ಉಗ್ರರಿಂದ ಜಮ್ಮು ಮತ್ತು ಕಾಶ್ಮೀರದ ಅಪಹೃತ ಪೊಲೀಸರ ಬರ್ಬರ ಹತ್ಯೆ
ಶ್ರೀನಗರ, ಸೆಪ್ಟೆಂಬರ್ 21 : ಜಮ್ಮು ಮತ್ತು ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಅಪಹರಿಸಲಾದ ಮೂವರು ಭಾರತೀಯ ಪೊಲೀಸರನ್ನು ಉಗ್ರಗಾಮಿಗಳು ಕೊಂದಿದ್ದು, ಅವರ ದೇಹವನ್ನು ಕಾಶ್ಮೀರದ ದಕ್ಷಿಣ ಭಾಗದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮೂರು ವಾರಗಳ ಹಿಂದೆ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿಯನ್ನು ಭಯೋತ್ಪಾದಕರು ಅಪಹರಿಸಿ ನಂತರ ಬಿಡುಗಡೆ ಮಾಡಿದ್ದರು. ಇದರ ಹಿಂದೆಯೇ ಕಳೆದ ಶುಕ್ರವಾರ ಮೂವರು ಪೊಲೀಸರನ್ನೇ ಉಗ್ರರು ಅಪಹರಿಸಿದ್ದಲ್ಲದೆ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಆಗಸ್ಟ್ 30ರಂದು ರಾತ್ರಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 8 ಜನರನ್ನು ಉಗ್ರರು ಅಪಹರಿಸಿದ್ದರು. ಪೊಲೀಸ್ ವಶದಲ್ಲಿರುವ ಎಲ್ಲ ತಮ್ಮ ಬಂಧುಗಳನ್ನು ಬಿಡುಗಡೆ ಮಾಡುವುದಕ್ಕೆ 3 ದಿನಗಳ ಡೆಡ್ ಲೈನ್ ನೀಡಿ, ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ರಿಯಾಜ್ ನೈಕೂ ಎಂಬಾತ 12 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿದ್ದ.

ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಗುಂಪಿನ ನಾಯಕ, ಜಾಗತಿಕವಾಗಿ ಬೇಕಾಗಿರುವ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಸೈಯದ್ ಸಲಾಹುದ್ದಿನ್ ನ ಎರಡನೇ ಮಗನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸುತ್ತಿದ್ದಂತೆ ಆಗಸ್ಟ್ 30ರಂದು ಪೊಲೀಸ್ ಸಿಬ್ಬಂದಿಗಳ ಅಪರಹಣ ನಡೆದಿತ್ತು. ಭಾರೀ ಮೊತ್ತದ ಹಣವನ್ನು ಅಕ್ರಮವಾಗಿ ಸ್ವೀಕರಿಸಿದ ಆರೋಪದ ಮೇಲೆ ಸಲಾಹುದ್ದಿನ್ ನ ಮಗನನ್ನು ಎನ್ಐಎ ಬಂಧಿಸಿತ್ತು.












Click it and Unblock the Notifications