ಕಾವೇರಿ ನೀರಿಗೆ ಸುಪ್ರೀಂನಲ್ಲಿ ತಮಿಳುನಾಡು ಕ್ಯಾತೆ
ನವದೆಹಲಿ, ಆಗಸ್ಟ್, 22: ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. 50.52 ಟಿಎಂಸಿ ನೀರು ಬಿಡಲು ಕರ್ನಾಟಕ್ಕೆ ನಿರ್ದೇಶನ ಮಾಡಬೇಕು ಎಂದು ತಮಿಳುನಾಡು ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಕೆ ಮಾಡಿದೆ.
ಮಳೆ ಕೊರತೆ ಕಾರಣ ರಾಜ್ಯದ ಜಲಾಶಯಗಳೆ ಈ ಬಾರಿ ಭರ್ತಿಯಾಗಿಲ್ಲ. ಕೆಆರ್ ಎಸ್ ನಲ್ಲಿ 96 ಅಡಿ ನೀರಿದೆ. ಇದೀಗ ತಮಿಳುನಾಡು ಸಹ ನೀರು ಕೇಳಿದ್ದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವುದರಲ್ಲಿ ಅನುಮಾನವಿಲ್ಲ. ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲ ಬಾಲಾಜಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.[ಆಗಸ್ಟ್ 30ರ ತನಕ ಮಾತ್ರ ಕೆಆರ್‌ಎಸ್‌ನಿಂದ ನೀರು ಬಿಡುಗಡೆ]

ಮುಂದಿನ 10 ದಿನಗಳಲ್ಲಿ 50 ಟಿಎಂಸಿ ನೀರು ಬಿಡಬೇಕು ಎಂಬುದು ತಮಿಳುನಾಡು ಸರ್ಕಾರದ ಬೇಡಿಕೆ. ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿತ್ತು. ಸಚಿವ ಸಂಪುಟ ಸಭೆಯಲ್ಲಿ ನೀರು ಬಿಡುವುದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಲಾಗಿತ್ತು.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]
ಕರ್ನಾಟಕ ನೀರು ಬಿಡದೆ ಇದ್ದುದರಿಂದ 2012-13ರಲ್ಲಿ 2,500 ಕೋಟಿ ರು. ಮೌಲ್ಯದ ಬೆಳೆನಷ್ಟವಾಗಿದ್ದು, ಇದನ್ನು ಕರ್ನಾಟಕ ತುಂಬಿಕೊಡಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣ ಸಹ ವಿಚಾರಣೆ ಹಂತದಲ್ಲಿದೆ.












Click it and Unblock the Notifications