ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಸಮಾಧಿ ಮುಂದೆ ಮುಗ್ಗರಿಸಿ ಬಿಕ್ಕಿದ ಶಶಿಕಲಾ

ಜೈಲುಪಾಲಾಗುವ ಮುನ್ನ 'ಅಮ್ಮ'ನ ಸಮಾಧಿಗೆ ಶಶಿಕಲಾ ಮತ್ತು ಪಟಾಲಂ ಬಂದು ನಮಸ್ಕರಿಸಿದೆ. ಒಂದು ಕ್ಷಣ ಭಾವುಕರಾದಂತೆ ಕಂಡುಬಂದ ಶಶಿಕಲಾ ಕೆಳಗೆ ಬಗ್ಗೆ ನಮಸ್ಕರಿಸಿ ಏಳುವ ಮುನ್ನ ಮುಗ್ಗರಿಸಿ ಸಮಾಧಿ ಮೇಲೆ ಕೈ ಊರಿದರು.

By Prasad
|
Google Oneindia Kannada News

ನವದೆಹಲಿ, ಫೆಬ್ರವರಿ 15 : ಜಯಲಲಿತಾ ಅವರ ಸಮಾಧಿಗೆ ಭಾವಪೂರ್ವಕವಾಗಿ ನಮಿಸಿದ ನಂತರ ಅಕ್ರಮ ಆಸ್ತಿ ಗಳಿಕೆಯ ಅಪರಾಧಿ ನಂ.2 ಶಶಿಕಲಾ ನಟರಾಜನ್ ಅವರು ಕಾರಿನಲ್ಲಿ ಬೆಂಗಳೂರಿನತ್ತ ಪಯಣ ಬೆಳೆಸಿದರು.

ಮುಗ್ಗರಿಸಿದ ಶಶಿಕಲಾ : ಜೈಲುಪಾಲಾಗುವ ಮುನ್ನ 'ಅಮ್ಮ'ನ ಸಮಾಧಿಗೆ ಶಶಿಕಲಾ ಮತ್ತು ಪಟಾಲಂ ಬಂದು ನಮಸ್ಕರಿಸಿದೆ. ಒಂದು ಕ್ಷಣ ಭಾವುಕರಾದಂತೆ ಕಂಡುಬಂದ ಶಶಿಕಲಾ ಕೆಳಗೆ ಬಗ್ಗೆ ನಮಸ್ಕರಿಸಿ ಏಳುವ ಮುನ್ನ ಮುಗ್ಗರಿಸಿ ಸಮಾಧಿ ಮೇಲೆ ಕೈ ಊರಿದರು.

"ನನಗೆ ಸ್ವಲ್ಪ ವೈಯಕ್ತಿಕ ಕೆಲಸಗಳಿವೆ. ಆರೋಗ್ಯದ ಸಮಸ್ಯೆಯೂ ಇದೆ. ಕೋರ್ಟಿಗೆ ಶರಣಾಗತಿಯಾಗಲು ಸ್ವಲ್ಪ ಸಮಯ ಕೊಡಿ" ಎಂದು ಶಶಿಕಲಾ ನಟರಾಜನ್ ಮಾಡಿಕೊಂಡಿರುವ ಮನವಿ ಅವರಿಗೇ ಮುಳುವಾಗಿದೆ.

ಒಂದು ಕ್ಷಣವೂ ಕಾಲಾವಕಾಶ ನೀಡುವುದಿಲ್ಲ, ಈಗಿಂದೀಗಲೇ ಬೆಂಗಳೂರಿನಲ್ಲಿನ ನ್ಯಾಯಾಲಯಕ್ಕೆ ಶರಣಾಗಿರಿ ಎಂದು ಸರ್ವೋಚ್ಚ ನ್ಯಾಯಾಲಯ ಶಶಿಕಲಾಗೆ ತಪರಾಕಿ ಕೊಟ್ಟಿದೆ. ಇನ್ನೂ ತಡಮಾಡಿದರೆ ಕೆಲಸ ಕೆಟ್ಟೀತೆಂದು ಶಶಿಕಲಾ ಅವರು ಈಕ್ಷಣವೇ ಪೋಯೆಸ್ ಗಾರ್ಡನ್ ನಿಂದ ಬೆಂಗಳೂರಿಗೆ ಹೊರಟಿದ್ದಾರೆ. [ಶಶಿಕಲಾಗೆ ಜ್ಯೋತಿಷಿ ಹೇಳಿದ್ದ ಭವಿಷ್ಯದ ಕತೆ ಏನಾಯ್ತು?]

Surrender Now : Supreme Court orders Sasikala Natarajan

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಲೆವೆಲ್ಲಿಗೆ ತಾನಿದ್ದೇನೆಂಬ ಭ್ರಮೆಯಲ್ಲಿರುವ, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಎರಡನೇ ಅಪರಾಧಿ ಶಶಿಕಲಾ ನಟರಾಜನ್ ಅವರ ತಡಮಾಡುವ ತಂತ್ರಗಾರಿಕೆ ಫಲಿಸಿಲ್ಲ. ಬುಧವಾರ ಮಧ್ಯಾಹ್ನದ ಹೊತ್ತಿಗೆ ಅವರು ಕೋರ್ಟಿಗೆ ಶರಣಾಗಲೇಬೇಕಿದೆ.[ಇಂದಲ್ಲ ನಾಳೆ ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ಬರಲೇಬೇಕು!]

ಶಶಿಕಲಾ ಅವರ ವಕೀಲರು ಈಕುರಿತು ಮನವಿ ಮಾಡಿಕೊಳ್ಳುತ್ತಿದ್ದಂತೆ, ಕೆಳನ್ಯಾಯಾಲಯದ ತೀರ್ಪನ್ನು ಎತ್ತಿಡಿದಿರುವ ನ್ಯಾಯಮೂರ್ತಿಗಳಾದ ಪಿಸಿ ಘೋಸ್ ಮತ್ತು ನ್ಯಾ. ಅಮಿತವಾ ರಾಯ್ ಅವರು ಕೆಂಡಾಮಂಡಲರಾಗಿದ್ದಾರೆ. ನಾವು ಹೊರಡಿಸಿರುವ ಆದೇಶವನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡುವುದು ಸಾಧ್ಯವಿಲ್ಲ ಎಂದಿದ್ದಾರೆ. [ಮೋದಿಯ ತೆರೆಯ ಹಿಂದಿನ ರಾಜಕೀಯಕ್ಕೆ ಹೈರಾಣಾದರೆ ಶಶಿಕಲಾ?]

Surrender Now : Supreme Court orders Sasikala Natarajan

ಉಡಾಫೆ ತೋರಿದ ಶಶಿ : ಸ್ವಲ್ಪ ಸಮಯ ನೀಡದಿದ್ದರೆ ನನಗೆ ತುಂಬಾ ನಷ್ಟವಾಗುತ್ತದೆ ಎಂದಿರುವ ಅವರು, ಆ ಖಾಸಗಿ ಕೆಲಸಗಳಾವುವು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲದಿರುವುದು ಅವರ ಉಡಾಫೆಯನ್ನು ತೋರಿಸಿದೆ. ಇಂಥದೇ ಬಗೆಯ ಮನವಿಪತ್ರವನ್ನು ಉಳಿದಿಬ್ಬರು ಆರೋಪಿಗಳಾದ ಇಳವರಸಿ ಮತ್ತು ಸುಧಾಕರನ್ ಅವರು ಕೂಡ ಹೂಡಿದ್ದರು.

ಬುಧವಾರ ಮಧ್ಯಾಹ್ನವೇ ಬೆಂಗಳೂರಿನಲ್ಲಿನ ನ್ಯಾಯಾಲಯಕ್ಕೆ ಈ ಮೂವರು ಅಪರಾಧಿಗಳು ಶರಣಾಗಬೇಕಿರುವುದರಿಂದ ಸಿಟಿ ಸಿವಿಲ್ ಕೋರ್ಟ್ ಆವರಣ ಮತ್ತು ಸೇರಬೇಕಾಗಿರುವ ಪರಪ್ಪನ ಅಗ್ರಹಾರ ಜೈಲಿನ ಬಳಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

English summary
Supreme Court of India has lashed out at Sasikala Natarajan to surrender before court in Bengaluru now itself. Sasikala, 2nd accused in disproportionate assets case had sought time to surrender before court citing personal reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X