Chandrayaan - 3: ಇಸ್ರೋ ವಿಜ್ಞಾನಿಗಳದ್ದು ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ!

ಚಂದ್ರನ ದಕ್ಷಿಣ ಧೃವವನ್ನು ಚುಂಬಿಸಿ ಇಡೀ ವಿಶ್ವವೇ ನಿಬ್ಬೆರಗಾಗುವ ಸಾಧನೆಯನ್ನು ನಮ್ಮ ಇಸ್ರೋ ವಿಜ್ಞಾನಿಗಳು ಮಾಡಿದ್ದಾರೆ. ಅನೇಕ ವಿದೇಶಗಳ ಕಣ್ಣು ಕೂಡ ಈಗ ನಮ್ಮ ದೇಶದತ್ತ ತಿರುಗಿ ನೋಡುವ ಹಾಗಾಗಿದೆ. ಆದರೆ ಈ ಯಶೋಗಾಥೆ ಅಷ್ಟು ಸುಲಭವಾಗಿ ದಕ್ಕಿದ್ದಲ್ಲ, ಇಲ್ಲಿ ಹಗಲಿರುಳು ದುಡಿದ ವಿಜ್ಞಾನಿಗಳ ಶ್ರಮವಿದೆ. ಜನರ ಪ್ರಾರ್ಥನೆ ಇದೆ, ಇಸ್ರೋ ವಿಜ್ಞಾನಿಗಳ ಸಾಕಷ್ಟು ತ್ಯಾಗ ಇದೆ. ಈ ಯಶಸ್ಸಿನ ಹಿಂದೆ ಇರುವ ಸೈಂಟಿಸ್ಟ್ ಗಳು ಮಾಡಿರುವ ತ್ಯಾಗ ಕೇಳಿದರೆ ನಿಜಕ್ಕೂ ಅಚ್ಚರಿ ಆಗುತ್ತೆ. ಜೊತೆಗೆ ಹೆಮ್ಮೆ ಎನಿಸುತ್ತೆ

ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗಿದ್ದು ಆಯಿತು. ಲ್ಯಾಂಡರ್ ಇಂದ ರೋವರ್ ಬೇರ್ಪಟ್ಟು ತನ್ನ ಕಾರ್ಯ ಆರಂಭ ಮಾಡಿದ್ದೂ ಆಯಿತು. ಇಡೀ ದೇಶವೇ ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಇಂತಹ ಹೊತ್ತಲ್ಲಿ ಈ ವಿಶ್ವ ಮೆಚ್ಚುವ ವಿಕ್ರಮ ಸಾಧಿಸಿದ ಇಸ್ರೋ ವಿಜ್ಞಾನಿಗಳು ಏನೆನೆಲ್ಲಾ ನೋವು ಅನುಭವಿಸಿದ್ದಾರೆ ಗೊತ್ತಾ? ನಿಜಕ್ಕೂ ಈ ಕಥೆಗಳನ್ನು ಕೇಳಿದರೆ ನೋವು ಉಂಟಾಗುತ್ತದೆ.

Success Of Chandrayaan 3: Painful Stories Of ISRO Scientists

ಎಳೆಯ ಕಂದಮ್ಮ ಅಮ್ಮ ಅಂತ ಕೂಗಲು ಆಗದ ಹಸುಗೂಸು ತಾಯಿ ಮಡಿಲಲ್ಲೇ ಇರಬೇಕೆನ್ನುವ ಹೊತ್ತದು. ಆದರೆ, ಆ ತಾಯಿ ಮಗುವನ್ನು ಹೆತ್ತಿದ್ದಾಳೆ, ಎತ್ತಿ ಮುದ್ದಾಡುವ ಸಮಯ ಇರಲಿಲ್ಲ. ತಕ್ಷಣ ಡ್ಯುಟಿಗೆ ಹಾಜರಾಗ ಬೇಕಾದ ಸಂದರ್ಭ. ಭಾರತ ಮಾತೆಯ ಹೆಸರು ಚಂದ್ರನ ಅಂಗಳದಲ್ಲಿ ರಾರಾಜಿಸಲು ತನ್ನ ಕೂಸನ್ನು ಬಿಟ್ಟು ತಾಯಿ ಸೇವೆಗೆ ಹಾಜರಾಗಿದ್ದಾರೆ.

ವಿಜ್ಞಾನಿಯೋರ್ವರ ಮನೆಯಲ್ಲಿ ಸೂತಕದ ವಾತಾವರಣ

ಇನ್ನೊಂದು ಕಡೆ ಇಸ್ರೋ ವಿಜ್ಞಾನಿಯೋರ್ವರ ಮನೆಯಲ್ಲಿ ಸೂತಕದ ವಾತಾವರಣ ಇರುತ್ತೆ.. ಜನ್ಮ ಕೊಟ್ಟ ತಂದೆ ಉಸಿರಾಟ ನಿಲ್ಲಿಸಿ ಮಲಗಿರುತ್ತಾರೆ. ಅಪ್ಪನೇ ಪ್ರಾಣ ಚೆಲ್ಲಿ ಪ್ರಪಂಚ ತೊರೆದು ಹೋದರೂ ಮಗ ಮಾತ್ರ ಭಾರತ ಮಾತೆಯ ಹೆಸರು ಚಂದ್ರನ ದಕ್ಷಿಣ ಧ್ರುವದಲ್ಲಿ ಶಾಶ್ವತ ಆಗಲು ಶ್ರಮಿಸುತ್ತಾರೆ. ಇಡೀ ಜಗತ್ತೇ ಭಾರತದತ್ತ ಅಚ್ಚರಿಯ, ಗೌರವದ ನೋಟ ಬೀರುವಂತೆ ಮಾಡಿದ ಚಂದ್ರಯಾನ -3 ಯಶಸ್ಸಿನ ಹಿಂದಿರುವ ವಿಜ್ಜಾನಿಗಳ ಯಶೋಗಾಥೆ ಇದು..

ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರವಕ್ಕೆ ಚುಂಬಿಸುತ್ತಿದ್ದಂತೇ ಇಡೀ ಭಾರತವೇ ಕುಣಿದು ಕುಪ್ಪಳಿಸಿತ್ತು. ವಿಶ್ವದ ದೊಡ್ಡಣ್ಣನಿಂದ ಹಿಡಿದು ಜಗತ್ತಿನ ಪವರ್ ದೇಶಗಳೇ ಇಂಡಿಯಾದತ್ತ ಹೆಮ್ಮೆಯ ನೋಟ ಬೀರಿತ್ತು. ಆದರೆ, ಹೀಗೆ ದೇಶದ ಹಿರಿಗೆ, ಗರಿಮೆಯನ್ನ ಜಗತ್ತಿನ‌ ಮುಂದೆ ಹೆಚ್ಚು ಮಾಡಿದ ಇಸ್ರೋ ವಿಜ್ಞಾನಿಗಳ ಒಬ್ಬೊಬ್ಬರ ಕಥೇ ಕರಳು ಕಿವಿಚುವಂತೆ ಮಾಡುತ್ತೆ.

Success Of Chandrayaan 3: Painful Stories Of ISRO Scientists

ಇಸ್ರೋ ವಿಜ್ಞಾನಿಯೊಬ್ಬರ ತಂದೆ ಇಹಲೋಕ ತ್ಯಜಿಸಿದ್ದರು

ಸಾಫ್ಟ್ ಲ್ಯಾಂಡಿಂಗಿಗೆ ಮೂರು ದಿನದ ಮುಂಚೆ ಇಸ್ರೋ ವಿಜ್ಞಾನಿಯೊಬ್ಬರ ತಂದೆ ಇಹಲೋಕ ತ್ಯಜಿಸಿದ್ದರು. ಅಪ್ಪನ ಅಗಲುವಿಕೆಯ ನೋವಿನಲ್ಲಿದ್ದ ಆ ವಿಜ್ಞಾನಿ ಅಂತ್ಯಕ್ರಿಯೆ ಮುಗಿಸಿದ ಮರುಕ್ಷಣವೇ, ನೋವಿನ ನಡುವೆ ಸ್ವಯಂ ಇಚ್ಚೆಯಿಂದ ಕೆಲಸಕ್ಕೆ ವಾಪಸ್ ಆಗುವ ಮೂಲಕ ದೇಶ ಭಕ್ತಿಯ ಸುನಾಮಿ ಎಬ್ಬಿಸಿದ್ದಾರೆ.

ಇದು ಒಬ್ಬರ ಕಥೆಯಲ್ಲ.. ಇಂತಹ ಹಲವು ನೋವಿನ.. ಕಣ್ಣೀರಿನ.. ತ್ಯಾಗದ, ಸಾಹಸದ ಕಥೆಗಳು ಇಲ್ಲಿ ಕಾಣ ಸಿಗುತ್ತವೆ. ಇಸ್ರೋ ಈ ಟೀಂನಲ್ಲಿ ಹಲವು ಮಹಿಳೆಯರು ಕೂಡ ಇದ್ದರು. ಈ ಟೀಂನಲ್ಲಿದ್ದ ಲೇಡಿ ಸೈಂಟಿಸ್ಟ್ ಹೆರಿಗೆಯಾಗಿ ಕೆಲ ವಾರದಲ್ಲಿಯೇ ಕೆಲಸಕ್ಕೆ ಹಾಜರಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ಹೀಗೆ ಬದುಕಿನ ಬವಣೆಗಳನ್ನ ಗೆದ್ದು ಬಂದವರು ಈಗ 140ಕೋಟಿ ಭಾರತೀಯರ ಮನವನ್ನು ಗೆದ್ದಿದ್ದಾರೆ. ಪ್ರತಿಯೊಬ್ಬರ ಪರಿಶ್ರಮದ, ತ್ಯಾಗದ, ಫಲದಿಂದ ಇಂದು ಇಸ್ರೋ ಗೆದ್ದು ಬೀಗಿದೆ. ಇವರ ಈ ಸ್ಪೂರ್ತಿಧಾಯಕ ಕಥೆ ಕೋಟ್ಯಂತರ ಭಾರತೀಯರ ಪಾಲಿಗೆ ಆದರ್ಶದಾಯಕ ಆಗುವುದರಲ್ಲಿ ಅನುಮಾನ ಇಲ್ಲ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+