆನ್ನಿಗೆ ಚೂರಿ ಹಾಕಿದ್ರಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್?
ಡೊನಾಲ್ಡ್ ಟ್ರಂಪ್ ಜೊತೆಯಲ್ಲೇ ವಿವಾದಗಳು ಕೂಡ ಬೆರೆತು ಹೋಗಿದ್ದು, ಅಮೆರಿಕದಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಒಳ್ಳೆಯ ಹೆಸರು ಉಳಿಸಿಕೊಂಡಿಲ್ಲ. ಇನ್ನು ಜಾಗತಿಕ ಮಟ್ಟದ ವೇದಿಕೆಗಳಲ್ಲಿ ಕೂಡ ಅಮೆರಿಕ ಮಾನ ಕಳೆಯಲು ಡೊನಾಲ್ಡ್ ಟ್ರಂಪ್ ಸಾಕು ಅಂತಾ ಎಲ್ಲ ಹೇಳ್ತಾರೆ. ಇಂತಹ ಸಮಯದಲ್ಲೇ ಭಾರತ & ಪಾಕಿಸ್ತಾನ ಯುದ್ಧದ ವಿಚಾರದಲ್ಲೂ ಮೂಗು ತೂರಿಸಿದ್ದ ಇದೇ ಡೊನಾಲ್ಡ್ ಟ್ರಂಪ್, ಯುದ್ಧ ನಿಲ್ಲಿಸಿದ್ದು ನಾನೇ ಅಂತಾ ಕೊಚ್ಚಿಕೊಳ್ತಾ ಇರೋದನ್ನ ನೋಡಿದ್ದೀವಿ. ಇಂತಹ ಸಮಯದಲ್ಲೇ ಭಾರತಕ್ಕೆ ಮತ್ತೊಂದು ಮಹಾನ್ ಮೋಸ ಮಾಡಿದ್ರಾ ಟ್ರಂಪ್?

ಭಾರತಕ್ಕೆ ಟ್ರಂಪ್ ಮಹಾನ್ ಮೋಸ?
ಹೌದು, ಭಾರತ & ಅಮೆರಿಕ ನೂರಾರು ವರ್ಷಗಳಿಂದ ಕೂಡ ವ್ಯಾಪಾರ ಮತ್ತು ವ್ಯವಹಾರ ನಡೆಸಿಕೊಂಡು ಬರುತ್ತಿವೆ. ಅದರಲ್ಲೂ ಭಾರತ & ಅಮೆರಿಕ ಸಂಬಂಧ ಕೂಡ ಉತ್ತಮವಾಗೇ ಇದೆ. ಆದರೆ, ಡೊನಾಲ್ಡ್ ಟ್ರಂಪ್ ಬಂದ ನಂತರ ಭಾರತ & ಅಮೆರಿಕ ಸಂಬಂಧ ಹಾಳಾಗಿ ಹೋಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ನಂಬಿಸಿ ಮೋಸ & ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ!
ಭಾರತದ ಬೆನ್ನಿಗೆ ಚೂರಿ ಹಾಕಿದ್ರಾ?
ಭಾರತಕ್ಕೆ ಬರಬೇಕಿದ್ದ ಆಪಲ್ ಕಂಪನಿಯನ್ನ ತಪ್ಪಿಸಿದ ಆರೋಪ ಕೂಡ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಇದ್ದು, ಇದೀಗ ಮತ್ತೊಂದು ಆರೋಪ ಕೂಡ ಕೇಳಿ ಬಂದಿದೆ. ಭಾರತವು ಯಾವುದೇ ಅಧಿಕೃತ ಹೇಳಿಕೆ ನೀಡದೇ ಇದ್ದರೂ ಭಾರತ & ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ ಅಂತಾ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು. ಹೀಗಿದ್ದಾಗ ಭಾರತ ಕೂಡ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಿತ್ತು. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಆರೋಪ ಕೂಡ ಕೇಳಿ ಬಂದಿದ್ದು, ಭಾರತ ಟ್ಯಾಕ್ಸ್ ವಿಚಾರವಾಗಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿದೇ ಇದ್ದರೂ ಟ್ರಂಪ್ ಮಾತ್ರ ತಮ್ಮ ಮನಸ್ಸಿಗೆ ಬಂದ ರೀತಿ ಹೇಳಿಕೆ ನೀಡಿದ್ದಾರೆ. ಆ ಮೂಲಕ ಭಾರತದ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತಾ ಇದೀಗ ಸೋಷಿಯಲ್ ಮೀಡಿಯಾದ ಮೂಲಕ ಜನ ಚರ್ಚೆ ಮಾಡುತ್ತಿದ್ದಾರೆ.












Click it and Unblock the Notifications