ಮೋದಿ ಆಧ್ಯಾತ್ಮ ಗುರು ಸ್ವಾಮಿ ದಯಾನಂದ ವಿಧಿವಶ
ಬೆಂಗಳೂರು, ಸೆಪ್ಟೆಂಬರ್ 24 : ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಗುರು ಸ್ವಾಮಿ ದಯಾನಂದ ಸರಸ್ವತಿ ಶ್ರೀಗಳು ಬುಧವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಧ್ಯಾತ್ಮ ಗುರುಳಾದ ಸ್ವಾಮಿ ದಯಾನಂದ ಸರಸ್ವತಿ ಶ್ರೀಗಳನ್ನು ಸೆಪ್ಟೆಂಬರ್ 11ರಂದು ಭೇಟಿಯಾಗಿದ್ದರು.
ಉತ್ತರಾಖಂಡ್‍ನ ಋಷಿಕೇಶದ ಆಶ್ರಮದಲ್ಲಿ ಸ್ವಾಮಿ ದಯಾನಂದ ಸರಸ್ವತಿ (87) ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ವಾರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬುಧವಾರ ಸಂಜೆ ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡಿತ್ತು. ಆದ್ದರಿಂದ, ಆಶ್ರಮಕ್ಕೆ ಕರೆತರಲಾಗಿತ್ತು.

ತಡರಾತ್ರಿ ದಯಾನಂದ ಸ್ವಾಮೀಜಿ ಆಶ್ರಮದಲ್ಲೇ ವಿಧಿವಶರಾಗಿದ್ದಾರೆ. ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 11ರಂದು ಆಶ್ರಮಕ್ಕೆ ಭೇಟಿ ನೀಡಿ ತಮ್ಮ ಗುರುಗಳ ಆರೋಗ್ಯವನ್ನು ವಿಚಾರಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿದ್ದಾಗಲೂ ಮೋದಿಯವರಿಗೆ ದಯಾನಂದ ಶ್ರೀಗಳು ಗುರುಗಳಾಗಿದ್ದರು.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ದಯಾನಂದ ಶ್ರೀಗಳು ವಿಧಿವಶರಾದ ಸುದ್ದಿ ತಿಳಿದು ಕಂಬನಿ ಮಿಡಿದಿದ್ದಾರೆ.
Swami Dayananda Saraswati ji's demise is a personal loss. I pray that his soul attains eternal peace.
— Narendra Modi (@narendramodi) September 24, 2015 ಶುಕ್ರವಾರ ಸ್ವಾಮಿ ದಯಾನಂದ ಸರಸ್ವತಿ ಅವರ ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications