ತೆಹೆಲ್ಕಾ ತೇಜ್‌ಪಾಲ್ ಮೇಲೆ ಆರೋಪ ಪಟ್ಟಿ ಸಿದ್ದಪಡಿಸಲು ಕೋರ್ಟ್ ಸೂಚನೆ
ಪಣಜಿ, ಸೆಪ್ಟೆಂಬರ್ 7: ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜಪಾಲ್ ಮೇಲೆ ಅತ್ಯಾಚಾರ ಪ್ರಕರಣ ಸೇರಿದಂತೆ 9 ಆರೋಪ ಹೊರಿಸಲು ಗೋವಾದ ಮಪುಸಾದ ಸೆಷನ್ಸ್ ನ್ಯಾಯಾಲಯ ಸೂಚನೆ ನೀಡಿದೆ.
ಸೆಪ್ಟೆಂಬರ್ 28ರಿಂದ ಆರೋಪ ಪಟ್ಟಿ ಸಿದ್ದಪಡಿಸಲು ಕೋರ್ಟ್ ಸೂಚನೆ ನೀಡಿದೆ. ಇದರಲ್ಲಿ 9 ಆರೋಪಗಳನ್ನು ಪಟ್ಟಿ ಮಾಡಲು ಕೋರ್ಟ್ ಸೂಚಿಸಿದ್ದು, ಇದರಲ್ಲಿ 5 ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಾಗಿವೆ. ಇದರಲ್ಲಿ ತಿದ್ದುಪಡಿ ಕಾಯ್ದೆಯ ಸೆಕ್ಷನ್ ಗಳೂ ಸೇರಿವೆ.

ಗೋವಾದ ಹೊಟೇಲ್ ಗ್ರ್ಯಾಂಡ್ ಹಯಟ್ ನಲ್ಲಿ ತನ್ನ ಸಹೊದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ತರುಣ್ ತೇಜ್ ಪಾಲ್ ಎದುರಿಸುತ್ತಿದ್ದಾರೆ.
ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಆ ಪ್ರಕರಣಗಳ ವಿಚಾರಣೆಯನ್ನು ತರುಣ್ ತೇಜ್ ಪಾಲ್ ಎದುರಿಸಬೇಕಾಗಿದೆ.












Click it and Unblock the Notifications