ಸುನಂದಾಗೆ ರಷ್ಯನ್ ವಿಷ, ಮೈತುಂಬಾ ಗಾಯ!

ನವದೆಹಲಿ, ಫೆ.25: ಕೇಂದ್ರ ಸಚಿವ ಶಶಿ ತರೂರ್ ಅವರು ತನ್ನ ಪತ್ನಿ ಸುನಂದಾ ಪುಷ್ಕರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೊಮ್ಮೆ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಮುಖಂಡ ಸುಬ್ರಮಣ್ಯನ್ ಸ್ವಾಮಿ ಅವರು ಸುನಂದಾ ಅವರದ್ದು ಸಹಜ ಸಾವಲ್ಲ, ಅದೊಂದು ಕೊಲೆ, ರಷ್ಯನ್ ವಿಷ ನೀಡಿ ಹತ್ಯೆಗೈಯಲಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಟ್ವೀಟ್ ಮಾಡಿದ್ದಾರೆ.

ದೆಹಲಿ ಪೊಲೀಸರ ಕೆಲವು ಮೂಲಗಳ ಪ್ರಕಾರ ಸುನಂದಾರದು ಆತ್ಮಹತ್ಯೆಯಲ್ಲ, ಹತ್ಯೆ. ಸುನಂದಾ ಮೈಮೇಲೆ, ಬಾಯಿಯನ್ನು ಬಲವಂತವಾಗಿ ತೆರೆದು ವಿಷ ಹಾಕುವ ವೇಳೆ ಮೂಗಿನ ಹೊಳ್ಳೆಗಳಿಗೆ ಗಾಯಗಳಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಅಥವಾ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಾರ್ಕಿಕ ಅಂತ್ಯ ಒದಗಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ವಾಮಿ ತಿಳಿಸಿದ್ದಾರೆ.

ಸುನಂದಾ ಅವರನ್ನು ಅವರನ್ನು ಸಾವಿನ ದವಡೆಗೆ ನೂಕಿದ್ದು ಮಾತ್ರ ಅತಿಯಾದ ಮಾತ್ರೆ ಸೇವನೆ ಅದನ್ನು drug poisoning ಎಂದೂ ಕರೆಯುತ್ತಾರೆ ಎಂದು ಏಮ್ಸ್ ವೈದ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ, ಇದರ ಬೆನ್ನಲ್ಲೆ ಸುನಂದಾ ಅವರ ಮೈಮೇಲೆ ಆಗಿದ್ದ ಗಾಯಗಳು ಬೇರೆ ಕಥೆಯನ್ನೇ ಹೇಳುತ್ತಿವೆ.. ಏನದು ಕಥೆ ಮುಂದೆ ಓದಿ...

ಸುನಂದಾ ಪತಿ ಶಶಿ ತರೂರ್ ನಿರಾಕರಣೆ

ಸುನಂದಾ ಪತಿ ಶಶಿ ತರೂರ್ ನಿರಾಕರಣೆ

ಸುಬ್ರಮಣ್ಯ ಸ್ವಾಮಿ ಆರೋಪವನ್ನು ಸುನಂದಾ ಪತಿ ಶಶಿ ತರೂರ್ ನಿರಾಕರಿಸಿದ್ದಾರೆ. ಸುನಂದಾರದು ಆತ್ಮಹತ್ಯೆಯಲ್ಲ ಹತ್ಯೆ ಎನ್ನುವ ಕುರಿತು ಸ್ವಾಮಿ ಬಳಿ ದಾಖಲೆಗಳಿದ್ದರೆ ಅದನ್ನು ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ. ಜತೆಗೆ ಸ್ವಾಮಿ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ಬಿಟ್ಟೇ ಬಿಟ್ಟಿದ್ದೇನೆ ಎಂದು ತರೂರ್ ಹೇಳಿದ್ದಾರೆ.

ಹೊಚ್ಚ ಹೊಸ ಮರಣೋತ್ತರ ಪರೀಕ್ಷಾ ವರದಿ

ಹೊಚ್ಚ ಹೊಸ ಮರಣೋತ್ತರ ಪರೀಕ್ಷಾ ವರದಿ

ಸುನಂದಾ ಮಣಿಕಟ್ಟಿನ ಮೇಲೆ ಇಂಜೆಕ್ಷನ್ ಗುರುತು ಇತ್ತು. ದೇಹದಿಂದ ದುರ್ಗಂಧ ಪೂರಿತ ಗಾಳಿ ಹೊರ ಬಂದಿತ್ತು. ಗಾಯಗಳು ಬಲವಾಗಿ ಒತ್ತಡ ಹೇರಿದ್ದರಿಂದ ಆಗಿದೆ. ಗಾಯದ ಸಂಖ್ಯೆ 10 ಇಂಜೆಕ್ಷನ್ ಗುರುತಿನಿಂದ ಆಗಿದೆ.

ಒಟ್ಟಾರೆ 15 ಗಾಯಗಳು ದೇಹದ ಮೇಲಿದೆ. ಎಲ್ಲವೂ ಸಾವಿನ ಸಮಯಕ್ಕೂ 12 ಗಂಟೆಯೊಳಗೆ ಆಗಿವೆ. ಗಾಯ ಸಂಖ್ಯೆ 12 ಹಲ್ಲಿನ ಕಡಿತದಿಂದ ಆಗಿದೆ. ಚುಚ್ಚುಮದ್ದು ಬಗ್ಗೆ ವಿಸೇರಾ(viscera) ವರದಿ ಹೆಚ್ಚಿನ ಮಾಹಿತಿ ನೀಡಲಿದೆ ಎಂದು ಡಾ. ಸುಧೀರ್ ಗುಪ್ತ ಹೇಳಿದ್ದಾರೆ.

ಗಾಯದ ಬಗ್ಗೆ ಮತ್ತೆ ಪ್ರಶ್ನಿಸಿದ ಸುಬ್ರಮಣ್ಯ ಸ್ವಾಮಿ

ಸುನಂದಾ ಅವರ ಮೈಮೇಲೆ ಗಾಯದ ಕಲೆ ಇದ್ದ ಬಗ್ಗೆ ಬಂದಿರುವ ವರದಿ ಬಗ್ಗೆ ಮತ್ತೆ ಪ್ರಶ್ನಿಸಿದ ಸುಬ್ರಮಣ್ಯ ಸ್ವಾಮಿ

ದೆಹಲಿಯ ಏಮ್ಸ್ ವೈದ್ಯರು ನೀಡಿದ ಪ್ರಾಥಮಿಕ ವರದಿ

ದೆಹಲಿಯ ಏಮ್ಸ್ ವೈದ್ಯರು ನೀಡಿದ ಪ್ರಾಥಮಿಕ ವರದಿ

ಸುನಂದಾ ಅವರು ಮದ್ಯ ಸೇವಿಸಿರಲಿಲ್ಲ, ಮಾತ್ರೆ ಸೇವಿಸಿದ್ದಾರೆ: ದೆಹಲಿಯ ಏಮ್ಸ್ ವೈದ್ಯರ ಪ್ರಕಾರ ಸುನಂದಾ ಅವರ ಅಟಾಪ್ಸಿ ನಡೆಸಿದ ಮೇಲೆ ಆಕೆ ಆಲ್ಕೋಹಾಲ್ ಸೇವಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ, ಮಾನಸಿಕ ಒತ್ತಡ ನಿವಾಕರ ಸೆಡಟಿವ್ ಸೈಕೋಆಕ್ಟಿವ್ ಡ್ರಗ್ Alprazolam ಸೇವಿಸಿರುವುದು ಪತ್ತೆಯಾಗಿದೆ. ಹೋಟೆಲ್ ರೂಮಿನಲ್ಲೂ ಕೂಡಾ Alprax ನ ಒಂದು ಸ್ಟ್ರಿಪ್ ಸಿಕ್ಕಿದೆ. ಅತಿಯಾದ ಮಾತ್ರೆ ಸೇವನೆಯಿಂದ ಸಾವು ಸಂಭವಿಸಿದೆ.

ಲಾಹೋರ್ ಮೆಹರ್ ತರಾರ್ ಟ್ವೀಟ್ ಕಿರಿಕಿರಿ

ಲಾಹೋರ್ ಮೆಹರ್ ತರಾರ್ ಟ್ವೀಟ್ ಕಿರಿಕಿರಿ

ಲಾಹೋರ್ ಮೂಲದ ಮೆಹರ್ ತರಾರ್ ಅವರು ಡೈಲಿ ಟೈಮ್ಸ್ ನಲ್ಲಿ ಸಹಾಯಕ ಸಂಪಾದಕಿಯಾಗಿದ್ದವರು. ಹಲವಾರು ಪ್ರಮುಖ ದೈನಿಕ ಪತ್ರಿಕೆಗಳಿಗೂ ಅಂಕಣಗಳನ್ನು ಬರೆದಿದ್ದಾರೆ. ಇದೆಲ್ಲಕ್ಕಿಂತ ನಾನೊಬ್ಬ ಗೃಹಿಣಿ, ಮಗುವಿನ ತಾಯಿ ಎಂದು ಹೇಳಿಕೊಳ್ಳುವ ಮೆಹರ್ ಈಗ ಸುನಂದಾ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದರು. ಐಎಸ್ ಐ ಏಜೆಂಟ್ ಎಂದಿರುವ ಸುನಂದಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. Meeting Shashi Tharoor ಹೆಸರಿನಲ್ಲಿ ಲೇಖನ ಬರೆದಾಗ ಅವರೊಟ್ಟಿಗೆ ನನ್ನ ಸಖ್ಯ ಬೆಳೆಯಿತು. ಅವರ ರಾಜಕೀಯ ನಿಲುವು ನನಗಿಷ್ಟ. ಆದರೆ, ಸುನಂದಾ ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದರು. ಟ್ವಿಟ್ಟರ್ ನಲ್ಲಿ ಇಬ್ಬರ ನಡುವೆ ಶಶಿಗಾಗಿ ನಡೆದ ಕಿತ್ತಾಟದ ಬಳಿಕೆ ಸುನಂದಾ ಸಾವನ್ನಪ್ಪಿದ್ದರು.

ಕೊಚ್ಚಿ ಐಪಿಎಲ್ ತಂಡ ಖರೀದಿ ಗಲಾಟೆ

ಕೊಚ್ಚಿ ಐಪಿಎಲ್ ತಂಡ ಖರೀದಿ ಗಲಾಟೆ

2010ರಲ್ಲಿ ಕೊಚ್ಚಿ ತಂಡ ಕೊಳ್ಳಲು 50-70 ಕೋಟಿ ರು ಸುನಂದಾ ವ್ಯಯಿಸಿದ್ದರು. ಕೊಚ್ಚಿ ಫ್ರಾಂಚೈಸಿಗೆ ಸಂಬಂಧಿಸಿದಂತೆ ಅಂದಿನ ಐಪಿಎಲ್ ಚೇರ್ಮನ್ ಲಲಿತ್ ಮೋದಿ ಮತ್ತು ಶಶಿ ತರೂರ್ ಅವರ ನಡುವಿನ ಜಟಾಪಟಿ ನಡೆದಿತ್ತು. ಕೊಚ್ಚಿ ತಂಡ ಕೊಳ್ಳಲು ಆಸಕ್ತಿವಹಿಸಿರುವ ಶಶಿ ಅವರ ಪ್ರೇಯಸಿ ಸುನಂದಾ ಪುಷ್ಕರ್ ಅವರ ಹೆಸರನ್ನು ಮೋದಿ ಪ್ರಸ್ತಾಪಿಸಿದ್ದೇ ಇಬ್ಬರ ನಡುವಿನ ಕದನಕ್ಕೆ ನಾಂದಿ ಹಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+