Tamil Nadu Flood: ಭಾರಿ ಮಳೆ-ಪ್ರವಾಹ: ಜ.2ವರೆಗೂ ರಜೆ ವಿಸ್ತರಣೆ, ಯಾವ ತರಗತಿಗಳಿಗೆ ಅನ್ವಯ

ತಿರುನಲ್ವೇಲಿ, ಡಿಸೆಂಬರ್ 22: ತಮಿಳುನಾಡಿನ ಕೆಲವೆಡೆ ಮುಂದಿನ ಕೆಲವು ದಿನಗಳ ಕಾಲ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವು ದಿನಗಳಿಂದ ಅಬ್ಬರಿಸಿದ್ದ ಪ್ರವಾಹವು ಇಳಿಮುಖದತ್ತ ಸಾಗಿದೆ. ಈ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಣಾಧಿಕಾರಿ (ಸಿಇಒ) ಶುಕ್ರವಾರ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಜನವರಿ 2 ರವರೆಗೆ ರಜೆ ಘೋಷಿಸಿದ್ದಾರೆ.

ರಜೆ ಘೋಷಣೆ ಕುರಿತು ಈ ಸಂಬಂಧ ಜಿಲ್ಲೆಯ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಪ್ರಾಥಮಿಕ, ಮೆಟ್ರಿಕ್ ಸೇರಿದಂತೆ ಎಲ್ಲ ಶಾಲೆಗಳನ್ನು ಜನವರಿ 2ರವರೆಗೆ ತೆರೆಯದಂತೆ ಸುತ್ತೋಲೆಯಲ್ಲಿ ತಿಳಿಸಿದೆ. ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಒತ್ತಾಯಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Tamil Nadu Faces Heavy Rain and Floods: Schools Closed Until Jan 2nd for these Students

ಸುತ್ತೋಲೆಯ ಪ್ರಕಾರ ಶಾಲೆಗಳು ಮೇಲೆ ತಿಳಿಸಿದ ಅವಧಿಯಲ್ಲಿ ಯಾವುದೇ ವಿಶೇಷ ತರಗತಿಗಳನ್ನು ನಡೆಸಕೂಡದು. ಅಷ್ಟೇ ಅಲ್ಲ ಶಿಕ್ಷಕರು ಮಕ್ಕಳಿಗೆ ಶಾಲೆಗಳಿಗೆ ಅಥವಾ ವಿಶೇಷ ತರಗತಿಗಳಿಗೆ ಬರುವಂತೆ ಪಠ್ಯ ಸಂದೇಶಗಳನ್ನು ಸಹ ಕಳುಹಿಸಬಾರದು. ಅರ್ಧವಾರ್ಷಿಕ ಪರೀಕ್ಷೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

1-8ನೇ ತರಗತಿಗೆ ರಜೆ ವಿಸ್ತರಣೆ

ತಮಿಳುನಾಡಿನ ಈ ಪ್ರವಾಹ ಭೀತಿಯ ತಿರುನಲ್ವೇಲಿ ವ್ಯಾಪ್ತಿಯಲ್ಲಿ 1-8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ರಜೆ ಘೋಷಣೆ ಆಗಿದೆ. 9 ರಿಂದ 12 ನೇ ತರಗತಿಯವರೆಗೆ ಶಾಲೆಗಳು ಎಂದಿನಂತೆ ನಡೆಯಲಿದೆ ಎಂದು ಸುತ್ತಲೋಲೆಯಲ್ಲಿ ತಿಳಿಸಲಾಗಿದೆ.

ಇಂದು ಬೆಳಿಗ್ಗೆ ತಿರುನಲ್ವೇಲಿ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ಮಳೆಯಾದ ನಂತರ, ಸಿಇಒ ಅವರು ಮುಂದಿನ ಆದೇಶದವರೆಗೆ ರಜೆಯನ್ನು ವಿಸ್ತರಿಸಿ ಮತ್ತೆ ಆದೇಶ ಹೊರಡಿಸಿದರು.

Tamil Nadu Faces Heavy Rain and Floods: Schools Closed Until Jan 2nd for these Students

ಈ ಜಿಲ್ಲೆಗಳಿಗೆ ಸಂಕಷ್ಟ

ಕರಾವಳಿಯಲ್ಲಿ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಚಂಡಮಾರುತದ ಪರಿಣಾಮವಾಗಿ ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣ ಮಳೆ ಸುರಿದ ಪ್ರವಾಹ ಸೃಷ್ಟಿಸಿತು. ಜನ ಜೀವನ ಅಸ್ತವೆಸ್ತವಾಯಿತು.

48 ಗಂಟೆಗಳ ನಿರಂತರವಾಗಿ ಈ ಪ್ರದೇಶಗಳಲ್ಲಿ ಮಳೆ ಸುರಿಯಿತು. ಅನೇಕ ಗ್ರಾಮಗಳು ಹೆಚ್ಚು ಜಲಾವೃತಗೊಂಡಿವೆ ಮತ್ತು ತಾಮಿರಬರಣಿ ನದಿ, ಹಲವಾರು ಕೆರೆಗಳು ಮತ್ತು ಕೊಳಗಳು ಉಕ್ಕಿ ಹರಿದವು. ಈ ನಾಲ್ಕು ಜಿಲ್ಲೆಗಳ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ತುಸು ಕಡಿಮೆ ಆದ ತಕ್ಷಣ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+