• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತ್ತವರಿಗೂ ಸಿಗುತ್ತೆ ಸಂಬಳ, ಟಾಟಾ ಸಂಸ್ಥೆ ಮತ್ತೊಮ್ಮೆ ಮಾದರಿ

|

ಉದ್ಯೋಗಿಗಳಿಗೆ ಸಕಲ ಸೌಲಭ್ಯವನ್ನು ಒದಗಿಸುವ ಟಾಟಾ ಸಂಸ್ಥೆ, ನೌಕರರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತೆ. ಹೀಗಾಗಿಯೇ ಟಾಟಾ ಎಂದರೆ ಜಗತ್ತಿನಾದ್ಯಂತ ಹೆಸರುವಾಸಿ. ಅದ್ರಲ್ಲೂ ಕೊರೊನಾ ಕಂಟಕದ ಸಂದರ್ಭದಲ್ಲಿ ಟಾಟಾ ಸಂಸ್ಥೆ ಇಂತಹದ್ದೇ ಜನಮೆಚ್ಚುವ ನಿರ್ಧಾರ ಕೈಗೊಂಡಿದೆ. ಜೆಮ್​ಶೆಡ್​ಪುರದ ಉಕ್ಕು ಅಥವಾ ಸ್ಟೀಲ್​ ತಯಾರಿಕಾ ಘಟಕ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಟಾಟಾ ಸಂಸ್ಥೆಯ ಈ ಘಟಕದಲ್ಲಿ ಕಂಪನಿಯ ಯಾವುದೇ ಉದ್ಯೋಗಿ ಕೊರೊನಾ​ ಸೋಂಕಿಗೆ ಬಲಿಯಾದ್ರೆ ಮೃತಪಟ್ಟ ಉದ್ಯೋಗಿಗೆ ನೀಡುತ್ತಿದ್ದ ಸಂಬಳವನ್ನ ಅವರ ಕುಟುಂಬಕ್ಕೆ ನೀಡಲಿದೆ ಟಾಟಾ ಸಂಸ್ಥೆ. ಹೀಗೆ ನೌಕರ ಮೃತಪಟ್ಟರೂ ಆತನ ಸಂಬಳ ಆತನ ಕುಟುಂಬದ ಕೈಸೇರುವಂತೆ ಮಾಡಲು ಟಾಟಾ ಸ್ಟೀಲ್​ ಮಹತ್ವ ನಿರ್ಧಾರವನ್ನು ಕೈಗೊಂಡಿದೆ.

ಮೃತಪಟ್ಟ ವ್ಯಕ್ತಿಗೆ 60 ವರ್ಷ ತುಂಬುವವರೆಗೂ ಈ ವೇತನ ಸಿಗಲಿದ್ದು, ಮೃತನ ವಯಸ್ಸು ಹುಟ್ಟಿದ ದಿನಾಂಕದ ಆಧಾರದಲ್ಲಿ 60ನ್ನು ದಾಟಿದ ನಂತರ ಆತನ ಕುಟುಂಬಕ್ಕೆ ನೀಡುತ್ತಿದ್ದ ಸಂಬಳ ನಿಲ್ಲಿಸಲಾಗುತ್ತದೆ.

ಮಕ್ಕಳ ಶಿಕ್ಷಣಕ್ಕೂ ಸಹಾಯ
ತನ್ನ ಸಂಸ್ಥೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುವ ಉದ್ಯೋಗಿಗಳಿಗೆ ಸಂಬಳ ಸೌಲಭ್ಯದ ಜೊತೆಯಲ್ಲೇ, ಕುಟುಂಬದ ಮಕ್ಕಳ ಶಿಕ್ಷಣ ವೆಚ್ಚವನ್ನೂ ಟಾಟಾ ಸ್ಟೀಲ್​ ನೋಡಿಕೊಳ್ಳಲಿದೆ. ಈ ಮೂಲಕ ಸಂಬಳದ ಜೊತೆಗೆ ಮಕ್ಕಳ ಶಿಕ್ಷಣದ ವೆಚ್ಚವನ್ನೂ ಟಾಟಾ ಸ್ಟೀಲ್​ ಭರಿಸಲಿದೆ. ಆದ್ರೆ ಮೃತರ ಸಂಬಳದಲ್ಲಿ ಯಾವುದೇ ಏರಿಕೆಯನ್ನು ಮಾಡುವುದಿಲ್ಲ, ಅವರು ಮೃತಪಟ್ಟ ಸಂದರ್ಭದಲ್ಲಿದ್ದ ಸಂಬಳವನ್ನೇ ನೀಡಲಿದೆ ಟಾಟಾ ಸ್ಟೀಲ್. ಟಾಟಾ ಸಂಸ್ಥೆ ಕೈಗೊಂಡಿರುವ ನಿರ್ಧಾರ ಕಾರ್ಪೊರೇಟ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಇತರರಿಗೂ ಮಾದರಿಯಾಗಿದೆ.

ಸಾಮಾಜಿಕ ಭದ್ರತಾ ಯೋಜನೆ..!
ಇನ್ನು ಮೃತ ಸಿಬ್ಬಂದಿಯ ವೇತನವನ್ನು ಸಾಮಾಜಿಕ ಭದ್ರತಾ ಯೋಜನೆಯಡಿ ಕಂಪನಿ ನೀಡಲಿದೆ. ಭಾರತದ ಉಕ್ಕು ಉತ್ಪಾದನಾ ವಲಯದಲ್ಲಿ ಟಾಟಾ ಸಂಸ್ಥೆ ಮುಂದಿದೆ. ಅದರಲ್ಲೂ ಜಾರ್ಖಂಡ್‌ನ ಜೆಮ್​ಶೆಡ್​ಪುರದಲ್ಲಿ ಟಾಟಾ ಸಂಸ್ಥೆ ಸ್ಥಾಪಿಸಿರುವ ಸ್ಟೀಲ್ ತಯಾರಿಕಾ ಘಟಕ ಸಾಕಷ್ಟು ಹೆಸರು ಗಳಿಸಿದೆ. ಈ ನಡುವೆ ನೌಕರರ ಪರ ಟಾಟಾ ಸಂಸ್ಥೆ ತೋರುವ ಕಾಳಜಿಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. ಕೊವಿಡ್ ಸೋಂಕಿಗೆ ಬಲಿಯಾಗುವ ತನ್ನ ಉದ್ಯೋಗಿ ಕುಟುಂಬಕ್ಕೆ ಸಂಬಳದ ಜೊತೆ ವೈದ್ಯಕೀಯ ಅನುಕೂಲ ಮತ್ತು ವಸತಿ ಸೌಲಭ್ಯವನ್ನೂ ಕಲ್ಪಿಸಲಿದೆ ಟಾಟಾ ಸ್ಟೀಲ್.

ಅಮೆರಿಕದಂತೆ ಭಾರತದಲ್ಲೂ ಆತಂಕ..?
ವಿಶ್ವದ ದೊಡ್ಡಣ್ಣ ಎಂಬ ಪಟ್ಟ ಕಟ್ಟಿಕೊಂಡಿದ್ದ ಅಮೆರಿಕ ಕೊರೊನಾ ಅಲೆಯಲ್ಲಿ ನಲುಗಿ ಹೋಗಿದೆ. ಆದರೆ ಈಗಿನ ಸ್ಥಿತಿಗತಿ ನೋಡಿದರೆ ಭಾರತದಲ್ಲೂ ಅಮೆರಿಕ ರೀತಿಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೀಗಾಗಿ ಜಗತ್ತಿನಾದ್ಯಂತ ಭಾರತದ ಕೊರೊನಾ ಪರಿಸ್ಥಿತಿ ಕಂಡು ಕಳವಳ ವ್ಯಕ್ತವಾಗಿದೆ. ಹೀಗಾಗಿ ಸಾಕಷ್ಟು ಉದ್ಯೋಗಿಗಳು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಕೆಲವೇ ಕೆಲವು ಸಂಸ್ಥೆಗಳು ಮಾತ್ರ ತಮ್ಮ ಮೃತ ಉದ್ಯೋಗಿಗಳ ಕುಟುಂಬಕ್ಕೆ ನೆರವಾಗುತ್ತಿವೆ. ಈ ಸಾಲಿನಲ್ಲಿ ಟಾಟಾ ಸಂಸ್ಥೆ ಮುಂಚೂಣಿಯಲ್ಲಿದೆ.

English summary
TATA steel decided to compensate the employee’s family, who die due to the Corona.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X