ವಂಚನೆ ಪ್ರಕರಣ: ಸುಕೇಶ್ ಬಗ್ಗೆ ನ್ಯಾಯಾಲಯದಲ್ಲಿ ಜಾಕ್ವೆಲಿನ್ ಹೇಳಿದ್ದೇನು?

ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಸುಕೇಶ್ ಚಂದ್ರಶೇಖರ್ ವಿರುದ್ಧ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಕೋರ್ಟ್ ವಿಚಾರಣೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್, ಸುಕೇಶ್ ತಮ್ಮನ್ನು ದಾರಿ ತಪ್ಪಿಸಿದ್ದು ತಮ್ಮ ವೃತ್ತಿ ಮತ್ತು ತಮ್ಮ ಜೀವನವನ್ನು ಹಾಳುಮಾಡಿದರು ಎಂದು ಹೇಳಿಕೊಂಡಿದ್ದಾರೆ.

ಸುಖೇಶ್ ಚಂದ್ರಶೇಖರ್ ಅವರು "ನನ್ನ ಭಾವನೆಗಳೊಂದಿಗೆ ಆಟವಾಡಿದ್ದಾರೆ ಮತ್ತು ನನ್ನ ಜೀವನವನ್ನು ನರಕವಾಗಿಸಿದ್ದಾರೆ" ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ತಿಳಿಸಿದ್ದಾರೆ. ಆರಂಭದಲ್ಲಿ ಚಂದ್ರಶೇಖರ್ ಅವರನ್ನು ಸರ್ಕಾರಿ ಅಧಿಕಾರಿಯಾಗಿ ಪರಿಚಯಿಸಲಾಯಿತು. ಹೀಗೆ ಪರಿಚಯವಾಗುವ ಮೂಲಕ ಆತ ನನ್ನನ್ನು ವಂಚಿಸುತ್ತಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

"ಪಿಂಕಿ ಇರಾನಿ (ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸುಕೇಶ್ ಅವರಿಗೆ ಪರಿಚಯಿಸಿದ ಮಹಿಳೆ) ಅವರು ಸುಕೇಶ್ ಒಬ್ಬ ಗೃಹ ಸಚಿವಾಲಯದ ಪ್ರಮುಖ ಅಧಿಕಾರಿ ಎಂದು ನನ್ನ ಮೇಕಪ್ ಮ್ಯಾನ್ ಶಾನ್ ಮುತ್ತತ್ತಿಲ್ ಅವರಿಗೆ ತಪ್ಪಾಗಿ ಪರಿಚಯಿಸಿ ನಂತರ ಇಬ್ಬರೂ ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದರು.

ಸುಕೇಶ್ ವಿರುದ್ಧ ಜಾಕ್ವೆಲಿನ್

ಸುಕೇಶ್ ವಿರುದ್ಧ ಜಾಕ್ವೆಲಿನ್

ಮಾತ್ರವಲ್ಲದೆ ಅವರು ಸನ್ ಟಿವಿಯ ಮಾಲೀಕ ಎಂದು ಪರಿಚಯಿಸಿಕೊಂಡರು. ಜೊತೆಗೆ ಜೆ ಜಯಲಲಿತಾ ಅವರ ಚಿಕ್ಕಮ್ಮ ಎಂದು ಹೇಳಿಕೊಂಡರು. ಚಂದ್ರಶೇಖರ್ ಅವರು ನನ್ನ ದೊಡ್ಡ ಅಭಿಮಾನಿಯಾಗಿದ್ದು, ನಾನು ದಕ್ಷಿಣ ಭಾರತದಲ್ಲಿಯೂ ಚಲನಚಿತ್ರಗಳನ್ನು ಮಾಡಬೇಕು ಎಂದು ಹೇಳಿದರು ಮತ್ತು ಸನ್ ಟಿವಿಯ ಮಾಲೀಕರಾಗಿ ಅವರು ಅನೇಕ ಯೋಜನೆಗಳನ್ನು ಹೊಂದಿದ್ದರು. ನಾವು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಲು ಪ್ರಯತ್ನಿಸಬೇಕು ಎಂದು ನಟಿಗೆ ಹೇಳಿ ಪರಿಚಯ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

ಇಬ್ಬರೂ (ಪಿಂಕಿ ಇರಾನಿ ಮತ್ತು ಸುಕೇಶ್) ದಿನಕ್ಕೆ ಕನಿಷ್ಠ ಮೂರು ಬಾರಿ ಕರೆಗಳು ಮತ್ತು ವಿಡಿಯೊ ಕರೆಗಳಲ್ಲಿ ಮಾತನಾಡುತ್ತಿದ್ದರು - ಅವರು ಬೆಳಿಗ್ಗೆ ನನ್ನ ಚಿತ್ರೀಕರಣದ ಮೊದಲು, ದಿನವಿಡೀ ಮತ್ತು ಕೆಲವೊಮ್ಮೆ ರಾತ್ರಿಯಲ್ಲಿ ಮಲಗುವ ಮೊದಲು ಕರೆ ಮಾಡುತ್ತಿದ್ದರು ಎಂದು ಜಾಕ್ವೆಲಿನ್ ಫರ್ನಾಂಡೀಸ್ ಅವರು ಹೇಳಿಕೊಂಡಿದ್ದಾರೆ.

ಸುಳ್ಳು ಹೇಳಿ ಮೋಸ- ಜಾಕ್ವೆಲಿನ್

ಸುಳ್ಳು ಹೇಳಿ ಮೋಸ- ಜಾಕ್ವೆಲಿನ್

"ಅವರು ಜೈಲಿನಿಂದ ಕರೆ ಮಾಡುತ್ತಿದ್ದಾರೆ ಅಥವಾ ಅವರು ಜೈಲಿನಲ್ಲಿದ್ದಾರೆ ಎಂದು ಅವರು ಎಂದಿಗೂ ಉಲ್ಲೇಖಿಸಲಿಲ್ಲ. ವಿಡಿಯೋ ಕರೆ ಮಾಡಿದಾಗ ಸುಕೇಶ್ ಒಂದು ಮೂಲೆಯಿಂದ ಪರದೆ ಮತ್ತು ಸೋಫಾವನ್ನು ತೋರಿಸಿದ್ದಾನೆ" ಎಂದು ಜಾಕ್ವೆಲಿನ್ ಫರ್ನಾಂಡೀಸ್ ಹೇಳಿದ್ದಾರೆ. ಜೈಲಿನಲ್ಲಿದ್ದುಕೊಂಡೆ ಸುಕೇಶ್ ನನಗೆ ಸುಳ್ಳು ಹೇಳಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಫೆರ್ನಾಂಡೀಸ್ ಮತ್ತು ಚಂದ್ರಶೇಖರ್ ಅವರು ಕೊನೆಯದಾಗಿ ಆಗಸ್ಟ್ 8, 2021 ರಂದು ಕರೆಯಲ್ಲಿ ಮಾತನಾಡಿದ್ದಾರೆ. ಬಳಿಕ ನನ್ನನ್ನು ಸಂಪರ್ಕಿಸಲಿಲ್ಲ. ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಹಿರಿಯ ಸರ್ಕಾರಿ ಅಧಿಕಾರಿಗಳ ಸೋಗು ಹಾಕಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ನನಗೆ ನಂತರ ತಿಳಿಯಿತು ಎಂದು ಹೇಳಿಕೆಯಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ತಿಳಿಸಿದ್ದಾರೆ.

ಜಾಕ್ವೆಲಿನ್ಗೆ ಮೋಸ ಮಾಡಿದ ಪಿಂಕಿ

ಜಾಕ್ವೆಲಿನ್ಗೆ ಮೋಸ ಮಾಡಿದ ಪಿಂಕಿ

ಸುಕೇಶ್ ಮತ್ತು ಪಿಂಕಿ ಇರಾನಿ "ಯಾವಾಗಲೂ ನನಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿದ್ದರು. ನಾನು ಶೇಖರ್‌ನಿಂದ ಮೂರ್ಖಳಾಗಿದ್ದೇನೆ. ಆ ಸಮಯದಲ್ಲಿ ನನಗೆ ಶೇಖರ್‌ ಎಂದು ಪರಿಚಯಿಸಿಕೊಂಡಿದ್ದ ಆತನ ನಿಜವಾದ ಹೆಸರು ಸುಕೇಶ್ ಎಂದು ನನಗೆ ಗೊತ್ತಾಯಿತು. "ಪಿಂಕಿಗೆ ಶೇಖರ್‌ನ ಚಟುವಟಿಕೆ ಮತ್ತು ಹಿನ್ನೆಲೆಯ ಅರಿವಿತ್ತು. ಆದರೆ ಆಕೆ ಇದನ್ನು ನನಗೆ ಬಹಿರಂಗಪಡಿಸಲೇ ಇಲ್ಲ'' ಎಂದು ಫೆರ್ನಾಂಡಿಸ್ ಹೇಳಿದ್ದಾರೆ.

ಖಾಸಗಿ ಜೆಟ್ ಪ್ರಯಾಣ

ಖಾಸಗಿ ಜೆಟ್ ಪ್ರಯಾಣ

ನಾನು ಕೇರಳಕ್ಕೆ ಪ್ರಯಾಣಿಸಬೇಕಾದಾಗ ಅವರು ತಮ್ಮ ಖಾಸಗಿ ಜೆಟ್ ಅನ್ನು ಬಳಸಲು ನನ್ನನ್ನು ಕೇಳಿದರು. ಕೇರಳದಲ್ಲಿ ನನಗಾಗಿ ಹೆಲಿಕಾಪ್ಟರ್ ರೈಡ್ ಆಯೋಜಿಸಿದ್ದರು. ನಾನು ಅವರನ್ನು ಚೆನ್ನೈನಲ್ಲಿ ಭೇಟಿಯಾದ ಎರಡು ಸಂದರ್ಭಗಳಲ್ಲಿ, ನಾನು ಅವರ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದೆ ಎಂದು ನಟ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+