Stock Markert Holiday: ಆಗಸ್ಟ್ 27ರಂದು ಬುಧವಾರ ಷೇರುಪೇಟೆ ರಜೆನಾ? 2025ರ ರಜೆಗಳ ಪಟ್ಟಿ
ಬೆಂಗಳೂರು, ಆಗಸ್ಟ್ 26: ಭಾರತಾದ್ಯಂತ ಗಣೇಶನನ್ನು ಸ್ವಾಗತಿಸಲು ಜನರು ಸಜ್ಜಾಗಿದ್ದಾರೆ. ಈ ವರ್ಷ ಆಗಸ್ಟ್ 27 ರ ಬುಧವಾರ ಗಣೇಶ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂದು ಭಾರತೀಯ ಷೇರು ಮಾರುಕಟ್ಟೆಗೆ (Stock Market Holidays) ರಜೆ ಇರುತ್ತೋ ಇಲ್ಲವೋ? ಎಂಬ ಅನುಮಾನ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ. ಜೊತೆಗೆ ಮುಂದಿನ ಹಬ್ಬಗಳು ಹಾಗೂ ಪ್ರಮುಖ ದಿನಗಳಲ್ಲಿ ಯಾವಾಗೆಲ್ಲ ಸ್ಟಾಕ್ ಮಾರುಕಟ್ಟೆ ರಜೆ ಇರುತ್ತದೆ ಎಂಬದರ ಪಟ್ಟಿ ಇಲ್ಲಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (BSE) ಆಗಸ್ಟ್ 27ರ ಬುಧವಾರ ಗಣೇಶ ಹಬ್ಬದಾಚರಣೆ ರಜೆ ಹೊಂದಿವೆ. ಯಾವುದೇ ವ್ಯಾಪಾರ, ಇತ್ಯರ್ಥಗಳು ನಡೆಯುವುದಿಲ್ಲ ಎಂದು ರಜೆ ವೇಳಾಪಟ್ಟಿ ಮಾಹಿತಿ ನೀಡಿದೆ. ಷೇರುಗಳು, ಉತ್ಪನ್ನಗಳು, ಭದ್ರತಾ ಸಾಲ ಮತ್ತು ಸಾಲ (SLB) ವಿಭಾಗಗಳಲ್ಲಿ ಯಾವುದೇ ವಹೀವಾಟು ಇರುವುದಿಲ್ಲ. ಸ್ಟಾರ್ ಮಾರಾಟ, ಖರೀದಿ ಏನಾದರು ಷೇರು ಪೇಟೆಗೆ ಸಂಬಂಧಿಸಿದ ಕೆಲಸಗಳಿದ್ದರೆ ಇಂದೇ ಮಾಡಿಕೊಂಡು ಬಿಡಿ.

ಗಣೇಶ ಹಬ್ಬದಲ್ಲಿ ಮಾತ್ರವಲ್ಲದೇ ಮುಂದಿನ ಅಕ್ಟೋಬರ್ 2ರಂದು ಮಹಾತ್ಮಾ ಗಾಂಧಿ ಜಯಂತಿ, ದಸರಾ ಹಬ್ಬದ ಪ್ರಯುಕ್ತ ಅಂದು ಸಹ ರಜೆ ನೀಡಲಾಗಿದೆ. 2025ರಲ್ಲಿ ಯಾವೆಲ್ಲ ದಿನ ರಜೆ ಇದೆ ಎಂಬ ಮಾಹಿತಿ, ಪಟ್ಟಿ ಇಲ್ಲಿದೆ.
ಷೇರು ಮಾರುಕಟ್ಟೆ ರಜಾ ದಿನಗಳ ಪಟ್ಟಿ
* ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ/ದಸರಾ ಗುರುವಾರ
* ಅಕ್ಟೋಬರ್ 21: ದೀಪಾವಳಿ ಮತ್ತು ಲಕ್ಷ್ಮಿ ಪೂಜೆ
* ಅಕ್ಟೋಬರ್ 22: ದೀಪಾವಳಿ ಬಲಿಪ್ರತಿಪದ
* ನವೆಂಬರ್ 5: ಪ್ರಕಾಶ್ ಗುರುಪುರ್ ಶ್ರೀ ಗುರುನಾನಕ್ ದೇವ್
* ಡಿಸೆಂಬರ್ 25: ಕ್ರಿಸ್ಮಸ್
ಷೇರು ಮಾರುಕಟ್ಟೆ ಸಮಯಗಳು
ದೇಶೀಯ ಷೇರು ಮಾರುಕಟ್ಟೆ ಸಾಮಾನ್ಯ ದಿನಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9:15 ರಿಂದ ಮಧ್ಯಾಹ್ನ 3:30 ರವರೆಗೆ ಕಾರ್ಯ ತೆರೆದಿರುತ್ತದೆ. ನಿಯಮಿತ ವ್ಯಾಪಾರ ದಿನಗಳಲ್ಲಿ ಬೆಳಗ್ಗೆ 9 ರಿಂದ 9:15 ರವರೆಗೆ ಪೂರ್ವ-ಮುಕ್ತ ಅವಧಿಯೂ ಇರುತ್ತದೆ. ಶನಿವಾರ ಮತ್ತು ಭಾನುವಾರದಂದು ಮಾರುಕಟ್ಟೆ ಸ್ಥಗಿತಗೊಂಡಿರುತ್ತದೆ.
ಬುಧವಾರ ಸರಕು ಮಾರುಕಟ್ಟೆ ಸ್ಥಿತಿ
ನಾಳೆ ಬುಧವಾರ ಆಗಸ್ಟ್ 27 ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಬಂದ್ ಆಗಿರುತ್ತದೆ. ಸಂಜೆ ವ್ಯಾಪಾರ ಅವಧಿಯು ಸಂಜೆ 5 ರಿಂದ ರಾತ್ರಿ 11:55 ರವರೆಗೆ ತೆರೆದಿರಲಿದೆ. ಭಾರತದ ಅತಿದೊಡ್ಡ ಕೃಷಿ ಸರಕು ವಿನಿಮಯ ಕೇಂದ್ರವಾದ ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯ ಕೇಂದ್ರ (NCDEX) ಬಂದ್ ಆಗಿರಲಿದೆ.
ಭಾರತೀಯ ಷೇರು ಮಾರುಕಟ್ಟೆಯು ಆಗಸ್ಟ್ 25 ಲಾಭದೊಂದಿಗೆ ಕೊನೆಗೊಳ್ಳಲಿದೆ. ಮುಕ್ತಾಯದ ವೇಳೆಗೆ, ಬಿಎಸ್‌ಇ ಸೆನ್ಸೆಕ್ಸ್ 329.06 ಪಾಯಿಂಟ್ (0.40%) ಏರಿಕೆ ಆಯಿತು. 81,635.91 ಕ್ಕೆ ತಲುಪಿತು, ಮತ್ತು ಎನ್‌ಎಸ್‌ಇ ನಿಫ್ಟಿ 50 97.65 ಪಾಯಿಂಟ್‌ಗಳು ಅಥವಾ 0.39 ಪ್ರತಿಶತದಷ್ಟು ಏರಿಕೆಯಾಗಿ 24,967.75 ಆಗಿದೆ. ಬಂದವು.












Click it and Unblock the Notifications