Jan Ki Baat Telangana Exit Poll 2023: ಕಾಂಗ್ರೆಸ್ ಮುಂದೆ ಬಿಆರ್‌ಎಸ್‌ಗೆ ನಿರಾಸೆ, 'ಕೈ' 64 ಸ್ಥಾನ-ಅಧಿಕಾರ
ನವದೆಹಲಿ, ನವೆಂಬರ್ 30: ತೆಲಂಗಾಣದಲ್ಲಿ ಅಂದುಕೊಂಡಂತೆ ಮತದಾನ ನಡೆದಿದ್ದು, ಬಿಆರ್‌ಎಸ್, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಚುನಾವಣೆ ಫಲಿತಾಂಶ ಡಿಸೆಂಬರ್ 3ರ ದಿನಕ್ಕಾಗಿ ಕಾಯುತ್ತಿದೆ. ಅಂದು ಬೆಳಗ್ಗೆ ಮತ ಎಣಿಕೆ ಆರಂಭವಾಗಿ ಸಂಜೆ ರಾಜ್ಯ ಯಾರ ಪಾಲಾಗಲಿದೆ ಎಂಬುದು ತಿಳಿದು ಬರಲಿದೆ. ಅದಕ್ಕೂ ಮೊದಲು ಗುರುವಾರ ಜನ್ ಕಿ ಬಾತ್' ಸಂಸ್ಥೆಯಿಂದ ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಿದೆ.
ಜನ ಕಿ ಬಾತ್ ಪ್ರಕಾರ, ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ 48-64 ಸೀಟುಗಳನ್ನು ಗೆಲ್ಲುವ ಮೂಲಕ ಬಿಆರ್ಎಸ್ ಮಣಿಸಲಿದೆ ಎಂದು ತಿಳಿಸಿದೆ. ಇನ್ನೂ ಬಿಆರ್‌ಎಸ್ ಗೆ ಈ ಬಾರಿ 40-45 ಸ್ಥಾನ, ಬಿಜೆಪಿಗೆ ಕೇವಲ 7-13 ಸ್ಥಾನ, AIMIM ಪಕ್ಷಕ್ಕೆ 4-7 ಸೀಟುಗಳು ಲಭಿಸಿವೆ. ಇತರೆ ಪಕ್ಷಗಳಿಗೆ ಸೀಟು ಶೂನ್ಯ ಎಂದು ತಿಳಿಸಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿಆರ್ಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪ್ರಣಾಳಿಕೆಯಲ್ಲಿ ತನ್ನ ಆರು ಗ್ಯಾರಂಟಿಗಳಿಂದ ಕಾಂಗ್ರೆಸ್ ರಾಜ್ಯದ ತುಂಬಾ ಸುದ್ದು ಮಾಡುವ ಮೂಲಕ ಬಿಆರ್‌ಎಸ್‌ಗೆ ಠಕ್ಕರ್ ಕೊಟ್ಟಿದೆ.
ಕೈ ಹಿಡಿಯಲಿದೆಯೇ ಭಾವನಾತ್ಮಕ ಭಾಷಣ?
ಅಲ್ಲದೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಚುನಾವಣೆ ದಿನಾಂಕ ಘೋಷಣೆ ಆಗುವ ಮೊದಲೇ ಭೇಟಿ ನೀಡಿದ್ದರು. ತೆಲಂಗಾಣ ರಾಜ್ಯ ರಚನೆ ಸಂದರ್ಭದಲ್ಲಿ ಕಾಂಗ್ರೆಸ್ ಪಾತ್ರದ ಕುರಿತು ಅವರು ಭಾವನಾತ್ಮಕವಾಗಿ ಮತದಾರರನ್ನು ಸೆಳೆಯಲು ಯತ್ನಿಸಿದ್ದರು. ಅಭಿವೃದ್ಧಿ ದೂರದೃಷ್ಟಿ, ಹೊಸ ಬದಲಾವಣೆ ತರುವ ಕುರಿತು ಭಾಷಣ ಮಾಡಿದ್ದರು.
ಇದಕ್ಕೆ ಪೂರಕವಾಗಿ ಅನೇಕ ಬಿಆರ್‌ಎಸ್ ನಾಯಕರು ಈ ಬಾರಿ ಕಾಂಗ್ರೆಸ್ ನತ್ತು ಮುಖಮಾಡಿದ್ದರು. ಇದು ಸಹ ಬಿಆರ್ಎಸ್‌ನಲ್ಲಿ ನಡುಕು ಹುಟ್ಟಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗಿದೆ.
ಇತ್ತ ಬಿಜೆಪಿ ಕೇಂದ್ರದ ನಾಯಕರನ್ನು ಅವಲಂಬಿಸಿಯೇ ಚುನಾವಣಾ ಪ್ರಚಾರ ಆರಂಭಿಸಿತು. ಕಾಂಗ್ರೆಸ್ ಮಾದರಿಗಳು ಕರ್ನಾಟಕದಲ್ಲಿ ವಿಫಲವಾಗಿವೆ ಎಂದು ಟೀಕಿಸಿತು. ಬಿಆರ್‌ಎಸ್ ಕಳೆದ ಎರಡು ಬಾರಿಯ ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸಿದೆ. ಕಾಂಗ್ರೆಸ್ ಬಗ್ಗು ಬಡಿಯುವುದಾಗಿ, ಮೂರು ಭಾರಿ ಅಧಿಕಾರ ಹಿಡಿಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ












Click it and Unblock the Notifications