ಪುರುಷತ್ವ ಪರೀಕ್ಷೆಯಲ್ಲಿ ತೇಜಪಾಲ್ ಪಾಸ್
ಪಣಜಿ, ಡಿ.3: ತೆಹೆಲ್ಕಾ ಸಂಸ್ಥೆಯ ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಬಂಧನಕ್ಕೊಳಗಾಗಿರುವ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜಪಾಲ್ ಅವರ ಪುರುಷತ್ವ ಪರೀಕ್ಷೆಯನ್ನು ಸೋಮವಾರ ನಡೆಸಲಾಗಿದೆ. ಗೋವಾ ಮೆಡಿಕಲ್ ಕಾಲೇಜಿನಲ್ಲಿ ಡಿಎನ್ಎ ಹಾಗೂ ಪುರುಷತ್ವ ಪರೀಕ್ಷೆ ನಡೆಸಲಾಗಿದ್ದು, 'ಪಾಸಿಟಿವ್' ಎಂದು ಫಲಿತಾಂಶ ಬಂದಿದೆ ಎಂದು ತಿಳಿದು ಬಂದಿದೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗಳನ್ನು ಕಡ್ಡಾಯವಾಗಿ ಪುರುಷತ್ವ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 50 ವರ್ಷ ವಯಸ್ಸಿನ ತೇಜಪಾಲ್ ರನ್ನು ಪೊಲೀಸರು ಮೆಡಿಕಲ್ ಕಾಲೇಜಿಗೆ ಕರೆತಂದಿದ್ದರು. ಸುಮಾರು 5 ಗಂಟೆಗಳ ಕಾಲ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಇದಲ್ಲದೆ, ಕಾಲೇಜಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮತ್ತಿತರ ಪರೀಕ್ಷೆಗೂ ಅವರನ್ನು ಒಳಪಡಿಸಲಾಯಿತು ಎಂದು ಕಾಲೇಜಿನ ಡೀನ್ ವಿ.ಎನ್.ಜಿಂದಾಲ್ ತಿಳಿಸಿದ್ದಾರೆ.

ಇದೇ ವೇಳೆ, ಪೊಲೀಸರು ತೇಜ್ಪಾಲ್ರನ್ನು ಘಟನೆ ನಡೆದ ಪ್ರದೇಶ(ಹೋಟೆಲ್ ಹಯಾತ್) ಕ್ಕೆ ಕರೆದೊಯ್ದಿದ್ದಾರೆ. ಥಿಂಕ್ ಫೆಸ್ಟಿವಲ್ ವೇಳೆ ನವೆಂಬರ್ 7 ಹಾಗೂ 8 ರ ನಡುವೆ ಹೊಟೇಲ್ ಲಿಫ್ಟ್ ನಲ್ಲಿ ತೇಜ್ಪಾಲ್ ಲೈಂಗಿಕ ಕಿರುಕುಳ ನೀಡಿದ್ದಾಗಿ ಯುವ ಪತ್ರಕರ್ತೆ ಆರೋಪಿಸಿದ್ದಳು. ಭಾನುವಾರವಷ್ಟೇ ಕ್ರೈಂ ಬ್ರಾಂಚ್ ಅಧಿಕಾರಿಗಳು ತೇಜ್ಪಾಲ್ ರನ್ನು ಸುಮಾರು 5 ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಿದ್ದರು.
ಪೊಲೀಸ್ ಕಸ್ಟಡಿಯ ಮೊದಲ ದಿನ ಇಬ್ಬರು ಕೊಲೆ ಆರೋಪಿಗಳೊಂದಿಗೆ ಲಾಕಪ್ ಹಂಚಿಕೊಂಡಿದ್ದ ತೇಜ್ಪಾಲ್ ಅವರು ಎರಡನೇ ರಾತ್ರಿಯನ್ನು ಕಳ್ಳ ಬೇಟೆಗಾರರೊಂದಿಗೆ ಕಳೆದಿದ್ದಾರೆ. ತೇಜಪಾಲ್ ಅವರ ಮೇಲೆ ಐಪಿಸಿ ಸೆಕ್ಷನ್ 354 ಎ, 376(2) (ಕೆ) ಅನ್ವಯ ಪ್ರಕರಣ ದಾಖಲಾಗಿದೆ.
6 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರಬೇಕಾಗಿರುವ ತೇಜಪಾಲ್ ಕಣ್ಣೀರಿಟ್ಟಿದ್ದಾರೆ. ಪ್ರಕರಣದ Investigation Officer ಆಗಿ 45 ವರ್ಷದ ಸುನೀತಾ ಸಾವಂತ್ ಎಂಬ ಖಡಕ್ ಮಹಿಳಾ ಆಧಿಕಾರಿ ನಿಯುಕ್ತಿಗೊಂಡಿದ್ದಾರೆ. ತೇಜಪಾಲ್ ಅವರ ಲೈಂಗಿಕ ಸಾಮರ್ಥ್ಯತೆ ಪರೀಕ್ಷೆ ಬಗ್ಗೆ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್ ಇನ್ನಿತರ ವಿವರ ಇಲ್ಲಿ ಓದಿ. (ಪಿಟಿಐ)











Click it and Unblock the Notifications