ತೆಲಂಗಾಣದಲ್ಲಿ ಪ್ರಿನ್ಸಿಪಾಲ್ ಕಾರು ಹರಿದು ವಿದ್ಯಾರ್ಥಿನಿ ಸಾವು
ಜಡ್ಚೆರ್ಲಾ, ಜನವರಿ 2: ತೆಲಂಗಾಣದ ಜಡ್ಚೆರ್ಲಾ ಎಂಬಲ್ಲಿ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಲ್ ಕಾರು ಹರಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಮೃತಳಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಫೆ.1ರಂದು ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ರಮ್ಯಶ್ರೀ ಎಂದು ಗುರುತಿಸಲಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇಲ್ಲಿನ ಅಕ್ಷರ ಸ್ಕೂಲ್ ಪ್ರಿನ್ಸಿಪಾಲ್ ಮುರುಳಿ ಎಂಬುವವರೇ ಈ ಕೃತ್ಯ ಎಸಗಿದ್ದು ಅವರ ವಿರುದ್ಧ ದೂರು ದಾಖಲಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯೂಟರ್ನ್ ತೆಗೆದುಕೊಳ್ಳುವ ಸಮಯದಲ್ಲಿ ಅವರ ಕಾರು ನಿಯಂತ್ರಣ ತಪ್ಪಿದೆ. ಶಾಲೆಯ ಆವರಣದಲ್ಲಿ ನಡೆದುಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಾರು ಹರಿದಿದೆ. ಇದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.













Click it and Unblock the Notifications