ಹಳೇ ನೋಟನ್ನು ಒಂದ್ರ ಮೇಲೊಂದು ಇಟ್ರೆ ಮೌಂಟ್ ಎವರೆಸ್ಟ್ ನಾಚುತ್ತೆ!

Written By:
Subscribe to Oneindia Kannada

ನವದೆಹಲಿ, ನ 26: ಬ್ಯಾನ್ ಆಗಿರುವ ಐನೂರು ಮತ್ತು ಸಾವಿರ ಮುಖಬೆಲೆಯ ನೋಟನ್ನು ಒಂದರ ಮೇಲೊಂದು ಇಟ್ಟರೆ, ಅದು ಎಷ್ಟು ಎತ್ತರಕ್ಕೆ ಬೆಳೆಯಬಹುದು? ರಿಪೋರ್ಟ್ ಒಂದರ ಪ್ರಕಾರ ಅದು ಮೌಂಟ್ ಎವರೆಸ್ಟ್ ಶಿಖರ ಪರ್ವತಗಿಂತಲೂ ಎತ್ತರ ಬೆಳೆಯುತ್ತೆ!

ಬ್ಲೂಮ್ ಬರ್ಗ್ ಹಣಕಾಸು ಸಂಸ್ಥೆಯ ರಿಪೋರ್ಟ್ ಪ್ರಕಾರ, ಹಳೆಯ 500 ಮತ್ತು 1000 ರೂಪಾಯಿಯ 23 (2.3 ಕೋಟಿ) ಮಿಲಿಯನ್ ನೋಟುಗಳು ರಿಸರ್ವ್ ಬ್ಯಾಂಕ್ ಮತ್ತು ವಿವಿಧ ಬ್ಯಾಂಕುಗಳಲ್ಲಿ ಶೇಖರಣೆಯಾಗಿದೆ. (ನೋಟು ನಿಷೇಧ ಪರಿಣಾಮ, 500ರೂನಲ್ಲಿ ಮುಗಿದ ಮದುವೆ)

ಈ ನೋಟುಗಳನ್ನು ಒಂದರ ಮೇಲೊಂದು ಇಟ್ಟರೆ ಮೌಂಟ್ ಎವರೆಸ್ಟ್ ಪರ್ವತಕ್ಕಿಂತ ಮುನ್ನೂರು ಪಟ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ಬ್ಲೂಮ್ ಬರ್ಗ್ ವರದಿಯನ್ನು ಉಲ್ಲೇಖಿಸಿ ಇಂಡಿಯಾ ಟೈಮ್ಸ್ ವರದಿ ಮಾಡಿದೆ.

 Demonisation: Stock of old notes with banks will be 300 times more than Mount Everest

ಒಂದು ವೇಳೆ ಬ್ಯಾನ್ ಆಗಿರುವ ನೋಟನ್ನು ಉದ್ದಕ್ಕೆ ಜೋಡಿಸಿಟ್ಟರೆ, ಐದು ಬಾರಿ ಚಂದ್ರಯಾನ ಮಾಡಿ ಬರಬಹುದಂತೆ. ಇದು ಬ್ಯಾಂಕಿಗೆ ಜಮಾವಣೆಯಾಗಿರುವ ನೋಟಿನ ಕಥೆಯಾದರೆ, ಬ್ಯಾಂಕಿಗೆ ಬಾರದೇ ಇರುವ ನೋಟುಗಳು ಇನ್ನೆಷ್ಟು ಇವೆಯೋ?

ನಿಷೇಧಕ್ಕೊಳಗಾಗಿರುವ ನೋಟನ್ನು ಸಿವಿಪಿಎಸ್ (Currency verification and processing system) ಕಾನೂನಿನ್ವಯ, ನಾಶ ಮಾಡಲಾಗುವುದು. ಆದರೆ ಇದರಲ್ಲಿ ಮತ್ತೆ ಬಳಸಬಹುದಾಂತಹ ನೋಟುಗಳು ಒಂದು ವೇಳೆ ಇದ್ದರೆ, ರಿಸೈಕಲ್ ಮಾಡಿ ಹೊಸ ನೋಟಿನ ಮುದ್ರಣಕ್ಕೆ ಠಂಕಶಾಲೆಗೆ ಕಳುಹಿಸಲಾಗುವುದು.

ಇದುವರೆಗೆ ಬ್ಯಾಂಕುಗಳಲ್ಲಿ ಜಮಾವಣೆಗೊಂಡಿರುವ ನೋಟಿನ ಬೆಲೆ ಎಷ್ಟು ಎಂದು ಕೇಂದ್ರ ಸರಕಾರ ಅಧಿಕೃತವಾಗಿ ಹೇಳಿಕೆ ನೀಡದಿದ್ದರೂ, ಇಂತಹ ನೋಟಿನ ಮೊತ್ತ 200 ಬಿಲಿಯನ್ ದಾಟಬಹುದು ಎಂದು ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅಭಿಪ್ರಾಯ ಪಟ್ಟಿದ್ದಾರೆ.

ಕೊನೇ ಮಾತು: ತುಮಕೂರಿನ ಗ್ರಾಮವೊಂದರಲ್ಲಿ ಗೃಹಿಣಿಯೊಬ್ಬರು ಗಂಡ ಮನೆ ಖರ್ಚಿಗೆಂದು ನೀಡುವ ಹಣವನ್ನು ಒಟ್ಟು ಮಾಡಿ, ಅದರಲ್ಲಿ ಚೀಟಿ, ಪಟಾಕಿ ಚೀಟಿ, ಮಾಂಸ ಚೀಟಿ ಮೇಲೆ ಹೂಡಿ ಪತಿಗೆ ಗೊತ್ತಾಗದಂತೆ 'ನಿಯತ್ತಾಗಿ' ಐನೂರು ಮತ್ತು ಸಾವಿರ ರೂಪಾಯಿಯ ಏಳು ಲಕ್ಷ ರೂಪಾಯಿ ಕೂಡಿಟ್ಟು ಕೊಂಡಿದ್ದರಂತೆ. ಇಲ್ಲೇ ಹೀಗಿರಬೇಕಾದರೆ, ಕಳ್ಳಹಣವನ್ನು ಹೊಂದಿರುವ ಕುಳಗಳು ಇನ್ನೆಷ್ಟು ಪರದಾಡುತ್ತಿದ್ದಾವೋ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three hundred times the height of Mount Everest, That's how tall the stock of old notes with RBI and other Indian Banks will be, India Times article based on Bloomberg financial company report.
Please Wait while comments are loading...