ಅಷ್ಟಕ್ಕೂ.. ತಮಿಳುನಾಡಿನ ಯುವಕ ತ್ರಿವರ್ಣ ಧ್ವಜ ಸುಟ್ಟಿದ್ದೇಕೆ?

Subscribe to Oneindia Kannada

ಬೆಂಗಳೂರು, ಫೆಬ್ರವರಿ, 03: ಎರಡು ಘಟನೆಗಳು ಒಂದೇ ದಿನ ಅಂದರೆ ಗಣರಾಜ್ಯೋತ್ಸವದ ದಿನವೇ ನಡೆದಿವೆ. ಎರಡು ಪ್ರಕರಣಗಳು ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ್ದು. ಆದರೆ ಫಲಿತಾಂಶ ಮಾತ್ರ ಬೇರೆ ಬೇರೆ. ಪಾಕಿಸ್ತಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದವನಿಗೆ ಎರಡೇ ದಿನದಲ್ಲಿ 10 ವರ್ಷ ಜೈಲು ಶಿಕ್ಷೆ. ಭಾರತದಲ್ಲಿ ನಮ್ಮದೇ ದೇಶದ ಧ್ವಜ ಸುಟ್ಟವನ್ನು ಅಂತೂ ಬಂಧಿಸಲಾಗಿದೆ.

ಪಾಕಿಸ್ತಾನದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದ ವಿರಾಟ್ ಕೊಹ್ಲಿ ಅಭಿಮಾನಿಗೆ 10 ವರ್ಷ ಜೈಲು ಶಿಕ್ಷೆ... ಅರೇ ಇದು ಹಳೆ ಸುದ್ದಿ ಅಂದುಕೊಳ್ಳಬೇಡಿ... ಪಾಕಿಸ್ತಾನದವರು ಅವರ ದೇಶದಲ್ಲಿ ಶಿಕ್ಷೆ ನೀಡಿದ್ದು ಅವರ ದೇಶಕ್ಕೆ ಸರಿ ಎಂದು ಸುಮ್ಮನಾಗಬೇಕು ಅಷ್ಟೇ ಎಂದುಕೊಂಡರೆ ಸುದ್ದಿಗೆ ಮುಕ್ತಾಯ ಹಾಡಬಹುದು. [ತ್ರಿವರ್ಣ ಧ್ವಜ ಹಾರಿಸಿದ್ದ ಕೊಹ್ಲಿ ಅಭಿಮಾನಿಗೆ 10 ವರ್ಷ ಜೈಲು]

ಇತ್ತ ಭಾರತದಲ್ಲಿ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಭಾರತದ ರಾಷ್ಟ್ರ ಧ್ವಜ ಸುಟ್ಟು, ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಯುವಕನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ದಿಲೀಪನ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಪೆರಿಯಾರಿಸ್ಟ್ ಹಾಗೂ ತಮಿಳು ರಾಷ್ಟ್ರೀಯತೆಗೆ ಬೆಂಬಲ ನೀಡುತ್ತಿದ್ದ ಎನ್ನಲಾಗಿದೆ.

ಈಗ ಹೇಳಿ,, ಭಾರತದ ಕತೆ! ಇನ್ನು ಆತನ ಮೇಲೆ ಪ್ರಕರಣ ದಾಖಲು, ವಿಚಾರಣೆ ಅದಾದ ನಂತರ ಸಾಬೀತಾದರೆ ಶಿಕ್ಷೆ... ಅಲ್ಲಿಗೆ ಎಷ್ಟು ವರ್ಷ ಹಿಡಿಯುವುದೋ.. ಇದೊಂದು ವಿಷಯದಲ್ಲಿ ಪಾಕಿಸ್ತಾನವನ್ನು ಒಪ್ಪಿಕೊಳ್ಳಬಹುದು.

ಮುಂಬೈನ ತಾಜ್ ಹೊಟೆಲ್ ಮೇಲೆ ದಾಳಿ ನಡೆಸಿದ್ದ ಉಗ್ರನಿಗೆ ಮರಣ ದಂಡನೆ ನೀಡಲು ಎಷ್ಟು ವರ್ಷ ಹಿಡಿಯಿತು? ಇದೀಗ ಛೋಟಾ ರಾಜನ್ ಅವರನ್ನು ಎಷ್ಟು ವರ್ಷ ವಿಚಾರಣೆ ಮಾಡಲಿದ್ದಾರೆ. ಶಂಕಿತ ಉಗ್ರರ ಕತೆ ಏನು?[ಉಗ್ರ ಮೊಹಮದ್ ನವೀದ್ ವಿರುದ್ಧ ಚಾರ್ಜ್ ಶೀಟ್]

ಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಿಸಿದ್ದ ಕೊಹ್ಲಿ ಅಭಿಮಾನಿ ಉಮರ್ ಡ್ರಾಜ್ ಗೆ ಲಾಹೋರ್ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ನೀಡಿತ್ತು. ನಮ್ಮ ದೇಶದ ಧ್ವಜವನ್ನೇ ಸುಟ್ಟ ದಿಲೀಪನ್ ಗೆ ಇನ್ನೆಷ್ಟು ದಿನ ಪೊಲೀಸ್ ಆರೈಕೆಯೋ ಗೊತ್ತಿಲ್ಲ!

ಮಹೇಂದ್ರ ದಿಲೀಪನ್ ಯಾರು?

ಮಹೇಂದ್ರ ದಿಲೀಪನ್ ಯಾರು?

ಚೆನ್ನೈ ನಲ್ಲಿ ಮೂವರು ಯುವತಿಯರ ಆತ್ಮಹತ್ಯೆ ಹಾಗೂ ಹೈದರಾಬಾದ್ ನಲ್ಲಿ ನಡೆದ ರೋಹಿತ್ ವೆಮುಲ್ ಆತ್ಮಹತ್ಯೆ ಖಂಡಿಸಿ ವೆಲ್ಲುವರ್ ಕೊಟ್ಟಂನ ಪ್ರತಿಭಟನೆಯಲ್ಲಿ ದಿಲೀಪನ್ ಪಾಲ್ಗೊಂಡಿದ್ದ. ಬಂಧಿತ ಯುವಕನಿಗೆ ರಾಷ್ಟ್ರ ರಾಜಕೀಯ ಪರಿಸ್ಥಿತಿಯ ಬಗ್ಗೆ ಅಸಮಾಧಾನವಿದ್ದು ಅದನ್ನು ಈ ರೀತಿ ಹೊರಹಾಕಿದ್ದ ಎನ್ನುವುದು ಪ್ರಾಥಮಿಕ ಮಾಹಿತಿ.

ಸಾಮಾಜಿಕ ತಾಣದಲ್ಲಿ ವೈರಲ್

ಸಾಮಾಜಿಕ ತಾಣದಲ್ಲಿ ವೈರಲ್

ಜ.26ರಂದು ದಿಲೀಪನ್ ತ್ರಿವರ್ಣ ಧ್ವಜವನ್ನು ಸುಡುತ್ತಿರುವ ಫೋಟೋವನ್ನು ವಾಟ್ಸಾಪ್‌ನಲ್ಲಿ ಹಾಗೂ ಸಾಮಾಜಿಕ ತಾಣಗಳಲ್ಲಿ ಹಾಕಿದ್ದ. ಇದು ವೈರಲ್ ಆದ ಬಳಿಕ ಆತನ ಬಂಧನಕ್ಕೆ ಒತ್ತಾಯ ಕೇಳಿಬಂದಿತ್ತು. ಅಲ್ಲದೇ ಕೆಲವು ಸಂಘಟನೆಗಳು ಆತನ ವಿರುದ್ಧ ದೇಶದ್ರೋಹದ ದೂರು ದಾಖಲಿಸಿದ್ದವು.

ಮೊಹಮದ್ ನವೀದ್ ಎಲ್ಲಿದ್ದಾನೆ?

ಮೊಹಮದ್ ನವೀದ್ ಎಲ್ಲಿದ್ದಾನೆ?

ಷಜಮ್ಮು-ಕಾಶ್ಮೀರದ ಉದಾಮ್‌ಪುರದಲ್ಲಿ ಜೀವಂತವಾಗಿ ಸೆರೆ ಸಿಕ್ಕ ಉಗ್ರ ಮೊಹಮದ್ ನವೀದ್ ಮೇಲೆ ಅಂತೂ ಇಂತೂ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ವಿಚಾರಣೆ ಮುಗಿಯುವುದು ಇನ್ಯಾವ ಕಾಲಕ್ಕೋ? ಕಸಬ್ ಪ್ರಕರಣದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ.

ತ್ರಿವರ್ಣ ಧ್ವಜ ಹಾರಿಸಿದ್ದ ಕೊಹ್ಲಿ ಅಭಿಮಾನಿ

ತ್ರಿವರ್ಣ ಧ್ವಜ ಹಾರಿಸಿದ್ದ ಕೊಹ್ಲಿ ಅಭಿಮಾನಿ

ಲಾಹೋರ್ ನಿಂದ 200ಕಿಲೋ ಮೀಟರ್ ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಓಕಾರಾ ಜಿಲ್ಲೆಯಲ್ಲಿ ಜನವರಿ 26 ರಂದು ಬಾವುಟ ಹಾರಿಸಿದ್ದ ಕೊಹ್ಲಿ ಅಭಿಮಾನಿ ಉಮರ್ ಡ್ರಾಜ್ ಗೆ ಲಾಹೋರ್ ನ್ಯಾಯಾಲಯ ಜನವರಿ 28 ಅಂದರೆ ಎರಡೇ ದಿನದ 10 ವರ್ಷದ ಜೈಲು ಶಿಕ್ಷೆ ನೀಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chennai Police have arrested the teenager who burned the India flag and posted the picture on Facebook. Dilipan Mahendran, picked up in Royapettah was booked under various sections of IPC, Prevention of Insults to National Honour Act.
Please Wait while comments are loading...