Get Updates
Get notified of breaking news, exclusive insights, and must-see stories!

ಹಲವು ಬಾರಿ ಮಾದಕ ವಸ್ತು ಖರೀದಿ ಸುಶಾಂತ್‌ಗೆ ನೀಡಿದ್ದ ರಿಯಾ ಚಕ್ರವರ್ತಿ: ಎನ್‌ಸಿಬಿ

ಮುಂಬೈ ಜುಲೈ 13: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಡ್ರಗ್ಸ್ ವಿರೋಧಿ ಸಂಸ್ಥೆ (ಎನ್‌ಸಿಬಿ) ಪ್ರಮುಖ ವಿಷಯವನ್ನು ಬಹಿರಂಗಪಡಿಸಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್ ಮತ್ತು ಇತರ ಆರೋಪಿಗಳಿಂದ ಹಲವಾರು ಬಾರಿ ಗಾಂಜಾ ಖರೀದಿಸಿ ಸುಶಾಂತ್ ಸಿಂಗ್ ರಜಪೂತ್ ಗೆ ನೀಡಿದ್ದಾಳೆ ಎಂದು ಎನ್‌ಸಿಬಿ ಹೇಳಿದೆ. ನಟಿ ರಿಯಾ ಚಕ್ರವರ್ತಿ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನಿಷೇಧಿತ ವಸ್ತುಗಳನ್ನು ಖರೀದಿಸಿದ್ದಾರೆ ಮತ್ತು ಅವರ ಅತಿಯಾದ ಮಾದಕ ವ್ಯಸನವನ್ನು ಉತ್ತೇಜಿಸುತ್ತಿದ್ದಾರೆ ಎಂದು ಎನ್‌ಸಿಬಿ ಆರೋಪಿಸಿದೆ.

ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020 ರಂದು ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳವಾರ ವಿಚಾರಣೆ ನಡೆಸಿದ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ 35 ಆರೋಪಿಗಳ ವಿರುದ್ಧ 38 ಆರೋಪಗಳನ್ನು ಎನ್‌ಸಿಬಿ ಇತ್ತೀಚೆಗೆ ಕರಡು ಆರೋಪಗಳನ್ನು ಸಲ್ಲಿಸಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ವಿಶೇಷ ನ್ಯಾಯಾಲಯಕ್ಕೆ ಎನ್‌ಸಿಬಿ ಹಸ್ತಾಂತರಿಸಿದ ಕರಡು ಆರೋಪಗಳ ಪ್ರತಿ ಆರೋಪಿಗಳ ವಿರುದ್ಧದ ಆರೋಪಗಳ ವಿವರಗಳನ್ನು ನೀಡುತ್ತದೆ.

ನಟ ಸುಶಾಂತ್ ಸಾವಿನ ಪ್ರಕರಣದ ತನಿಖೆಯಲ್ಲಿ ನಟಿ ರಿಯಾ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನನ ಮೇಲೆ ಹೊರಬಂದಿದ್ದರು. ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಮುಂದುವರೆಸಿದ್ದ ಎನ್‌ಸಿಬಿ ಮಹತ್ವದ ವಿಚಾರವನ್ನು ಬಹಿರಂಗಗೊಳಿಸಿದೆ. ಸುಶಾಂತ್ ಸಾವಿನ ಹಿಂದಿರುವ ಡ್ರಗ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಕೈವಾಡವಿದೆ ಎಂದು ಎನ್‌ಸಿಬಿ ಹೇಳಿದೆ.

ಸಹೋದರನೊಂದಿಗೆ ರಿಯಾ ಸಂಚು

ಸಹೋದರನೊಂದಿಗೆ ರಿಯಾ ಸಂಚು

ರಿಯಾ ಚಕ್ರವರ್ತಿ (ಸುಶಾಂತ್ ಸಿಂಗ್ ರಜಪೂತ್ ಅವರ ಆಗಿನ ಗೆಳತಿ) ಆರೋಪಿ ಸ್ಯಾಮ್ಯುಯೆಲ್ ಮಿರಾಂಡಾ, ಶೋವಿಕ್ ಚಕ್ರವರ್ತಿ, ದೀಪೇಶ್ ಸಾವಂತ್ ಮತ್ತು ಇತರರಿಂದ ಗಾಂಜಾವನ್ನು ಹಲವು ಬಾರಿ ಪಡೆದಿದ್ದಾರೆ. ಮತ್ತು ಆ ಎಲ್ಲಾ ಡೆಲಿವರಿಗಳನ್ನು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಕರಡು ಆರೋಪದಲ್ಲಿ ಹೇಳಲಾಗಿದೆ. ಈ ಎಲ್ಲಾ ಮಾರಾಟವನ್ನು ಸುಶಾಂತ್ ಸಿಂಗ್ ರಜಪೂತ್ ಸಹಾಯದಿಂದ ಶೋವಿಕ್ ಚಕ್ರವರ್ತಿ ಪಾವತಿಸಿದ್ದಾರೆ.

ಆರೋಪಿಗಳು ಮುಂಬೈನಲ್ಲಿ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಮತ್ತು ಅವರಿಗೆ ಹಣವನ್ನು ನೀಡಿದ್ದು ಮಾತ್ರವಲ್ಲದೆ ಗಾಂಜಾ, ಚರಸ್, ಕೊಕೇನ್‌ನಂತಹ ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಎಂದು ಎನ್‌ಸಿಬಿ ಮಂಗಳವಾರ ಹೇಳಿಕೊಂಡಿದೆ. ಅಕ್ರಮ ಸಾಗಾಣಿಕೆಗೆ ಹಣ ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ಈ ಎಲ್ಲ ಆರೋಪಿಗಳ ವಿರುದ್ಧ ಸೆಕ್ಷನ್ 27 ಮತ್ತು 27ಎ ವಿಧಿಸಲಾಗಿದೆ. ಇದಲ್ಲದೆ ಕಲಂ 28 ಮತ್ತು ಸೆಕ್ಷನ್ 29 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು

ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು

ರಿಯಾ ಚಕ್ರವರ್ತಿ (ಸುಶಾಂತ್ ಸಿಂಗ್ ರಜಪೂತ್ ಅವರ ಆಗಿನ ಗೆಳತಿ) ಆರೋಪಿ ಸ್ಯಾಮ್ಯುಯೆಲ್ ಮಿರಾಂಡಾ, ಶೋವಿಕ್ ಚಕ್ರವರ್ತಿ, ದೀಪೇಶ್ ಸಾವಂತ್ ಮತ್ತು ಇತರರಿಂದ ಗಾಂಜಾವನ್ನು ಹಲವು ಬಾರಿ ಪಡೆದಿದ್ದಾರೆ. ಮತ್ತು ಆ ಎಲ್ಲಾ ಡೆಲಿವರಿಗಳನ್ನು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಕರಡು ಆರೋಪದಲ್ಲಿ ಹೇಳಲಾಗಿದೆ. ಈ ಎಲ್ಲಾ ಮಾರಾಟವನ್ನು ಸುಶಾಂತ್ ಸಿಂಗ್ ರಜಪೂತ್ ಸಹಾಯದಿಂದ ಶೋವಿಕ್ ಚಕ್ರವರ್ತಿ ಪಾವತಿಸಿದ್ದಾರೆ.

ನ್ಯಾಯಾಧೀಶ ವಿಜಿ ರಘುವಂಶಿ ಅವರಿಂದ ವಿಚಾರಣೆ

ನ್ಯಾಯಾಧೀಶ ವಿಜಿ ರಘುವಂಶಿ ಅವರಿಂದ ವಿಚಾರಣೆ

ಆರೋಪಗಳನ್ನು ರೂಪಿಸುವ ಮೊದಲು ನ್ಯಾಯಾಲಯವು ಎಲ್ಲಾ ಆರೋಪಿಗಳ ಖುಲಾಸೆ ಅರ್ಜಿಯನ್ನು ಪರಿಗಣಿಸುತ್ತದೆ. ಎನ್‌ಡಿಪಿಎಸ್ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶ ವಿಜಿ ರಘುವಂಶಿ ಅವರು ಜುಲೈ 27 ರಂದು ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.

ಶೋವಿಕ್ ಮಾದಕ ವಸ್ತು ಮಾರಾಟಗಾರನೊಂದಿಗೆ ಸಂಪರ್ಕ

ಶೋವಿಕ್ ಮಾದಕ ವಸ್ತು ಮಾರಾಟಗಾರನೊಂದಿಗೆ ಸಂಪರ್ಕ

ಸುಶಾಂತ್ ಸಿಂಗ್ ರಜಪೂತ್ ಹೇಗೆ ಸತ್ತರು ಎಂಬ ತನಿಖೆಯನ್ನು ಈಗಾಗಲೇ ಸಿಬಿಐಗೆ ಹಸ್ತಾಂತರಿಸಲಾಗಿದೆ. ಅದೇ ಸಮಯದಲ್ಲಿ, NCB ಈ ಪ್ರಕರಣವನ್ನು ಡ್ರಗ್ಸ್ ಕೋನದಿಂದ ತನಿಖೆ ನಡೆಸುತ್ತಿದೆ. ಸುಶಾಂತ್ ಸಾವಿಗೂ ಡ್ರಗ್ಸ್‌ಗೂ ಏನು ಸಂಬಂಧ ಎಂದು ಎನ್‌ಸಿಬಿ ತನಿಖೆ ನಡೆಸುತ್ತಿದೆ. ರಿಯಾ ಅವರ ಸಹೋದರ ಶೋವಿಕ್ ಮಾದಕ ದ್ರವ್ಯ ದಂಧೆಕೋರರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಮನೆಗೆ ತಲುಪಿಸಬೇಕಾದ ಆದೇಶಗಳನ್ನು ನೀಡುತ್ತಿದ್ದರು ಎಂದು ಎನ್‌ಸಿಬಿ ಹೇಳಿದೆ. ಒಂದು ವೇಳೆ ಎನ್‌ಸಿಬಿ ವಿಚಾರಣೆ ಕಲೆಹಾಕಿದ ಮಾಹಿತಿ ನಿಜವಾದರೆ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಹಾಗೂ ಇತರ ಆರೋಪಿಗಳಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ.

Recommended Video

      James Webb Telescope ಸೆರೆಹಿಡಿದ ಚಿತ್ರದ ಬಗ್ಗೆ ಕಂಪ್ಲೀಟ್ ಮಾಹಿತಿ | *World | OneIndia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+