Get Updates
Get notified of breaking news, exclusive insights, and must-see stories!

ಮತ್ತೆ ಎಡವಿದ ತೆಹಲ್ಕಾ 'ತರುಣ'ನ ಕೈಗೆ ಭಗವದ್ಗೀತೆ!

Tehelka Sexual Harassment - Editor Tarun Tejpal calls it a consensual encounter
ಪಣಜಿ, ಡಿ.5- ಕಿರಿ ಸಹೋದ್ಯೋಗಿ ಜತೆ ಲಿಫ್ಟಿನಲ್ಲಿ ಎಡವಿದ್ದ ತೆಹೆಲ್ಕಾ ಕಾಮಕಾಂಡದ ಆರೋಪಿ ತೇಜಪಾಲ್, ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಧಾವಂತದಲ್ಲಿ ಮತ್ತೆ ಎಡವಿದ್ದಾರೆ. ತಾನು ಮಾಡಿದ್ದು ತಪ್ಪು ಎಂಬ ಪರಿವೆಯೇ ಇಲ್ಲದೆ 'ಅದಕ್ಕೆ' ಆ ಯುವ ಪತ್ರಕರ್ತೆಯ ಸಹಮತವಿತ್ತು. ಹಾಗಾಗಿ ನಾನು 'ಹಾಗೆಲ್ಲಾ ನಡೆದುಕೊಂಡೆ' ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ...

'ತಮ್ಮಿಬ್ಬರದೂ ಸಹಮತದ ಕ್ರಿಯೆ. ಅದು ಆರೋಗ್ಯಕರ ಪ್ರಣಯಚೇಷ್ಟೆಯ ಕ್ರಿಯೆಯಾಗಿತ್ತು. ಇದರಿಂದಾಗಿ ಯುವತಿಯೂ ಹಿರಿಹಿರಿ ಹಿಗ್ಗಿದ್ದಳು. ಅಂಥದ್ದರಲ್ಲಿ ನನ್ನದೇನೂ ತಪ್ಪಿಲ್ಲ' ಎಂದು ಆರೋಪಿ ತೇಜಪಾಲ್ ಹೇಳಿಕೊಂಡಿದ್ದಾರೆ ಎಂದು ಗೋವಾ ಕ್ರೈಂ ಬ್ರಾಂಚ್ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಮೊದಲು 'ತನ್ನಿಂದ ತಪ್ಪಾಗಿದೆ' ಎಂದು ಹೇಳಿಕೆ ನೀಡಿದ್ದ ತೇಜಪಾಲ್‌ ನಂತರ ಅದು 'ಸಹಮತದ ಕ್ರಿಯೆ' ಎಂದು ಪತ್ರಿಕಾ ಹೇಳಿಕೆ ನೀಡಿ ನಿಲುವು ಬದಲಿಸಿದ್ದರು. ಈಗ ಬಂಧನದ ನಂತರವೂ ತೇಜಪಾಲ್ ತಮ್ಮ ಬದಲಾದ ನಿಲುವನ್ನೇ ಮುಂದುವರಿಸಿದ್ದಾರೆ. ಇದರೊಂದಿಗೆ ತಾವು ಮಾಡಿರುವ ಗಂಭೀರವಾದ ಅಪರಾಧವನ್ನು ಪೊಲೀಸರ ಮುಂದೆ ದಾಖಲಾರ್ಹ ರೀತಿಯಲ್ಲಿ ಒಪ್ಪಿಕೊಳ್ಳುವ ಮೂಲಕ ತಮಗೆ ತಾವೇ ಮುಳುಗುನೀರು ತಂದುಕೊಂಡಿದ್ದಾರೆ.

23ರ ಹರೆಯದ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ 50 ವರ್ಷದ ತೇಜಪಾಲರನ್ನು ಬಾಂಬೋಲಿಂನ ಗ್ರ್ಯಾಂಡ್‌ ಹಯಾತ್‌ ಪಂಚತಾರಾ ಹೋಟೆಲಿಗೆ ಮಂಗಳವಾರ ಕರೆದೊಯ್ದ ಪೊಲೀಸರು, ಘಟನೆಯ ಮರುಸೃಷ್ಟಿ ಮಾಡಿದರು. ತೇಜ್‌ಪಾಲ್‌ ಭಾನುವಾರದಿಂದ 6 ದಿನಗಳ ಕಾಲ ಪೊಲೀಸ್‌ ವಶದಲ್ಲಿದ್ದಾರೆ. ಸೋಮವಾರ ಅವರು ಪುರುಷತ್ವ ಪರೀಕ್ಷೆಯಲ್ಲಿ ಪಾಸಾಗಿದ್ದರು. ಈ ಮಧ್ಯೆ, ಬುಧವಾರ ತೇಜಪಾಲರನ್ನು 2ನೇ ಸುತ್ತಿನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು, ತಾವಿರುವ ಜೈಲು ಕೋಣೆಗೆ ಫ್ಯಾನ್‌ ಹಾಕಿಸಿಕೊಡಿ ಎಂದು ತೇಜ್‌ಪಾಲ್‌ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ.

ತರುಣ್‌ ತೇಜಪಾಲ್‌ ನಡೆಸಿದ್ದಾರೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿಕೆ ಸಲ್ಲಿಸುವಂತೆ ಸೂಚಿಸಿ, ತೆಹೆಲ್ಕಾ ಪತ್ರಿಕೆಯ ಮಾಜಿ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧುರಿ ಹಾಗೂ ಇತರೆ ಮೂವರಿಗೆ ಸಮನ್ಸ್‌ ಜಾರಿ ಮಾಡಿದ್ದಾರೆ.

ತೇಜಪಾಲ್ ಕೈಗೆ ಶ್ರೀರಾಮ ಸೇನೆಯಿಂದ ಭಗವದ್ಗೀತೆ !:
ಈ ಮಧ್ಯೆ, ತೆಹೆಲ್ಕಾ ಕಾಮಕಾಂಡದ ತೇಜಪಾಲರಿಗೆ ಕರ್ನಾಟಕದ ಶ್ರೀರಾಮ ಸೇನೆ ಸಂಘಟನೆ ವಿನೂತನ ಕೊಡುಗೆ ನೀಡಿದೆ. ಕಾಮಕಾಂಡದ ನಂತರ ತೇಜಪಾಲರ ಮಾನಸಿಕ ನಡುವಳಿಕೆ ಮತ್ತು ನೈತಿಕತೆಯನ್ನು ಬದಲಾಯಿಸಲು ನೆರವಾಗುವಂತೆ ಭಗವದ್ಗೀತೆ ಪುಸ್ತಕವನ್ನು ನೀಡಿದೆ. ಗೋವಾದ ಜೈಲು ಅಧಿಕಾರಿಗಳನ್ನು ಭೇಟಿ ಮಾಡಿದ ಶ್ರೀರಾಮ ಸೇನೆ ಕಾರ್ಯಕರ್ತರು ಭಗವದ್ಗೀತೆ ಪುಸ್ತಕವನ್ನು ಅಧಿಕಾರಿಗಳ ಕೈಗಿತ್ತು ಅದನ್ನು ತೇಜಪಾಲರಿಗೆ ಹಸ್ತಾಂತರಿಸುವಂತೆ ಕೋರಿದ್ದಾರೆ. ದಂಗೆಯೊಂದನ್ನು ಆಯೋಜಿಸಲು ಶ್ರೀರಾಮ ಸೇನೆ ಹಣ ಕೇಳಿದೆ ಎಂದು ತೆಹಲ್ಕಾ ಪತ್ರಿಕೆ 2010ರಲ್ಲಿ ವರದಿ ಮಾಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+