ರಾಮ ಜನ್ಮಭೂಮಿ ಬಗ್ಗೆ ತ್ವರಿತ ತೀರ್ಪು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಬಿಜೆಪಿ ಪಕ್ಷವು ಬಹುಮತದಿಂದ ಅಧಿಕಾರ ಪಡೆದ ಹಿನ್ನೆಲೆಯಲ್ಲಿ ಸುಬ್ರಮಣ್ಯ ಸ್ವಾಮಿಯವರು ಸುಪ್ರೀಂ ಕೋರ್ಟ್ ನಲ್ಲಿ ರಾಮಜನ್ಮಭೂಮಿ ಪ್ರಕರಣದ ಶೀಘ್ರ ತೀರ್ಪಿಗೆ ಮನವಿ ಮಾಡಿದ್ದರು.
ನವದೆಹಲಿ, ಮಾರ್ಚ್ 31: ರಾಮ ಜನ್ಮ ಭೂಮಿ ವಿಚಾರದಲ್ಲಿ ತ್ವರಿತವಾಗಿ ವಿಚಾರಣೆ ನಡೆಸಿ, ಶೀಘ್ರವಾಗಿ ತೀರ್ಪು ಪ್ರಕಟಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಶುಕ್ರವಾರ (ಮಾರ್ಚ್ 31) ಕೈಗೆತ್ತಿಕೊಂಡಿದ್ದ ನ್ಯಾಯಪೀಠ, ತನ್ನ ಸ್ಪಷ್ಟ ನಿಲುವನ್ನು ಸ್ವಾಮಿಯವರಿಗೆ ತಿಳಿಸಿತು.

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಬಿಜೆಪಿ ಪಕ್ಷವು ಬಹುಮತದಿಂದ ಅಧಿಕಾರ ಪಡೆದ ಹಿನ್ನೆಲೆಯಲ್ಲಿ ಸುಬ್ರಮಣ್ಯ ಸ್ವಾಮಿಯವರು ಸುಪ್ರೀಂ ಕೋರ್ಟ್ ನಲ್ಲಿ ರಾಮಜನ್ಮಭೂಮಿ ಪ್ರಕರಣದ ಶೀಘ್ರ ತೀರ್ಪಿಗೆ ಮನವಿ ಮಾಡಿದ್ದರು.
ರಾಮ ಜನ್ಮಭೂಮಿ ವಿವಾದ ಒಂದು ಸೂಕ್ಷ್ಮವಾದ ವಿಚಾರವಾಗಿದ್ದು, ಇದನ್ನು ನ್ಯಾಯಾಲಯದ ಚೌಕಟ್ಟಿನ ಹೊರಗಡೆ ಸೌಹಾರ್ದಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಈಗಾಗಲೇ ನ್ಯಾಯಪೀಠ ಸಲಹೆ ಮಾಡಿದೆ. ಆದರೂ, ಮತ್ತೊಮ್ಮೆ ಮನವಿ ಸಲ್ಲಿಸಿ ತ್ವರಿತ ತೀರ್ಪಿಗೆ ಆಗ್ರಹಿಸಲಾಗಿದೆ. ಆದರೆ, ಅಷ್ಟು ಬೇಗನೇ ತ್ವರಿತ ವಿಚಾರಣೆಗೆ ನೀಡುವಷ್ಟು ಸಮಯ ಸುಪ್ರೀಂ ಕೋರ್ಟ್ ಗೆ ಇಲ್ಲ ಎಂದು ಖಾರವಾದ ಪ್ರತಿಕ್ರಿಯೆಯನ್ನು ನ್ಯಾಯಪೀಠ ನೀಡಿತು.

Click it and Unblock the Notifications