ಕಾವೇರಿ ನೀರಿಗಾಗಿ ತಮಿಳುನಾಡಿನಿಂದ ಸುಪ್ರೀಂ ನಲ್ಲಿ ಅರ್ಜಿ

ಕಾವೇರಿ ನೀರಿಗಾಗಿ ತಮಿಳುನಾಡಿನಿಂದ ಸುಪ್ರೀ ಕೋರ್ಟ್ ಗೆ ಅರ್ಜಿ. ಹೆಚ್ಚುವರಿ ನೀಡು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ.

ನವದೆಹಲಿ, ಜುಲೈ 5: ಕರ್ನಾಟಕದಿಂದ ತಮಿಳುನಾಡಿಗೆ ಬಿಡಲಾಗುವ ಕಾವೇರಿ ನೀರನ್ನು ಸಮರ್ಪಕವಾಗಿ ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ, ಸುಪ್ರೀಂ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದೆ.

ಕಳೆದ ವರ್ಷ ಬಿಡಬೇಕಿದ್ದ ನೀರಿನಲ್ಲಿ 5.966 ಟಿಎಂಸಿಯಷ್ಟು ನೀರು ಕಡಿಮೆಯಾಗಿತ್ತು. ಈ ವರ್ಷ ಬಿಡಬೇಕಿರುವ ನೀರಿನ ಕೋಟಾದಲ್ಲಿ ಹಿಂದಿನ ವರ್ಷದ ಕೊರೆತೆಯನ್ನೂ ಸೇರಿಸಿ ಹೆಚ್ಚುವರಿಯಾಗಿ 5 ಟಿಎಂಸಿ ನೀರು ಬಿಡಬೇಕೆಂದು ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ.

Tamilnadu government submits plea to Supreme court regarding Cauvery Water

ಕಳೆದೊಂದು ವಾರದಿಂದಲೇ ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನೀರು ಬಿಡಲಾರಂಭಿಸಿದೆ. ಇದರ ವಿರುದ್ಧ ಈಗಾಗಲೇ ರಾಜ್ಯದ ರೈತರು ಪ್ರತಿಭಟನೆಗಿಳಿದಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ ವ್ಯಾಜ್ಯ ನ್ಯಾಯಾಧೀಕರಣದ ನಿರ್ದೇಶನದಂತೆಯೇ ನೀರು ಬಿಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

ಇದೆಲ್ಲರ ನಡುವೆಯೇ ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಹೆಚ್ಚುವರಿ ನೀರಿಗೆ ಮನವಿ ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+