ಎಸ್ಪಿ ವಿಭಜನೆಯನ್ನು ತಡೆಯಲು ಆ ದೇವರಿಂದಲೂ ಸಾಧ್ಯವಿಲ್ಲ!
ಲಖನೌ, ಡಿಸೆಂಬರ್ 30 : ಸಾರ್ವಜನಿಕವಾಗಿ ತಂದೆಯಿಂದಲೇ ಅವಮಾನಕ್ಕೀಡಾಗಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮುಲಾಯಂ ಅವರ ವಿರುದ್ಧವೇ ತಿರುಗಿಬಿದ್ದಿದ್ದು, ಬಲಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಸಹೋದರ ಶಿವಪಾಲ್ ಯಾದವ್ ಅವರು ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ತಮ್ಮದೇ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅಖಿಲೇಶ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ನಿರಾಕರಿಸಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಈ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಅವರು ತಮ್ಮದೇ ಹೊಸ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ತಂದೆಗೆ ತಿರುಗೇಟು ನೀಡಿದ್ದಾರೆ. ಅಖಿಲೇಶ್ ಅವರು ಸಿದ್ಧಪಡಿಸಿಕೊಂಡಿರುವ ಪಟ್ಟಿಯಲ್ಲಿ 171 ಹಾಲಿ ಶಾಸಕರು ಸೇರಿದಂತೆ 235 ಅಭ್ಯರ್ಥಿಗಳಿದ್ದಾರೆ.

ಆದರೆ, ಚುನಾವಣೆ ಹತ್ತಿರದಲ್ಲಿರುವಾಗ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಒಗ್ಗಟ್ಟಿನಿಂದ ಇರಬೇಕು, ಇಬ್ಭಾಗವಾಗಲು ಅವಕಾಶ ನೀಡಬಾರದು ಹೇಳುತ್ತಿದ್ದರೂ, ಕೇಳಲು ಅಖಿಲೇಶ್ ಯಾದವ್ ಅಪ್ಪನ ಮಾತಿಗೆ ಕಿವಿಯಾಗಲು ತಯಾರಿಲ್ಲ. ಮುಂದೆ ಏನಾಗಲಿದೆ? ಆ ದೇವರೂ ಖಚಿತವಾಗಿ ಹೇಳಲಾರ!












Click it and Unblock the Notifications