Telangana Winners List: ತೆಲಂಗಾಣದಲ್ಲಿ ಕಾಂಗ್ರೆಸ್-ಬಿಜೆಪಿಗೆ ಸಮಬಲ: ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
ಹೈದರಾಬಾದ್, ಜೂನ್ 04: ತೆಲಂಗಾಣ ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಇನ್ನೂ ಮುಂದುವರಿದಿದೆ. ಇಲ್ಲಿನ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಬಿಆರ್‌ಎಸ್ ಮಧ್ಯೆ ತೀವ್ರ ಜಿದ್ದಾಜಿದ್ದಿಗೆ ಬಿದ್ದಿವೆ. ಕೇಂದ್ರ ಚುನಾವಣಾ ಆಯೋಗ (ECI) ಪ್ರಕಾರ, ಈವರೆಗೆ ತೆಲಂಗಾಣದ 17 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನವಾಗಿ ತಲಾ 08 ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಈ ರಾಜ್ಯದ ಸೋಲು-ಗೆಲುವಿನ ಸಂಪೂರ್ಣ ಪಟ್ಟಿ ಇಲ್ಲಿದೆ.
ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡುವಿನ ತೀವ್ರ ಪೈಪೋಟಿ ಕಂಡು ಬಂತು. ಬಳಿಕ ಲತಾ ಅವರ ವಿರುದ್ಧ 3.ಅಸಾದುದ್ದೀನ್ ಓವೈಸಿ ಅವರು 38 ಲಕ್ಷ ಮತಗಳಿಂದ ಮುನ್ನಡೆ ಸಾಧಿಸಿದರು.

ಈ ಭಾಗದಲ್ಲಿ 1989 ರಿಂದ ಎಐಎಂಐಎಂ ಹಿಡಿತ ಸಾಧಿಸಿಕೊಂಡು ಬಂದಿದೆ. ತನ್ನ ಆದ ಇತಿಹಾಸವನ್ನು ಎಐಎಂಐಎಂ ಹೊಂದಿದೆ. ಹೈದರಾಬಾದ್ ಕ್ಷೇತ್ರವು ಕಳೆದ ನಾಲ್ಕು ಚುನಾವಣೆಗಳಿಂದ ಲತಾ ಹಾಗು ಓವೈಸಿ ಮಧ್ಯೆ ತೀವ್ರ ಹಣಾ ಹಣಿಗೆ ಸಾಕ್ಷಿಯಾಗಿದೆ.
ಇನ್ನೂ ಇತರ ಬಿಜೆಪಿ ಅಭ್ಯರ್ಥಿಗಳಾದ ಜಿ.ಕಿಶನ್ ರೆಡ್ಡಿ, ಈಟಾಲ ರಾಜೇಂದರ್ ಮತ್ತು ಸಿಕಂದರಾಬಾದ್, ಮಲ್ಕಾಜ್‌ಗಿರಿ ಮತ್ತು ಕರೀಂನಗರದಿಂದ ಬಂಡಿ ಸಂಜಯ್ ಅವರು ಆಡಳಿತ ಪಕ್ಷ ಕಾಂಗ್ರೆಸ್ ಗಿಂತ ಮುಂದಿದ್ದಾರೆ. ಇಲ್ಲಿ ಎದುರಾಗಳಿ ಕಾಂಗ್ರೆಸ್ ಅಭ್ಯರ್ಥಿಗಳಾದ ರೇವಂತ್ ರೆಡ್ಡಿ ನೇತೃತ್ವದ ಕೆ ಚಂದ್ರಶೇಖರ್ ರಾವ್ ಅವರಿಗಿಂತ ಅತ್ಯಧಿಕ ಮತಗಳ ಅಂತರದಿಂದ ಮುಂದಿದ್ದಾರೆ.
ಇಲ್ಲಿ ಭಾರತ ರಾಷ್ಟ್ರ ಸಮಿತಿ (BRS) 17 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಮುನ್ನಡೆ ಸ್ಥಾನ ಸಾಧಿಸಿ ಮೂರನೇ ಸ್ಥಾನಕ್ಕೆ ಇಳಿದಿದೆ.ಖಮ್ಮಂ ಮತ್ತು ಮಹಬೂಬಾಬಾದ್ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ರೇಸಿನಲ್ಲಿ ಎರಡನೇ ಸ್ಥಾನದಲ್ಲಿದೆ. ಸದ್ಯ BRS ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದ್ದರೆ, ಎಐಎಂಐಎಂ ಪಕ್ಷ ಮತ್ತು BJP ಮತ್ತು ಕಾಂಗ್ರೆಸ್‌ಗಿಂತ ಹಿಂದುಳಿದಿದೆ.
ತೆಲಂಗಾಣ ಲೋಕಸಭೆ: ಸೋಲು- ಗೆಲುವು/ಮುನ್ನಡೆಯ ಪಟ್ಟಿ ಇಲ್ಲಿದೆ
1. ಕರೀಂನಗರ ಕ್ಷೇತ್ರ - ಬಂಡಿ ಸಂಜಯ್ (ಬಿಜೆಪಿ)
2. ನಿಜಾಮಾಬಾದ್ ಕ್ಷೇತ್ರ- ಅರವಿಂದ್ ಧರ್ಮಪುರಿ (ಬಿಜೆಪಿ)
3. ಆದಿಲಾಬಾದ್ ಕ್ಷೇತ್ರ - ಗೊಡಂ ನಾಗೇಶ್ (ಬಿಜೆಪಿ)
4. ಪೆದ್ದಪಲ್ಲಿ ಕ್ಷೇತ್ರ - ಜಿ ವಂಶಿ ಕೃಷ್ಣ (ಕಾಂಗ್ರೆಸ್)
5. ಸಿಕಂದರಾಬಾದ್ ಕ್ಷೇತ್ರ- ಜಿ ಕಿಶನ್ ರೆಡ್ಡಿ (ಬಿಜೆಪಿ)
6. ಚೇವೆಲ್ಲಾ ಕ್ಷೇತ್ರ- ಕೊಂಡ ವಿಶ್ವೇಶ್ವರ್ ರೆಡ್ಡಿ (ಬಿಜೆಪಿ)
7. ಮೇದಕ್ ಕ್ಷೇತ್ರ- ಮಾಧವನೇನಿ ರಘುನಂದನ್ (ಬಿಜೆಪಿ)
8. ಮಲ್ಕಾಜಗಿರಿ ಕ್ಷೇತ್ರ- ಏಟಾಳ ರಾಜೇಂದರ್ (ಬಿಜೆಪಿ)
9. ನಲ್ಗೊಂಡ ಕ್ಷೇತ್ರ- ಸೈದಿರೆಡ್ಡಿ ಶಾನಂಪುಡಿ (ಬಿಜೆಪಿ)
10. ಮಹಬೂಬ್‌ನಗರ ಕ್ಷೇತ್ರ- ಡಿ ಕೆ ಅರುಣಾ (ಬಿಜೆಪಿ)
11. ನಾಗರ್ಕರ್ನೂಲ್ ಕ್ಷೇತ್ರ- ಮಲ್ಲು ರವಿ (ಕಾಂಗ್ರೆಸ್)
12. ವಾರಂಗಲ್ ಕ್ಷೇತ್ರ- ಕಡಿಯಂ ಕಾವ್ಯ (ಕಾಂಗ್ರೆಸ್)
13. ಜಹೀರಾಬಾದ್ ಕ್ಷೇತ್ರ- ಸುರೇಶ್ ಕುಮಾರ್ ಶೇಕರ್ (ಕಾಂಗ್ರೆಸ್)
14. ಭುವನಗಿರಿ ಚಾಮಲ ಕಿರಣ್ ಕುಮಾರ್ (ಕಾಂಗ್ರೆಸ್)
15. ಮಹಬೂಬಾಬಾದ್ ಕ್ಷೇತ್ರ- ಬಲರಾಮ್ ನಾಯಕ್ ಪೋರಿಕ (ಕಾಂಗ್ರೆಸ್)
16. ಖಮ್ಮಂ ಕ್ಷೇತ್ರ- ರಾಮಸಹಾಯಂ ರಘುರಾಮ ರೆಡ್ಡಿ (ಕಾಂಗ್ರೆಸ್)
17. ಹೈದರಾಬಾದ್ ಕ್ಷೇತ್ರ- ಅಸಾದುದ್ದೀನ್ ಓವೈಸಿ (AIMIM)
ಅಸ್ಸಾವುದ್ಧಿನ್ ಓವೈಸಿ ಹೈದರಾಬಾದ್ ಕ್ಷೇತ್ರದಲ್ಲಿ ಅನೇಕ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇಲ್ಲಿ ಎಐಎಂಐಎಂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ಸ್ಥಳೀಯ ಪಕ್ಷ ಇಲ್ಲಿ ನಿರಂತರವಾಗಿ ರಾಷ್ಟ್ರೀಯ ಪಕ್ಷಗಳಿಗೆ ಸವಾಲು ಒಡ್ಡುತ್ತಾ ಬಂದಿದೆ.












Click it and Unblock the Notifications