Tata Aeris: ₹5.29 ಲಕ್ಷಕ್ಕೆ ಟಾಟಾ ಹೊಸ ಸೆಡಾನ್; 6 ಏರ್‌ಬ್ಯಾಗ್, ಸಖತ್ ಫೀಚರ್ಸ್! ಆದ್ರೂ ಗ್ರಾಹಕರ ಅಸಮಾಧಾನ
Tata Aeris: ದೇಶಾದ್ಯಂತ ಆಟೊಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ, ಉತ್ಪನ್ನಗಳಲ್ಲಿ ತನ್ನದೇ ಆದ ಗುಣಮಟ್ಟ ಕಾಯ್ದುಕೊಂಡು ಕಡಿಮೆ ಬೆಲೆಯಲ್ಲಿ ಸುರಕ್ಷತೆ ನೀಡುತ್ತಿರುವ ಗ್ರಾಹಕರ ನೆಚ್ಚಿನ ಟಾಟಾ ಕಂಪನಿಯು ಇತ್ತೀಚೆಗೆ ಹೊಸ ಸೆಡಾನ್ ಕಾರೊಂದನ್ನು ಬಿಡುಗಡೆ ಮಾಡಿದೆ. ಅದರ ಹೆಸರು 'ಟಾಟಾ ಏರಿಸ್' (Tata Aeris). ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕೈಗೆಟುಕುವ ಬೆಲೆಗೆ 6 ಏರ್ ಬ್ಯಾಗ್ ವುಳ್ಳ ಅತ್ಯುತ್ತಮ ಕಾರನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಕಾರು ಕೊಳ್ಳಲು ಹೆಚ್ಚು ಆಸಕ್ತರಾಗಿದ್ದಾರೆ. ಆದರೆ ಸರ್ವೀಸ್ ಸೆಂಟರ್/ಸೇವೆ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಆಟೊಮೊಬೈಲ್ ಕ್ಷೇತ್ರದಲ್ಲಿ ಇತರ ಎಲ್ಲ ಕಂಪನಿಗಳಿಗೆ ಟಾಟಾ ಕಂಪನಿಯ ಕಾರುಗಳು ತೀವ್ರ ಪೈಪೋಟಿ ನೀಡುವುದಲ್ಲದೇ, ಅತ್ಯಧಿಕ ಗ್ರಾಹಕರನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಜನರು 'ಟಾಟಾ ಕಾರು ಅಂದರೆನೇ ಸೇಫ್ಟಿ, ಸೇಫ್ಟಿ ಅಂದರೆನೇ ಟಾಟಾ ಕಾರುಗಳು' ಎಂಬು ನಿಲುವು ತಾಳಿದ್ದಾರೆ. ಅಷ್ಟರ ಮಟ್ಟಿಗಿನ ವಿಶ್ವಾಸವನ್ನು ಟಾಟಾ ಕಾರುಗಳು ಜನರ ಮನಸ್ಸಿನಲ್ಲಿ ಮೂಡಿಸಿವೆ. ಇದೀಗ ಟಾಟಾ ಕಾರುಗಳ ಪಟ್ಟಿಗೆ ಹೊಸ ಮತ್ತು ನವೀನ ವಿನ್ಯಾಸದಲ್ಲಿ ಕೇವಲ 5.29 ಲಕ್ಷ ರೂಪಾಯಿ ಬೆಲೆಯಲ್ಲಿ ಟಾಟಾ ಏರಿಸ್ ಪರಿಚಯಿಸಲಾಗಿದೆ.

ಭಾರತದಾದ್ಯಂತ ಬಜೆಟ್ ಸ್ನೇಹಿ ಕಾರು ಖರೀದಿಸುವವರಿದ್ದಾರೆ. ಅವರೆಲ್ಲ ಇದೀಗ 'ಟಾಟಾ ಏರಿಸ್'ಗಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣ ಖಾಲಿ ಮಾಡದೆ ಕಾಯುತ್ತಿದ್ದಾರೆ. ಆಧುನಿಕ ಸುರಕ್ಷತಾ ಮಾನದಂಡಗಳನ್ನು ನೀಡುವ ಹೊಚ್ಚಹೊಸ ಸೆಡಾನ್‌ಗಳನ್ನು ಹುಡುಕಲು ಗ್ರಾಹಕರು 'ಏರಿಸ್' ಖರೀದಿಗೆ ಆಸಕ್ತಿ ಹೊಂದಿದ್ದಾರೆ.
ಕಾರಿನ ಫೀಚರ್ಸ್ ಹೀಗಿದೆ!
ಪ್ರಮುಖ ದೇಶೀಯ ಆಟೋಮೋಟಿವ್ ದೈತ್ಯ ಕಂಪನಿಗಳ ಪೈಕಿ ಕೈಗೆಟುಕುವ ಬೆಲೆಯೊಂದಿಗೆ ಮಾರುಕಟ್ಟೆಯನ್ನು ಟಾಟಾ ಕಾರುಗಳು ಬೆಚ್ಚಿಬೀಳಿಸುತ್ತಿವೆ. ಐದು ಲಕ್ಷ ಇಪ್ಪತ್ತೊಂಬತ್ತು ಸಾವಿರ ರೂಪಾಯಿಗಳಿಂದ ಪ್ರಾರಂಭವಾಗುವ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಸ್ಟೈಲಿಶ್ ಏರಿಸ್ ಕಾರು ಕುಟುಂಬಸ್ಥರೊಂದಿಗೆ ದೈನಂದಿನ ಬಳಕೆಗೆ ಹೇಳಿ ಮಾಡಿದ್ದಾರೆ.
ಸುರಕ್ಷತೆ, ದಕ್ಷತೆ, ಕಡಿಮೆ ಬೆಲೆಯಲ್ಲಿ ಕಾರು ಖರೀದಿಸುವ ಕನಸು ಕಾಣುತ್ತಿರುವ ಮಧ್ಯಮ ವರ್ಗದವರ ಕಣ್ಣುಗಳು ಟಾಟಾ ಏರಿಸ್ ಮೇಲೆ ಬಿದ್ದಿವೆ. ಡ್ರೈವಿಂಗ್ ಸುರಕ್ಷತಾ ವೈಶಿಷ್ಟ್ಯ ಹೊಂದಿದೆ. ರೋಡ್ ಗ್ರಿಪ್, ಎಲ್ಲ ರಸ್ತೆಗಳಲ್ಲೂ ಸುಲಭವಾಗಿ ಮುನ್ನುಗ್ಗಬಲ್ಲ ಸಾಮರ್ಥ್ಯ ಈ ಕಾರಿಗೆ. 1.2 ಲೀಟರ್ ಮತ್ತು ಮೂರು ಸಿಲಿಂಡರ್ ಇಂಜಿನ್ ಹೊಂದಿದೆ. ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಕಾರುಪೆಟ್ರೋಲ್, ಸಿಎನ್‌ಜಿ ಎರಡು ಆಯ್ಕೆಗಳಲ್ಲೂ ಲಭ್ಯವಿದೆ.
ಕಾರ್ ಸರ್ವೀಸ್, ಸೇವಾ ಸುಧಾರಣೆಗೆ ಒತ್ತಾಯ
ಟಾಟಾ ಏರಿಸ್ ಕಾರು ಬಿಡುಗಡೆಗೆ ಸಂಬಂಧಿಸಿದಂತೆ ಪೋಸ್ಟರ್ ವೊಂದನ್ನು ಲಿಂಕ್ಡ್ ಇನ್ ನಲ್ಲಿ ಹಂಚಿಕೊಳ್ಳಲಾಗಿದೆ. ಅದಕ್ಕೆ ಕೆಲವು ಕಾಮೆಂಟ್‌ಗಳು ಬಂದಿದ್ದು, ಅದರಲ್ಲಿ ಒಬ್ಬರು, 'ಟಾಟಾ ಕಾರುಗಳು ಗಟ್ಟಿಮುಟ್ಟಾದ ಕಾರುಗಳು ಎಂಬುದರದಲ್ಲಿ ಸಂಶಯವಿಲ್ಲ. ಟಾಟಾ ತನ್ನ ಸರ್ವಿಸ್ ಸೆಂಟರ್‌ಗಳ ಗುಣಮಟ್ಟ ಮತ್ತು ಸೇವೆಯನ್ನು ಖಂಡಿತವಾಗಿಯೂ ಸುಧಾರಿಸಬೇಕಿದೆ.
ಕಾರುಗಳನ್ನು ಖರೀದಿಸಿದ ಒಂದು ವರ್ಷದ ಅವಧಿಯಲ್ಲಿಯೇ ತುಕ್ಕು ಹಿಡಿಯುವಂತಹ ಸಮಸ್ಯೆ ಕಾಣಿಸಬಹುದು. ಇದು ನಿಜಕ್ಕೂ ನಿರಾಶಾದಾಯಕ ಸಂಗತಿ. ನಿಮ್ಮ ಜೀವನದಲ್ಲಿ ಅನಗತ್ಯ ಸಮಸ್ಯೆಗಳು ಬೇಡ ಎಂದು ನೀವು ಬಯಸುವುದಾದರೆ, ಟಾಟಾ ಕಾರನ್ನು ಖರೀದಿಸುವ ಮೊದಲು ಎರಡು ಬಾರಿ ಯೋಚಿಸುವಂತೆ ನಾನು ಎಲ್ಲರಿಗೂ ಸಲಹೆ ನೀಡುತ್ತೇನೆ. ನನ್ನ ಅನುಭವದ ಪ್ರಕಾರ, ಕಾರಿನ ತಯಾರಿಕೆಯಲ್ಲಿ ಬಳಸಲಾದ ವಸ್ತುಗಳ ಒಟ್ಟಾರೆ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಯ ಅಗತ್ಯವಿದೆ. ಸರ್ವೀಸ್ ಸೇವೆ ಸುಧಾರಿಸಬೇಕಿದೆ. ಇತರರಿಗೆ ಟಾಟಾ ಕಾರುಗಳನ್ನು ನಾನು ಶಿಫಾರಸು ಮಾಡುವುದಿಲ್ಲ' ಎಂದು ತಿಳಿಸಿದ್ದಾರೆ.


Click it and Unblock the Notifications
