ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ: ಮುನುಗೋಡೆ ಉಪಚುನಾವಣೆ ಪ್ರಚಾರ ಅಂತ್ಯ, ನ.3ಕ್ಕೆ ಮತದಾನ

|
Google Oneindia Kannada News

ಹೈದರಾಬಾದ್‌, ನವೆಂಬರ್‌ 1: ಮುನುಗೋಡೆ ಉಪಚುನಾವಣೆಗೆ 298 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ನವೆಂಬರ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ 2,41,855 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ತಿಳಿಸಿದ್ದಾರೆ.

ಮುನುಗೋಡೆ ಉಪಚುನಾವಣೆಯ ಪ್ರಚಾರ ಮಂಗಳವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದ್ದು, ನವೆಂಬರ್‌ 3ರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಸುಮಾರು 105 ನಿರ್ಣಾಯಕ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎಲ್ಲಾ ಠಾಣೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತ್ತು ವೈದ್ಯಕೀಯ ತಂಡಗಳು ಲಭ್ಯವಿವೆ ಎಂದು ಅಧಿಕಾರಿ ತಿಳಿಸಿದರು.

ತೆಲಂಗಾಣದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದ ಬಿಜೆಪಿ ಮುಖಂಡ!ತೆಲಂಗಾಣದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದ ಬಿಜೆಪಿ ಮುಖಂಡ!

ಎಲ್ಲಾ ಮತಗಟ್ಟೆಗಳಲ್ಲಿ ಸಾಕಷ್ಟು ಬೆಳಕು ಮತ್ತು ಶೌಚಾಲಯಗಳನ್ನು ಇರುವಂತೆ ನೋಡಿಕೊಳ್ಳಬೇಕು. ಮುನುಗೋಡಿನಲ್ಲಿ ಪ್ರಥಮ ಬಾರಿಗೆ ಹೊಸ ವಿನ್ಯಾಸದ ವೋಟರ್ ಐಡಿ ನೀಡಿದ್ದೇವೆ. ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಿದ್ದೇವೆ. ಫ್ಲೈಯಿಂಗ್ ಸ್ಕ್ವಾಡ್ ಮತ್ತು ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು ಸೇರಿದಂತೆ ಒಟ್ಟು 51 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

Telangana TRS BJP Munugode by election campaign ends voting on November 3

ಮತಗಟ್ಟೆ ಕೇಂದ್ರಗಳಲ್ಲಿ ಸಿಬ್ಬಂದಿಗೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಲಾಗಿದೆ. 199 ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ. ಮುನಗೋಡಿನಲ್ಲಿ 3,366 ರಾಜ್ಯ ಪೊಲೀಸರು ಹಾಗೂ 15 ಕಂಪನಿ ಕೇಂದ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. 185 ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ ರೂ.6.80 ಕೋಟಿ ಹಾಗೂ 4,500 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಕಾಸ್ ರಾಜ್ ತಿಳಿಸಿದ್ದಾರೆ.

ತೆಲಂಗಾಣ ಉಪಚುನಾವಣೆ: 5 ಕೋಟಿ ಹಣ ವರ್ಗಾವಣೆ, ಬಿಜೆಪಿ ಅಭ್ಯರ್ಥಿಗೆ ನೋಟಿಸ್ತೆಲಂಗಾಣ ಉಪಚುನಾವಣೆ: 5 ಕೋಟಿ ಹಣ ವರ್ಗಾವಣೆ, ಬಿಜೆಪಿ ಅಭ್ಯರ್ಥಿಗೆ ನೋಟಿಸ್

ಮುನುಗೋಡೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಕೆ.ರಾಜಗೋಪಾಲ್ ರೆಡ್ಡಿ ಅವರ ರಾಜೀನಾಮೆಯಿಂದ ಈಗ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. 1,800 ಕೋಟಿ ರೂಪಾಯಿ ಮೊತ್ತದ ಗುತ್ತಿಗೆ ಕಾಮಗಾರಿ ಪಡೆದು ಬಿಜೆಪಿ ಸೇರಿದ್ದಾರೆ ಎಂಬ ಆರೋಪಗಳು ಅವರ ಮೇಲೆ ಇವೆ. ಈಗ ಅವರು ಬಿಜೆಪಿಯಿಂದ ಟಿಕೆಟ್‌ ಪಡೆದು ಸ್ಪರ್ಧಿಸುತ್ತಿದ್ದಾರೆ.

2018ರ ಚುನಾವಣೆಯಲ್ಲಿ ರಾಜಗೋಪಾಲ್ ರೆಡ್ಡಿ ವಿರುದ್ಧ ಸೋತಿದ್ದ ಕೆ.ಪ್ರಭಾಕರ್ ರೆಡ್ಡಿ ಅವರನ್ನು ಆಡಳಿತಾರೂಢ ಟಿಆರ್‌ಎಸ್ ಕಣಕ್ಕಿಳಿಸಿದೆ. ಪ್ರಭಾಕರ ರೆಡ್ಡಿ ಅವರು 2014 ರಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷವು ಮಹಿಳಾ ನಾಯಕಿ ಪಾಲ್ವಾಯಿ ಶ್ರವಂತಿ ಅವರನ್ನು ಕಣಕ್ಕಿಳಿಸಿದೆ.

English summary
State Chief Electoral Officer Vikas Raj said that 298 polling booths have been set up for the Munugode by-election and 2,41,855 voters will vote in the election to be held on November 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X