Get Updates
Get notified of breaking news, exclusive insights, and must-see stories!

Telangana: ಅತ್ಯಂತ ಕೆಳಮಟ್ಟಕ್ಕಿಳಿದ ನಾಯಕರ ಪ್ರಚಾರ- ಕೊಳಕು, ನಿಂದನೆ, ಆಕ್ಷೇಪಾರ್ಹ ಹೇಳಿಕೆಗಳಿಗೆ ಸಾಕ್ಷಿಯಾದ ತೆಲಂಗಾಣ ಚುನಾವಣೆ

ಬೆಂಗಳೂರು, ನವೆಂಬರ್ 24: ತೆಲಂಗಾಣದಲ್ಲಿ ಭರ್ಜರಿ ಪ್ರಚಾರ, ಸಮಾವೇಶ ನಡೆದು ಇದೀಗ ಮತದಾನವನ್ನು ಎಲ್ಲ ಪಕ್ಷಗಳು ಎದುರು ನೋಡುತ್ತಿವೆ. ಇದುವರೆಗಿನ ಪ್ರಚಾರ ಕಾರ್ಯಗಳಲ್ಲಿ ಪ್ರಮುಖ ಪಕ್ಷಗಳ ಕೆಲವು ನಾಯಕರು ಅಸಭ್ಯ, ಆಕ್ಷೇಪಾರ್ಹ ಹೇಳಿಕೆಗಳನ್ನು ಬಳಸಿದ್ದಾರೆ. ಎದುರಾಳಿ ವಿರುದ್ಧ ಕೆಳಮಟ್ಟದ ಟೀಕೆಗಳನ್ನು ಮಾಡಿದ್ದಾರೆ. ಈ ಪೈಕಿ ಒಂದಷ್ಟು ಪ್ರಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸಹ ಹರಿದಾಡಿವೆ.

ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಈ ಬಾರಿ ಪ್ರಮುಖ ಪಕ್ಷಗಳ ಕೆಲವು ನಾಯಕರು ಸಮೂಹಿಕ ಮತದಾರರನ್ನು ಸಂಪರ್ಕಿಸಿದಾಗ ಕೊಳಕು ಮತ್ತು ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ. ವಿರೋಧಿಗಳನ್ನು ಮಾತಿನಲ್ಲೇ ಹಣಿಯುವ ಸಂದರ್ಭದಲ್ಲಿ, ಪರಸ್ಪರ ಎದುರಾಳಿ ವಿರುದ್ಧ ಪ್ರಚಾರದಲ್ಲಿ ಕೆಳಮಟ್ಟಿಗೆ ಇಳಿದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

Telangana Election Witnessed Campaigning Lowest Level Leaders With Filth,Abuse, Objects Statements

ಚುನಾವಣೆ ಪ್ರಚಾರದ ಅಭಿಯಾನ, ಸಮಾವೇಶಗಳಲ್ಲಿ ಸತ್ಯಕ್ಕೆ ದೂರವಾದ ಮಾತುಗಳನ್ನು ಆಡಿ ಜನರನ್ನು ನಂಬಿಸುವ ಪ್ರಯತ್ನ ಮಾಡಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸುಳ್ಳು, ಅಸಭ್ಯ ಪದ ಬಳಸುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಮತದಾರರು ಮಾತ್ರವಲ್ಲದೆ, ಪಕ್ಷದ ಪ್ರಣಾಳಿಕೆಗಳ ಕೆಲ ಅಂಶಗಳು ಗೊಂದಲಕ್ಕೆ ನೂಕಿವೆ. ಎದುರಾಳಿ ಪಕ್ಷದ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವೀಡಿಯೊಗಳು ಹರಿಬಿಟ್ಟ ಉದಾಹರಣಗಳು ಕಂಡು ಬಂದಿವೆ.

ಕಾರ್ಯಸಾಧನೆ ಮೂಲಕ ಬಿಆರ್‌ಎಸ್ ಪ್ರಚಾರ

ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (BRS) ಪ್ರದರ್ಶಿಸಿದ ವಿಧಾನ ಮತ್ತು ವರ್ತನೆಗೆ ತಕ್ಕ ಮಟ್ಟಿಗೆ ಉತ್ತಮವಾಗಿದೆ. ಈ ಚುನಾವಣೆಯಲ್ಲಿ ನಿರ್ದಿಷ್ಟವಾಗಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರ್ಯಾಲಿಗಳಲ್ಲಿ ಕೆಲವು ನಾಯಕರು ಪದಗಳ ಆಯ್ಕೆ, ಸಭ್ಯತೆಯ ಎಲ್ಲ ಮಿತಿಗಳನ್ನು ದಾಟಿವೆ. ಮೂರು-ನಾಲ್ಕು ಪ್ರಮುಖ ಪಕ್ಷಗಳ ಪ್ರಚಾರ ರೀತಿ ನೋಡಿದರೆ ಅದರಲ್ಲಿ ಇಂತಹ ಕೀಳುಮಟ್ಟದ ಪ್ರಚಾರ, ಭಾಷೆ ಬಳಕೆ, ವ್ಯತ್ಯಾಸ ಅರಿವಿಗೆ ಬರುತ್ತದೆ.

ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರು ವಿರೋಧಿಗಳನ್ನು ಬಗ್ಗು ಬಡಿಯಲು ವಿಲಕ್ಷಣ ವಿಧಾನ ಬಳಸಿದ್ದಾರೆ. ಆದರೂ ಅವರು ತಮ್ಮ ಪ್ರತಿ ರ್ಯಾಲಿಗಳಲ್ಲಿ ಬಿಆರ್‌ಎಸ್ ಸರ್ಕಾರ 2014 ರಿಂದ ಏನು ಮಾಡಿದೆ. ಅಭಿವೃದ್ಧಿ ದೂರದೃಷ್ಟಿ, ಭವಿಷ್ಯದ ಗುರಿ ಉದ್ದೇಶಗಳು ಜೊತೆ ಜನರ ಮುಂದೆ ಹೋಗಿರುವುದು ವಿಶೇಷ.

Telangana Election Witnessed Campaigning Lowest Level Leaders With Filth,Abuse, Objects Statements

ವಿರೋಧಿಗಳ ವಿರುದ್ಧ ಕಟುವಾದ ಶಬ್ದ ಬಳಸುವ ಬದಲಾಗಿ ರಾಜ್ಯದಲ್ಲಿ ಬಿಆರ್‌ಎಸ್ ಸಾಧನೆ ಏನು? ಎಂಬದುನ್ನು ಜನರಿಗೆ ಬಿಆರ್‌ಎಸ್ ಹಿರಿಯ ನಾಯಕ ಬಿ.ವಿನೋದ್ ಕುಮಾರ್ ವಿವರಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಅಸಭ್ಯ ಮತ್ತು ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ. ಅವರು ಈ ಹಿಂದೆ ರಾಜ್ಯಕ್ಕಾಗಿ ಏನು ಮಾಡಿದ್ದರು ಎಂಬುದರ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ.

ಸಾಮಾಜಿಕ ಜಾಲತಾಣ ಬಗ್ಗೆ ಕೆಟಿಆರ್ ಎಚ್ಚರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊವೊಂದು ಓಡಾಡಿತ್ತು. ಈ ಸಂಬಂಧ ಬಿಆರ್‌ಎಸ್ ಕಾರ್ಯಾಧ್ಯಕ್ಷ ಸಿರ್ಸಿಲ್ಲಾದಿಂದ ನಾಲ್ಕನೇ ಅವಧಿಗೆ ಚುನಾವಣೆಗೆ ಸ್ಪರ್ಧಿಸಿರುವ ಕೆ.ಟಿ. ರಾಮರಾವ್ ಅವರು ಪಕ್ಷದ ಕಾರ್ಯಕರ್ತರಿಗೆ, ವಿಶೇಷವಾಗಿ ನೆಟ್ಟಿಗರ ಕುರಿತು ಎಚ್ಚರಿಕೆ ನೀಡಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅನೇಕ ಸುಳ್ಳು ಮತ್ತು ಆಳವಾದ ನಕಲಿ ವೀಡಿಯೊಗಳು ಪ್ರಚಾರದ ಭಾಗವಾಗಿ ಹರಿದಾಡಲಿವೆ. ಯಾವುದೇ ಕಾರಣಕ್ಕೂ ಮತದಾರರು ಇಂತವುಗಳ ಬಲೆಗೆ ಬೀಳಬಾರದು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಪ್ರತಿಸ್ಪರ್ಧಿ ಪಕ್ಷಗಳು ಬಿಆರ್‌ಎಸ್ ಪ್ರಣಾಳಿಕೆಯಲ್ಲಿನ ಯೋಜನೆಗಳು, ಪ್ರಚಾರದ ಅಂಶಗಳನ್ನು ನಕಲು ಮಾಡಿವೆ ಎಂದು ಪಕ್ಷದ ಮತ್ತೋರ್ವ ಹಿರಿಯ ನಾಯಕ ಟಿ.ಹರೀಶ್ ರಾವ್ ಆರೋಪಿಸಿದರು. ಬಿಆರ್‌ಎಸ್ ಸರ್ಕಾರ ಪರಿಚಯಿಸಿದ ಅನೇಕ ಯೋಜನೆಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದೆ ಎಂದು ಅವರು ಹೇಳಿದ್ದರು.

ಸದ್ಯ ತೆಲಂಗಾಣ ಜೊತೆಗೆ ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ್, ಮಧ್ಯಪ್ರದೇಶಗಳಲ್ಲಿ ಅಬ್ಬರದ ಚುನಾವಣೆ ನಡೆಯಲಿವೆ. ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಈ ಐದು ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+