Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಮತ್ತು ಕೊಯಮತ್ತೂರು ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ಆರೋಪಿಸಿದ್ದಾರೆ.
ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಕಾಣೆಯಾಗಿದೆ. ಇದು ಡಿಎಂಕೆ ರಾಜಕೀಯ ಷಡ್ಯಂತ್ರ. ಒಂದು ಲಕ್ಷ ಮತಗಳು ಕಾಣೆಯಾಗಿರುವುದಕ್ಕೆ ಯಾರು ಉತ್ತರ ಕೊಡುತ್ತಾರೆ ಎಂದು ಕೇಳಿದ್ದಾರೆ.

ಹೆಸರು ಕೈಬಿಟ್ಟಿರುವ ಸಂಬಂಧ ಬಿಜೆಪಿ ವತಿಯಿಂದ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಇಗಾಗಲೇ ದೂರು ನೀಡಲಾಗಿದೆ. ಹೆಚ್ಚಿನ ಸಂಖ್ಯೆಯ ಮತದಾರರ ಹೆಸರು ನಾಪತ್ತೆಯಾಗಿರುವ ಸ್ಥಳಗಳಲ್ಲಿ ಮರು ಮತದಾನ ನಡೆಸುವಂತೆಯೂ ಅಣ್ಣಾಮಲೈ ಆಗ್ರಹಿಸಿದ್ದಾರೆ.
Tamil Nadu | State BJP chief and Coimbatore Lok Sabha constituency candidate K Annamalai says, "We saw complaints from a large number of voters on their names being missing from the voters' list. This happened in many places. We are demanding re-poll in places where the names of… pic.twitter.com/zRmWkikhzC
— ANI (@ANI) April 19, 2024
ಪದಾಧಿಕಾರಿಗಳ ಹೆಸರೂ ಕಾಣೆಯಾಗಿದೆ
"ಮತದಾರರ ಪಟ್ಟಿಯಿಂದ ತಮ್ಮ ಹೆಸರು ನಾಪತ್ತೆಯಾಗಿರುವ ಬಗ್ಗೆ ಹೆಚ್ಚಿನ ಸಂಖ್ಯೆಯ ಮತದಾರರು ದೂರು ಕೊಟ್ಟಿದ್ದಾರೆ. ಹಲವು ಕಡೆಗಳಲ್ಲಿ ಇದೇ ರೀತಿ ಆಗಿದೆ. ಮತದಾರರ ಹೆಸರು ಕೈಬಿಟ್ಟಿರು ಕಡೆ ಮರು ಮತದಾನಕ್ಕೆ ಒತ್ತಾಯಿಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂದು ಅನುಮಾನವಿದೆ, ಬಿಜೆಪಿ ಪದಾಧಿಕಾರಿಗಳ ಹೆಸರುಗಳು ಕೂಡ ಮತದಾರರ ಪಟ್ಟಿಯಿಂದ ಕಾಣೆಯಾಗಿದೆ." ಎಂದು ಹೇಳಿದರು.
ಬಿಜೆಪಿ ಸದಸ್ಯರಿಂದ ಪ್ರತಿಭಟನೆ
ಕೊಯಮತ್ತೂರಿನ ಗೌಂಡಂಪಾಳ್ಯಂ ಪ್ರದೇಶದಲ್ಲಿ 830 ಜನರ ಮತಗಳು ನಾಪತ್ತೆಯಾಗಿವೆ ಎಂದು ಬಿಜೆಪಿ ಸದಸ್ಯರು ಮತಗಟ್ಟೆಯಲ್ಲಿ ಪ್ರತಿಭಟನೆ ನಡೆಸಿದರು.












Click it and Unblock the Notifications