2 ಮತ್ತು 4ನೇ ಶನಿವಾರದ ರಜೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ದೇಶದಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರದ ರಜೆ ಕುರಿತು ಭಾರೀ ಚರ್ಚೆ ಆಗುತ್ತಿತ್ತು. ಆದರೆ ಇದೀಗ ಸಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸುವ ಮೂಲಕ ಇದಕ್ಕೆ ತೆರೆ ಎಳೆಯುವ ಕೆಲಸವನ್ನು ಮಾಡಿದೆ. ಹಾಗಾದ್ರೆ ಯಾವ ಕಚೇರಿಗಳ ರಜೆ ಕುರಿತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯವು ಸುಪ್ರೀಂ ಕೋರ್ಟ್ ನಿಯಮಗಳು 2025ರ ಪ್ರಕಾರ, 2ನೇ ಮತ್ತು 4ನೇ ಶನಿವಾರ ಸುಪ್ರೀಂ ಕೋರ್ಟ್‌ನ ನೋಂದಾವಣೆ ಮತ್ತು ಕಚೇರಿಗಳ ಕೆಲಸದ ದಿನಗಳ ಪಟ್ಟಿಗೆ ಮರಳಿ ಸೇರ್ಪಡೆ ಮಾಡಿದೆ.

ಗೆಜೆಟ್‌ನಲ್ಲಿ ಪ್ರಕಟವಾದ ಅಧಿಸೂಚನೆಯ ಪ್ರಕಾರ, ಜುಲೈ 14ರಿಂದ ಸುಪ್ರೀಂ ಕೋರ್ಟ್‌ನ ನೋಂದಾವಣೆ ಮತ್ತು ಕಚೇರಿ ಸಿಬಂದಿಗಳಿಗೆ ಈ ತಿದ್ದುಪಡಿ ಜಾರಿಗೆ ಬಂದಿದೆ. ಈ ಬದಲಾವಣೆ ಸುಪ್ರೀಂ ಕೋರ್ಟ್ ನಿಯಮಗಳ ಆದೇಶ II, ನಿಯಮಗಳು 1 ರಿಂದ 3ರ ಅಡಿಯಲ್ಲಿ ಇದ್ದು, ಕೆಲಸದ ದಿನಗಳು ಮತ್ತು ಕಚೇರಿ ಸಮಯಗಳಿಗೆ ಪರಿಷ್ಕೃತ ಚೌಕಟ್ಟನ್ನು ಪರಿಚಯಿಸಿವೆ. ಹೊಸ ಅಧಿಸೂಚನೆ ಪ್ರಕಾರ, ಸುಪ್ರೀಂ ಕೋರ್ಟ್‌ನ ಕಚೇರಿಗಳು ಇದೀಗ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಕಾರ್ಯನಿರ್ವಹಿಸಲಿವೆ.
ಗೊತ್ತುಪಡಿಸಿದ ರಜಾ ದಿನಗಳು ಮತ್ತು ಭಾಗಶಃ ಕೆಲಸದ ದಿನಗಳನ್ನು ಹೊರತುಪಡಿಸಿ ನಿಯಮಿತ ವಾರದ ದಿನಗಳಲ್ಲಿ ಸಂಜೆ 4.30ರ ನಂತರ ತುರ್ತು ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಕೋರ್ಟ್‌ನ ಕಚೇರಿಯು ಇನ್ಮುಂದೆ ಎರಡನೇ ಹಾಗೂ ನಾಲ್ಕನೇ ಶನಿವಾರಗಳು ಸೇರಿದಂತೆ ಎಲ್ಲಾ ಶನಿವಾರ ತೆರೆದಿರುತ್ತದೆ. ಶನಿವಾರ ಕಚೇರಿ ಸಮಯ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಇರುತ್ತದೆ ಮತ್ತು ತುರ್ತು ವಿಷಯಗಳನ್ನು ಮಧ್ಯಾಹ್ನ 12 ಗಂಟೆಯ ಮೊದಲು ಸಲ್ಲಿಕೆ ಮಾಡಬೇಕು.
ಕ್ರಿಸ್‌ಮಸ್/ ಹೊಸ ವರ್ಷದಂತಹ ವಿಶೇಷ ರಜಾದಿನಗಳಿಗಾಗಿ, ಕೆಲಸದ ಸಮಯವನ್ನು ಭಾರತದ ಮುಖ್ಯ ನ್ಯಾಯಾಧೀಶರು ಪ್ರಕರಣದಿಂದ ಪ್ರಕರಣಕ್ಕೆ ಅನುಗುಣವಾಗಿ ನಿರ್ಧರಿಸಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದೆ.
ಶಾಲಾ ರಜಾ ದಿನಗಳ ವಿವರ: ದಸರಾ ರಜೆಯು 2025 ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರ ವರೆಗೆ. ಬೇಸಿಗೆ ರಜೆಯು 2026 ಏಪ್ರಿಲ್ 11 ರಿಂದ 2026 ಮೇ 5ರ ವರೆಗೆ ಇರಲಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 123 ರಜೆ ದಿನಗಳು ಇವೆ. ಉಳಿದಂತೆ 242 ದಿನ ಶಾಲೆಗಳು ತೆರೆಯಲಿವೆ.
ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನ, ಪಠ್ಯೇತರ ಚಟುವಟಿಕೆ, ಪಠ್ಯ ಚಟುವಟಿಕೆ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನ, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 4 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ಮೀಸಲಿಡಲಾಗಿದೆ.












Click it and Unblock the Notifications