"ಮ್ಯಾನ್ ವಿತ್ ಎ ಪ್ಲಾನ್": ಐಪಿಎಲ್‌ನಲ್ಲಿ ಸಿಎಸ್‌ಕೆ ಗೆಲುವಿಗೆ ಧೋನಿಯನ್ನು ಶ್ಲಾಘಿಸಿದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್

ಚೆನ್ನೈ, ಮೇ. 30: ಕಳೆದ ರಾತ್ರಿ (ಸೋಮವಾರ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಭಿನಂದಿಸಿದ್ದಾರೆ. ತಂಡದ ಗೆಲುವನ್ನು ಅದರ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅರ್ಪಿಸಿದ್ದಾರೆ.

2023 ರ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಸಿಎಸ್‌ಕೆ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್ (ಜಿಟಿ) ಅನ್ನು ಸೋಲಿಸಿದೆ. ಮೇ 29 ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ಫೈನಲ್ ಪಂದ್ಯದ ಮೂಲಕ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡಿದೆ.

Tamil Nadu Chief Minister MK Stalin Praises MS Dhoni On Chennai Super Kings IPL Win

ಸಾಮಾಜಿಕ ಮಾಧ್ಯಮದಲ್ಲಿ, ಮುಖ್ಯಮಂತ್ರಿ ಸ್ಟಾಲಿನ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ಸಾಧನೆಯನ್ನು, ಅವರ ಪ್ರಾಮುಖ್ಯತೆಯನ್ನು ಮೆಲುಕು ಹಾಕಿದ್ದಾರೆ. ಮುಂಬೈ ಇಂಡಿಯನ್ಸ್‌ನ ಐದು ಐಪಿಎಲ್ ಪ್ರಶಸ್ತಿಗಳ ದಾಖಲೆಯನ್ನು ಸರಿಗಟ್ಟಿದ ಸಿಎಸ್‌ಕೆಗೆ ಗೆಲುವಿನ ರನ್ ಗಳಿಸಿದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


"ಸಿಎಸ್‌ಕೆ ಹಳದಿ ಬ್ರಿಗೇಡ್‌ಗೆ ತಮ್ಮ 5 ನೇ ಐಪಿಎಲ್ ಟ್ರೋಫಿಗೆ ಅಭಿನಂದನೆಗಳು. ಎಂಎಸ್ ಧೋನಿ ಪ್ರತಿ ಸನ್ನಿವೇಶಕ್ಕೂ ಪ್ಲ್ಯಾನ್‌ಯನ್ನು ಹೊಂದಿರುವ ವ್ಯಕ್ತಿ! ಇದು ಅತ್ಯುತ್ತಮ ಕ್ರಿಕೆಟ್ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ತನ್ನ ಹಿಡಿದಿಟ್ಟುಕೊಂಡ ಜಡೇಜಾ ಸಿಎಸ್‌ಕೆಯ ಐತಿಹಾಸಿಕ ವಿಜಯಕ್ಕೆ ಮುದ್ರೆಯೊತ್ತಿದ್ದಾರೆ. #ಐಪಿಎಲ್ ಫೈನಲ್ಸ್ 2023" ಎಂದು ಮುಖ್ಯಮಂತ್ರಿ ಸ್ಟಾಲಿನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Tamil Nadu Chief Minister MK Stalin Praises MS Dhoni On Chennai Super Kings IPL Win

ಕ್ರಿಕೆಟ್ ಪ್ರೇಮಿ, ಎಂಕೆ ಸ್ಟಾಲಿನ್ ಅನೇಕ ಸಿಎಸ್‌ಕೆ ಪಂದ್ಯಗಳಿಗೆ ವೈಯಕ್ತಿಕವಾಗಿ ಹಾಜರಾಗಿದ್ದಾರೆ. ಕೆಲವರು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಐಕಾನಿಕ್ ಹಳದಿ ಜೆರ್ಸಿಯನ್ನು ತೊಟ್ಟು ಬಂದಿರುವುದನ್ನು ಕೂಡ ನೋಡಿದ್ದಾರೆ.

ಇನ್ನು, ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಧೋನಿ, ಧೋನಿ ಎಂದು ಘೋಷಣೆ ಕೂಗಿದ್ದಾರೆ. 2008 ರಲ್ಲಿ ಐಪಿಎಲ್‌ನ ಉದ್ಘಾಟನಾ ಆವೃತ್ತಿಯಿಂದ ಅವರು ನಾಯಕತ್ವ ವಹಿಸುತ್ತಿರುವ ತಂಡವಾದ ಸಿಎಸ್‌ಕೆಗೆ ಕಳೆದ ರಾತ್ರಿ ಅದ್ಭುತ ಪ್ರದರ್ಶನ ತೋರಿದೆ. ಅಂತಿಮ ಪಂದ್ಯದ ನಂತರ ಮಾತನಾಡಿದ ಸಿಎಸ್‌ಕೆ ನಾಯಕ, ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವುದಿಲ್ಲ ಎಂದು ಹೇಳಿ, ಅಭಿಮಾನಿಗಳಿಗೆ ಖುಷಿ ದುಪ್ಪಟ್ಟುಗೊಳಿಸಿದ್ದಾರೆ.

ನಾಯಕನಾಗಿ ಐದು ಐಪಿಎಲ್ ಪ್ರಶಸ್ತಿಗಳ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿರುವ 41 ವರ್ಷ ವಯಸ್ಸಿನ ಎಂಎಸ್ ಧೋನಿ, ಮುಂದಿನ ಒಂಬತ್ತು ತಿಂಗಳುಗಳವರೆಗೆ ತಂಡಕ್ಕೆ ತರಬೇತಿ ನೀಡಲು ಬಯಸುತ್ತೇನೆ. ತನ್ನ ಅಭಿಮಾನಿಗಳಿಗೆ "ಉಡುಗೊರೆ"ಯಾಗಿ ಮುಂದಿನ ಸೀಸನ್‌ನಲ್ಲಿಯೂ ಆಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+