ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸೇರಿದ 7 ಕೋಟಿ ಹಣ ಇಡಿಯಿಂದ ಮುಟ್ಟುಗೋಲು

ನವದೆಹಲಿ: ಏ. 30: ಭಾರೀ ಮೊತ್ತದ ವಂಚನೆ ಎಸಗಿದ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆಗಿನ ಅವ್ಯವಹಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಒಂದಾದ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ನಟಿ ಹೆಸರಿನಲ್ಲಿ ಇಡಲಾಗಿದ್ದ 7 ಕೋಟಿ ರೂ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಸುಕೇಶ್ ಚಂದ್ರಶೇಖರ್ ಅವ್ಯವಹಾರ ಪ್ರಕರಣದ ತನಿಖೆಯನ್ನ ಇಡಿ (Enforcement Directorate) ನಡೆಸುತ್ತಿದೆ. ರಾನ್‌ಬಾಕ್ಸಿ ಎಂಬ ಔಷಧ ಕಂಪನಿಯ ಮಾಜಿ ಮಾಲಿಕ ಶಿವಿಂದರ್ ಸಿಂಗ್ ಕುಟುಂಬದಿಂದ ಸುಲಿಗೆ ಮಾಡಿದ 200 ಕೋಟಿ ರೂ ಹಣದಲ್ಲಿ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಫರ್ನಾಂಡಿಸ್‌ಗೆ 5.71 ಕೋಟಿ ರೂ ಮೌಲ್ಯದ ಉಡುಗೊರೆಗಳನ್ನ ಕೊಟ್ಟಿದ್ದನು ಎಂಬುದು ಇಡಿ ಆರೋಪ. ಹೀಗಾಗಿ, ಪ್ರಕರಣದ ತನಿಖೆ ಭಾಗವಾಗಿ ನಟಿಯ ಹೆಸರಿನಲ್ಲಿದ್ದ 7 ಕೋಟಿ ರೂ ಮೊತ್ತದಷ್ಟು ಫಿಕ್ಸೆಡ್ ಡೆಪಾಸಿಟ್ ಹಣವನ್ನು ಇಡಿ ಫ್ರೀಜ್ ಮಾಡಿರುವುದು ತಿಳಿದುಬಂದಿದೆ.

ರಾನ್‌ಬಾಕ್ಸಿ ಸಂಸ್ಥೆಯ ಶಿವಿಂದರ್ ಸಿಂಗ್ ಅವರು ಬೇರೊಂದು ಹಣ ಅವ್ಯವಹಾರ ಪ್ರಕರಣದಲ್ಲಿ 2019ರಲ್ಲಿ ಜೈಲು ಸೇರಿದ್ದರು. ಅವರನ್ನು ಬಿಡಿಸಿಕೊಡುವ ಭರವಸೆ ನೀಡಿದ ಸುಕೇಶ್ ಚಂದ್ರಶೇಖರ್, ಶಿವಿಂದರ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ 200 ಕೋಟಿ ರೂ ಪಡೆದಿದ್ದರೆನ್ನಲಾಗಿದೆ. ಈ ಸಂಬಂಧ ಅದಿತಿ ಸಿಂಗ್ ನೀಡಿದ ದೂರಿನ ಮೇರೆಗೆ ಸುಕೇಶ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.

ED attaches Jacqueline Fernandezs assets worth 7 crore

ಪ್ರಕರಣದ ತನಿಖೆ ನಡೆಸುತ್ತಾ ಹೋದಂತೆ ಸುಕೇಶ್ ಜೊತೆ ಸಂಬಂಧ ಇರುವವರ ಜಾಡು ಸಿಗತೊಡಗಿತು. ನಟಿ ಜಾಕೆಲಿನ್ ಫರ್ನಾಂಡಿಸ್ ಅವರೂ ಇದರಲ್ಲಿ ಭಾಗಿಯಾಗಿದ್ದು ಕಂಡು ಬಂತು. ಕಳೆದ ಡಿಸೆಂಬರ್‌ನಲ್ಲಿ ಪಿಎಂಎಲ್‌ಎ ಕಾಯ್ದೆ ಅಡಿ ಆರೋಪಪಟ್ಟಿ ದಾಖಲಿಸಿದ ಇಡಿ, ಜಾಕ್ವೆಲಿನ್ ಸೇರಿದಂತೆ ಕೆಲ ಬಾಲಿವುಡ್ ನಟ ನಟಿಯರನ್ನ ಪ್ರಕರಣದ ಸಾಕ್ಷಿದಾರರೆಂದು ತೋರಿಸಿದೆ.

ಅದಾದ ಬಳಿಕ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ನಿಕಟವಾಗಿರುವ ಫೋಟೋಗಳು ಇಂಟರ್ನೆಟ್‌ನಲ್ಲಿ ಪೋಸ್ಟ್ ಆಗತೊಡಗಿದವು. ತನ್ನ ಪ್ರೈವಸಿಯನ್ನು ಗೌರವಿಸಿ ಎಂದು ಆಕೆ ಇನ್ಸ್‌ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಬೇಕಾಯಿತು.

ED attaches Jacqueline Fernandezs assets worth 7 crore

ಶ್ರೀಲಂಕಾ ಮೂಲದ ಜಾಕ್ವೆಲಿನ್ ಫರ್ನಾಂಡಿಸ್ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹೆಚ್ಚಾಗಿ ಬಾಲಿವುಡ್ ಚಿತ್ರಗಳಲ್ಲೇ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ಅವರು ನಾಯಕನಟಿಯಾಗಿದ್ದಾರೆ. ಈ ಚಿತ್ರ ಇನ್ನೂ ಬಿಡುಗಡೆ ಆಗಬೇಕಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+