• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

TIMEನ ಜಗತ್ತಿನ 100 ಅದ್ಭುತ ಸ್ಥಳಗಳಲ್ಲಿ 'ಸರ್ದಾರ್ ಪಟೇಲ್'; ಮೋದಿ ಖುಷ್

By ಅನಿಲ್ ಆಚಾರ್
|

ನವದೆಹಲಿ, ಆಗಸ್ಟ್ 28: ಗುಜರಾತ್ ನಲ್ಲಿ ಇರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಏಕತಾ ಪ್ರತಿಮೆಯು TIME ನಿಯತಕಾಲಿಕೆಯ "ಜಗತ್ತಿನ 100 ಅದ್ಭುತ ಸ್ಥಳಗಳು 2019"ರಲ್ಲಿ ಸ್ಥಾನ ಪಡೆದಿದೆ. 182 ಮೀಟರ್ ಎತ್ತರದ ಸರ್ದಾರ್ ಪಟೇಲ್ ರ ಪುತ್ಥಳಿ ಇರುವ ಸ್ಥಳಕ್ಕೆ ಈಚೆಗೆ ಒಂದೇ ದಿನದಲ್ಲಿ 34,000 ಪ್ರವಾಸಿಗರು ಭೇಟಿ ನೀಡಿದ್ದರು.

TIME ನಿಯತಕಾಲಿಕೆ ಪಟ್ಟಿಯಲ್ಲಿ ಈ ಸ್ಥಳ ಕೂಡ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ 31ರಂದು, ಸರ್ದಾರ್ ವಲ್ಲಭ ಭಾಯ್ ಪಟೇಲ್ ರ ಜನ್ಮದಿನದಂದು ಪುತ್ಥಳಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.

ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...

ಈ ಪುತ್ಥಳಿಯು ನರ್ಮದಾ ಜಿಲ್ಲೆಯಲ್ಲಿದೆ. ಆ ಸ್ಥಳಕ್ಕೆ ಹತ್ತಿರವಾದ ನಗರ ಅಂದರೆ ವಡೋದರಾ. ಅದು ಕೂಡ 100 ಕಿಲೋಮೀಟರ್ ದೂರದಲ್ಲಿದ್ದು, ಅಹ್ಮದಾಬಾದ್ 200 ಕಿಲೋಮೀಟರ್ ಗಿಂತ ಹೆಚ್ಚು ದೂರದಲ್ಲಿದೆ.

'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?

ಅಂದಹಾಗೆ, ಈ ಏಕತಾ ವಿಗ್ರಹವು ಅಮೆರಿಕದ ನ್ಯೂಯಾರ್ಕ್ ನಲ್ಲಿ ಇರುವ ಸ್ವಾತಂತ್ರ್ಯ ಪ್ರತಿಮೆಗಿಂತ ಎರಡು ಪಟ್ಟು ಎತ್ತರವಾಗಿದೆ. ಇನ್ನು ಸಾಮಾನ್ಯ ಮನುಷ್ಯನಿಗಿಂತ 100 ಪಟ್ಟು ದೊಡ್ಡದಾಗಿದೆ. ಈ ಪ್ರತಿಮೆಯ ರೂಪು- ರೇಷೆ ನೀಡಿದವರು ಮಹಾರಾಷ್ಟ್ರದ ಹೆಸರಾಂತ ಆರ್ಕಿಟೆಕ್ಟ್ ರಾಮ್ ವಿ. ಸುತರ್.

ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್

ಗಂಟೆಗೆ 290 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ 6.5 ತೀವ್ರತೆಯ ಭೂಕಂಪ ಸಂಭವಿಸಿದರೂ ಈ ಏಕತಾ ವಿಗ್ರಹಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಇನ್ನು ಮುಂಬೈನ ಸೋಹೋ ಹೌಸ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದಲ್ಲಿನ ಮತ್ತೊಂದು ಸ್ಥಳ.

English summary
Statue of Unity in Gujarat named in the list of TIME magazine's world's 100 greatest places of 2019. PM Narendra express his happy about this news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X