Tamil Nadu bypoll: ತಮಿಳುನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅಭೂತಪೂರ್ವ ಗೆಲುವು- ಯಾವುದರ ಮುನ್ಸೂಚನೆ?
ಈರೋಡ್ ಪೂರ್ವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಇವಿಕೆಎಸ್ ಇಳಂಗೋವನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಐಎಡಿಎಂಕೆಯ ಕೆಎಸ್ ತೆನ್ನರಸು ವಿರುದ್ಧ 30,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ವರದಿ ಓದಿ
ಈರೋಡ್, ಮಾರ್ಚ್ 02: ಈರೋಡ್ ಪೂರ್ವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಇವಿಕೆಎಸ್ ಇಳಂಗೋವನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಐಎಡಿಎಂಕೆಯ ಕೆಎಸ್ ತೆನ್ನರಸು ವಿರುದ್ಧ 30,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಮೂರನೇ ಸುತ್ತಿನ ಮತ ಎಣಿಕೆಯ ಕೊನೆಯಲ್ಲಿ ಆಡಳಿತಾರೂಢ ಡಿಎಂಕೆ ಬೆಂಬಲಿತ ಇಳಂಗೋವನ್‌ನ ಸ್ಪಷ್ಟ ಗೆಲುವಿನತ್ತ ಮುನ್ನಡೆದಿದ್ದರು. ಆ ನಂತರ ಬಂದ ಫಲಿತಾಂಶದಲ್ಲಿ ಅವರ ಗೆಲುವು ಸ್ಪಷ್ಟವಾಯಿತು. ಡಿಎಂಕೆ ಪಕ್ಷದ ನೇತೃತ್ವದ ಸೆಕ್ಯುಲರ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಎಸ್‌ಪಿಎ) ಬೆಂಬಲಿಗರಿಂದ ಸಂಭ್ರಮಾಚರಣೆ ನಡೆದಿದೆ. ಈ ಮೈತ್ರಿಕೂಟವು ಎರಡು ಎಡ ಪಕ್ಷಗಳನ್ನು ಒಳಗೊಂಡಿವೆ.

ಮೇನಕಾ ನವನೀತನ್ ನಾಮ್ ತಮಿಳರ್ ಕಚ್ಚಿ ಮತ್ತು ಡಿಎಂಡಿಕೆಯ ಆನಂದ್ ಕ್ರಮವಾಗಿ 1,820 ಮತ್ತು 256 ಮತಗಳನ್ನು ಪಡೆದರು.
ಈ ಅಭೂತಪೂರ್ವ ಗೆಲುವಿಗೆ ಪ್ರತಿಕ್ರಿಯಿಸಿರುವ ಇಳಂಗೋವನ್, 2024 ರ ಲೋಕಸಭಾ ಚುನಾವಣೆಯಲ್ಲಿಯೂ ಇದೇ ರೀತಿಯ ಫಲಿತಾಂಶವನ್ನು ಕಾಂಗ್ರೆಸ್ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.
ಸ್ಟಾಲಿನ್ ಸರ್ಕಾರದ ಸಕಾರಾತ್ಮಕ ಕೆಲಸಗಳು ನನಗೆ ಸಹಾಯ ಮಾಡಿದೆ ಎಂದು ಇಳಂಗೋವನ್ ಹೇಳಿದರು. 'ಈ ಗೆಲುವು ನಿರೀಕ್ಷಿಸಲಾಗಿತ್ತು. ಇದು ಸಿಎಂ ಸ್ಟಾಲಿನ್ ಅವರ ಆಡಳಿತಕ್ಕೆ ಸಿಕ್ಕ ಮನ್ನಣೆ. ಅವರು 20 ತಿಂಗಳಲ್ಲಿ ಸುಮಾರು 80 ಪ್ರತಿಶತದಷ್ಟು ಚುನಾವಣಾ ಭರವಸೆಗಳನ್ನು ಪೂರ್ಣಗೊಳಿಸಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿಯವರ ಮೇಲೆ ಜನರಿಗೆ ಎಷ್ಟು ಪ್ರೀತಿ ಮತ್ತು ವಾತ್ಸಲ್ಯವಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ' ಎಂದು ತಿಳಿಸಿದರು.

ತಮಿಳುನಾಡು 39 ಲೋಕಸಭಾ ಸ್ಥಾನಗಳನ್ನು ಹೊಂದಿದ್ದರೆ, ನೆರೆಯ ಪುದುಚೇರಿ ಒಂದು ಸ್ಥಾನವನ್ನು ಹೊಂದಿದೆ.
ಜನವರಿ 4 ರಂದು ಇಳಂಗೋವನ್ ಅವರ ಪುತ್ರ ಕಾಂಗ್ರೆಸ್ ಶಾಸಕ ಇ ತಿರುಮಹನ್ ಎವೆರಾ ಅವರ ನಿಧನದಿಂದಾಗಿ ಈರೋಡ್ ಪೂರ್ವ ಉಪಚುನಾವಣೆ ಅನಿವಾರ್ಯವಾಗಿತ್ತು.
ರಾಜಧಾನಿ ಚೆನ್ನೈನಿಂದ ಸುಮಾರು 400 ಕಿಮೀ ದೂರದಲ್ಲಿರುವ ಈರೋಡ್ ಜಿಲ್ಲೆಯ ಈ ಕ್ಷೇತ್ರದಲ್ಲಿ ಫೆಬ್ರವರಿ 27 ರಂದು ನಡೆದ ಉಪಚುನಾವಣೆಯಲ್ಲಿ ಸುಮಾರು 75 ಪ್ರತಿಶತದಷ್ಟು ಮತಗಳು ಚಲಾವಣೆಯಾಗಿದ್ದವು.

ಈ ಕ್ಷೇತ್ರದಲ್ಲಿ ಡಿಎಂಕೆಯ ಬಹುತೇಕ ಕ್ಯಾಬಿನೆಟ್ ಮಂತ್ರಿಗಳು ಮತ್ತು ಎಐಎಡಿಎಂಕೆಯ ಎಲ್ಲಾ ಮಾಜಿ ಮಂತ್ರಿಗಳು ತಳಮಟ್ಟದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವಾರ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಪ್ರಚಾರ ನಡೆಸಿದ್ದರು. ತಮ್ಮ ಪ್ರಚಾರ ಭಾಷಣಗಳಲ್ಲಿ, ದ್ರಾವಿಡ ಚಳವಳಿಯ ಹರಿಕಾರ ಪೆರಿಯಾರ್ ಅವರ ಕುಟುಂಬಕ್ಕೆ ಸೇರಿದ ಇಳಂಗೋವನ್ ಅವರ ತಂದೆ ಇವಿಕೆ ಸಂಪತ್ ಅವರ ಬಗ್ಗೆ ಮಾತನಾಡಿದ್ದರು. ಸಂಪತ್ ಪುತ್ರನಿಗೆ ನಿಮ್ಮ ಮತ ಕೇಳಲು ದಿವಂಗತ ಕರುಣಾನಿಧಿ ಪುತ್ರ ಇಲ್ಲಿಗೆ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದರು.
ಎಂ ಕೆ ಸ್ಟಾಲಿನ್ ಸರ್ಕಾರದ ಆಡಳಿತದ ವೈಖರಿ, ಇಳಂಗೋವನ್ ಅವರ ಪ್ರಾಮಾಣಿಕ ವ್ಯಕ್ತಿತ್ವ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಮತ್ತು ಬೆಳಗಿನ ಉಪಾಹಾರ ಯೋಜನೆಯಂತಹ ಜನಪ್ರಿಯ ಯೋಜನೆಗಳು ಸೇರಿದಂತೆ ಹಲವಾರು ಅಂಶಗಳು ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯ ಮಾಡಿವೆ. ಎರಡೂ ಪಕ್ಷಗಳಿಂದ ಸಂಪನ್ಮೂಲಗಳ ಬೃಹತ್ ನಿಯೋಜನೆಯ ಹೊರತಾಗಿಯೂ, ಕಾಂಗ್ರೆಸ್ ಅಭ್ಯರ್ಥಿಗೆ ತಮಿಳುನಾಡಿನಲ್ಲಿ ಗೆಲುವು ಸಿಕ್ಕಿದೆ.
77 ಅಭ್ಯರ್ಥಿಗಳು ಕಣದಲ್ಲಿದ್ದರೆ, ಇಳಂಗೋವನ್ ಮತ್ತು ಎಐಎಡಿಎಂಕೆ ಮಾಜಿ ಶಾಸಕ ತೆನ್ನರಸು ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ನಾಮ್ ತಮಿಳರ್ ಕಚ್ಚಿಯ ಎನ್ ಮೇನಕಾ ಮತ್ತು ಡಿಎಂಡಿಕೆಯ ಎಸ್ ಆನಂದ್ ಇತರ ಅಭ್ಯರ್ಥಿಗಳಲ್ಲಿ ಪ್ರಮುಖರಾಗಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.












Click it and Unblock the Notifications