ಸಮೀಕ್ಷೆ : ಅಪನಗದೀಕರಣದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23 : ಪ್ರತಿ ಭಾರತೀಯ ಇಂದು ಮಾತಾಡುತ್ತಿರುವುದು ಒಂದೇ ವಿಷಯ, ಅದು ಅಪನಗದೀಕರಣ. ಈ ಸಮಸ್ಯೆ ಇಂದು ಪ್ರತಿಯೊಬ್ಬರಿಗೂ ತಟ್ಟಿದೆ. ಇದರ ಅನುಷ್ಠಾನದಿಂದ ದೀರ್ಘಕಾಲೀನ ಲಾಭವಿದೆ ಎಂದು ಸರಕಾರ ಹೇಳಿದರೆ, ಸಾಕಷ್ಟು ದೂರುಗಳೂ ಕೇಳಿಬರುತ್ತಿವೆ. ಅಪನಗದೀಕರಣದ ಬಗ್ಗೆ ನಿಮ್ಮ ಖಚಿತ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗೂ ಮಹತ್ವ ಸಿಗಬೇಕಿದ್ದರೆ ಒನ್ಇಂಡಿಯಾದ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ.

ಕಪ್ಪು ಹಣ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ ಎಂದು ನರೇಂದ್ರ ಮೋದಿ ಸರಕಾರ ನವೆಂಬರ್ 8ರಂದು ಹಳೆಯ 500 ರುಪಾಯಿ ಮತ್ತು 1000 ರುಪಾಯಿ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡಿದ್ದು ಭಾರತದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಶೇ.87ರಷ್ಟು ಜನರು ಈ ನಿರ್ಧಾರವನ್ನು ಸ್ವಾಗತಿಸಿದ್ದರೆ, ರಾಜಕೀಯ ವಿರೋಧಿಗಳು ಇದೊಂದು ದೊಡ್ಡ ಹಗರಣ ಎಂಬಂತೆ ಬಿಂಬಿಸುತ್ತಿವೆ.

ದೈನಂದಿನ ಜೀವನದಲ್ಲಿ ನರೇಂದ್ರ ಮೋದಿ ಸರಕಾರದ ಈ ಮಹತ್ವದ ನಡೆಯಿಂದ ಯಾವ ರೀತಿ ಬದಲಾವಣೆಗಳಾಗಿವೆ? ಮುಂದೆ ಸರಕಾರ ಏನು ಮಾಡಬೇಕೆಂದು ಬಯಸುತ್ತೀರಿ? ಅಪನಗದೀಕರಣವನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೀರೋ, ಇದರಿಂದ ತುಂಬಾ ಕಷ್ಟವಾಗಿದೆಯೆಂದು ಟೀಕಿಸುತ್ತೀರೋ, ನಿಮಗೆ ಬಿಟ್ಟಿದ್ದು. ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ತಿಳಿಸಿ. ಹಾಗೆಯೆ, ಕಾಮೆಂಟ್ ಬಾಕ್ಸ್‌ನಲ್ಲಿಯೂ ನಿಮ್ಮ ಅನಿಸಿಕೆ ಬರೆಯಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Every Indian today speaks about nothing but demonetisation. The issue affects each and everyone. While the government says demonetisation would help in the long run, there are complaints about its implementation. What do you think about demonetisation. If you want to be heard, then take this OneIndia survey.
Please Wait while comments are loading...