ಮೋದಿ ಸಚಿವ ಸಂಪುಟ ಮುಂದಿನ ಬದಲಾವಣೆ

ನವದೆಹಲಿ, ಮೇ 27: ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಜಾಣ್ಮೆಯಿಂದ ಎನ್ಡಿಎ ಸರ್ಕಾರದ ನೂತನ ಸಚಿವರುಗಳನ್ನು ಆಯ್ಕೆ ಮಾಡಿದ್ದಾರೆ. ಸದಸ್ಯರಿಗೆ ಖಾತೆ ಹಂಚಿಕೆಯಲ್ಲಿ ಹಿಂದಿ ಭಾಷಿಕ ಪ್ರಾಂತ್ಯಗಳದ್ದೇ ಪಾರುಪತ್ಯ ಕಂಡು ಬಂದಿದ್ದು, ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲೂ ಉತ್ತರಪ್ರದೇಶ ಸೇರಿದಂತೆ ಹಿಂದಿ ಭಾಷಿಕ ಪ್ರದೇಶಕ್ಕೆ ಹೆಚ್ಚಿನ ಮಣೆ ಹಾಕುವ ಸಾಧ್ಯತೆ ಕಂಡು ಬಂದಿದೆ. ಅದರೆ, ಬಿಜೆಪಿಗೆ ಅತ್ಯಧಿಕ ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ರಾಜ್ಯಗಳಲ್ಲಿ ಪ್ರಮುಖವಾಗಿರುವ ರಾಜಸ್ಥಾನಕ್ಕೆ ಕೇವಲ ಒಂದೇ ಒಂದು ಸಹಾಯ ಸಚಿವ ಸ್ಥಾನ ಸಿಕ್ಕಿರುವುದು ಕುತೂಹಲಕಾರಿಯಾಗಿದೆ.

ರಾಜಸ್ಥಾನದ ಸಿಎಂ ವಸುಂಧರಾರಾಜೆ ಸಹಜವಾಗಿ ಈ ಬಗ್ಗೆ ಅಸಮಾಧಾನ ಉಂಟಾಗಿದೆ. ಆರಂಭದಲ್ಲಿ ಎರಡು ಸ್ಥಾನಗಳನ್ನು ನೀಡುವ ಭರವಸೆಯನ್ನು ಬಿಜೆಪಿ ನೀಡಿತ್ತಾದರೂ, ಅಂತಿಮ ಕ್ಷಣದಲ್ಲಿ ಕೇವಲ ಒಂದು ಸಹಾಯಕ ಸ್ಥಾನವನ್ನಷ್ಟೇ ನೀಡಿರುವುದು ಮುಖ್ಯಮಂತ್ರಿ ವಸುಂಧರಾರಾಜೆ ಅವರನ್ನು ನಿರಾಸೆಗೊಳಿಸಿದೆ., ರಾಜಸ್ತಾನ ಸಂಸದರ ಪ್ರತ್ಯೇಕ ಸಭೆಯನ್ನು ಕರೆಯಲಾಗಿದೆ. ರಾಜಸ್ತಾನದ ನಿಹಾಲ್ ಚಂದ್ ಅವರು ಕರ್ನಾಟಕದ ಅನಂತಕುಮಾರ್ ಅವರ ರಸಗೊಬ್ಬರ ಖಾತೆಯ ಸಹಾಯಕ ಸಚಿವ ಸ್ಥಾನ ಪಡೆದಿದ್ದಾರೆ.

ಯುಪಿಎ ಸರಕಾರದ ಅವಧಿಯಲ್ಲಿ ರಾಜಸ್ಥಾನಕ್ಕೆ ಆರು ಸಚಿವ ಸ್ಥಾನವನ್ನು ನೀಡಲಾಗಿತ್ತು. ಇದೀಗ ಇಡೀ ರಾಜಸ್ಥಾನವೇ ಮೋದಿ ಸರಕಾರಕ್ಕೆ ಒಲಿದಿದ್ದರೂ, ಒಂದು ಸಹಾಯಕ ಸ್ಥಾನವನ್ನಷ್ಟೇ ನೀಡಿರುವುದು ಸಂಸದರನ್ನು ಅಸಮಾಧಾನಕ್ಕೀಡು ಮಾಡಿದೆ.ಈ ಸಂಬಂಧ ರಾಜಸ್ತಾನದ ಬಿಜೆಪಿ ಮುಖಂಡರು ದಿಲ್ಲಿ ವರಿಷ್ಠರನ್ನು ಸಂಪರ್ಕಿಸಿದ್ದು ಮಾತುಕತೆ ನಡೆಯುತ್ತಿದೆ.

Hindi belt leads, Nihal Chand the only face from Rajasthan

ಮುಂದಿನ ಬದಲಾವಣೆಯಲ್ಲಿ ಈಶಾನ್ಯ ರಾಜ್ಯ, ಕೇರಳ, ಪಶ್ಚಿಮ ಬಂಗಾಳಕ್ಕೂ ಸ್ಥಾನ ಕಲ್ಪಿಸುವುದು ಮೋದಿ ಅವರ ಉದ್ದೇಶವಾಗಿದೆ. ಕರ್ನಾಟಕಕ್ಕೆ ಮೂರು ಪ್ಲಸ್ ಒಂದು ಸ್ಥಾನ ಸಿಕ್ಕಿದೆ. ಜಾತಿವಾರು ಲೆಕ್ಕಾಚಾರದಲ್ಲಿ ದಲಿತರೊಬ್ಬರಿಗೆ ಸ್ಥಾನ ನೀಡಬೇಕಾಗಿರುವುದರಿಂದ ಬಿಜಾಪುರ ರಮೇಶ್ ಜಿಗಜಿಣಗಿಗೆ ಮಾತ್ರ ಸ್ಥಾನ ಸಿಗುವ ಭರವಸೆ ಸಿಕ್ಕಿದೆ. ಪ್ರದೇಶವಾರು ಲೆಕ್ಕಾಚಾರದಂತೆ ಉತ್ತರಕ್ಕೆ 16 ರಿಂದ 17, ದಕ್ಷಿಣಕ್ಕೆ 6, ಪಶ್ಚಿಮಕ್ಕೆ 10, ಪೂರ್ವ ಹಾಗೂ ಈಶಾನ್ಯ ರಾಜ್ಯಗಳಿಗೆ 6 ಸ್ಥಾನ ಎಂದು ಲೆಕ್ಕಾಚಾರ ಹಾಕಲಾಗಿತ್ತು.

ಈ ರಾಜ್ಯ್ಗಗಳ ಕಥೆ ಏನು? : ರಾಜಸ್ಥಾನಕ್ಕೆ ಒಂದೇ ಒಂದು ಸ್ಥಾನ ಸಿಕ್ಕಿದ್ದರೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ ರಾಜ್ಯಕ್ಕೆ ಸ್ಥಾನ ಸಿಕ್ಕಿಲ್ಲ. ಈ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ ಎಂಬುದನ್ನು ಮರೆಯುವಂತಿಲ್ಲ. ಜೂ.1ರಿಂದ ದೇಶದ 29 ನೇ ರಾಜ್ಯವಾಗಲಿರುವ ತೆಲಂಗಾಣ ಭಾಗಕ್ಕೂ ಸ್ಥಾನ ಸಿಗಬೇಕಿದೆ. 2 ಬಿಜೆಪಿ ಸಂಸದರು ಕಳಿಸಿದ ಪಶ್ಚಿಮ ಬಂಗಾಳ, ಸಿಎಂ ಸ್ಥಾನ ತೊರೆದ ನಾಗಾಲ್ಯಾಂಡ್ ಗೆ ಮಣೆ ಹಾಕುವರೆ? ನಿರ್ಮಲಾ ಸೀತಾರಾಮನ್, ರಾಧಾ ಮೋಹನ್ ಹಾಗೂ ಪ್ರಕಾಶ್ ಜಾವಡೇ ಕರ್ ಅವರು ಸಂಸತ್ ಸದಸ್ಯರಲ್ಲದಿದ್ದರೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮೋದಿ ಸಚಿವ ಸಂಪುಟದ ಸದಸ್ಯರ ರಾಜ್ಯವಾರು ಪಟ್ಟಿ ಇಲ್ಲಿದೆ.

ಸಂಖ್ಯೆ
ಕ್ಯಾಬಿನೆಟ್ ಸಚಿವರು ಪ್ರದೇಶ
1 ನರೇಂದ್ರ ಮೋದಿ ವಡೋದರಾ(ಗುಜರಾತ್), ವಾರಣಾಸಿ (ಉತ್ತರಪ್ರದೇಶ)
2 ರಾಜನಾಥ್ ಸಿಂಗ್ ಉತ್ತರಪ್ರದೇಶ
3 ಸುಷ್ವಾ ಸ್ವರಾಜ್ ಮಧ್ಯಪ್ರದೇಶ
4 ಅರುಣ್ ಜೇಟ್ಲಿ ಗುಜರಾತ್ (ರಾಜ್ಯಸಭಾ ಸದಸ್ಯ)
5 ವೆಂಕಯ್ಯ ನಾಯ್ಡು ಕರ್ನಾಟಕ (ರಾಜ್ಯಸಭಾ ಸದಸ್ಯ)
6 ನಿತಿನ್ ಗಡ್ಕರಿ ಮಹಾರಾಷ್ಟ್ರ
7 ಡಿವಿ ಸದಾನಂದ ಗೌಡ ಬೆಂಗಳೂರು ಉತ್ತರ (ಕರ್ನಾಟಕ)
8 ಉಮಾ ಭಾರತಿ ಉತ್ತರಪ್ರದೇಶ
8 ಡಾ. ನಜ್ಮಾ ಹೆಫ್ತುಲ್ಲಾ ರಾಜ್ಯಸಭಾ ಸದಸ್ಯೆ
9 ಗೋಪಿನಾಥ್ ಮುಂಡೆ ಮಹಾರಾಷ್ಟ್ರ
10 ರಾಮ್ ವಿಲಾಸ್ ಪಾಸ್ವಾನ್ ಬಿಹಾರ
11 ಕಲ್‌ರಾಜ್ ಮಿಶ್ರಾ ಉತ್ತರಪ್ರದೇಶ
12 ಮನೇಕಾ ಗಾಂಧಿ ಉತ್ತರಪ್ರದೇಶ
13 ಎಚ್.ಎನ್ ಅನಂತಕುಮಾರ್ ಬೆಂಗಳೂರು ದಕ್ಷಿಣ (ಕರ್ನಾಟಕ)
14 ರವಿಶಂಕರ್ ಪ್ರಸಾದ್ ಬಿಹಾರ (ರಾಜ್ಯಸಭಾ ಸದಸ್ಯ)
15 ಅಶೋಕ್ ಗಜಪತಿ ರಾಜು ಆಂಧ್ರಪ್ರದೇಶ (ಟಿಡಿಪಿ)
16 ಅನಂತ್ ಗೀತೆ ಮಹಾರಾಷ್ಟ್ರ(ಶಿವಸೇನಾ)
17 ಹರ್ಸಿಮ್ರತ್ ಕೌರ್ ಬಾದಲ್ ಪಂಜಾಬ್(ಶಿರೋಮಣಿ ಅಕಾಲಿ ದಳ)
18 ನರೇಂದ್ರ ಸಿಂಗ್ ತೊಮರ್ ಮಧ್ಯಪ್ರದೇಶ
19 ಜುವಾಲ್ ಒರಂ ಒಡಿಶಾ
20 ರಾಧಾ ಮೋಹನ್ ಸಿಂಗ್ ಬಿಹಾರ
21 ಥಾವರ್ ಸಿಂಗ್ ಗೆಹ್ಲೋಟ್ ಮಧ್ಯಪ್ರದೇಶ
22 ಸ್ಮೃತಿ ಇರಾನಿ ಗುಜರಾತ್ (ರಾಜ್ಯಸಭಾ ಸದಸ್ಯೆ)
23 ಡಾ. ಹರ್ಷವರ್ಧನ್ ದೆಹಲಿ

MINISTERS OF STATE/Independent ಪ್ರದೇಶ
1 ಜನರಲ್ ವಿಕೆ ಸಿಂಗ್ ಉತ್ತರಪ್ರದೇಶ
2 ಇಂದರಜೀತ್ ಸಿಂಗ್ ರಾವ್ ಗುರ್ ಗಾಂವ್ ಸಂಸತ್ ಸದಸ್ಯ
3 ಸಂತೋಷ್ ಕುಮಾರ್ ಗಂಗಾವರ್ ಮಧ್ಯಪ್ರದೇಶ
4 ಶ್ರೀಪಾದ್ ಯಸ್ಸೋ ನಾಯಕ್ ಗೋವಾ
5 ಧರ್ಮೇಂದ್ರ ಪ್ರಧಾನ್ ಒಡಿಶಾ
6 ಸರಬಾನಂದ್ ಸೋನೋವಾಲ್ ಅಸ್ಸಾಂ
7 ಪ್ರಕಾಶ್ ಜಾವೇಡ್ಕರ್ ಮಹಾರಾಷ್ಟ್ರ, ಸಂಸತ್ ಸದಸ್ಯರಲ್ಲ
8 ಪಿಯೂಶ್ ಗೋಯಲ್ ಮುಂಬೈ, ರಾಜ್ಯಸಭಾ ಸದಸ್ಯ
9 ಡಾ. ಜಿತೇಂದ್ರ ಸಿಂಗ್ ಹರ್ಯಾಣ
10 ನಿರ್ಮಲಾ ಸೀತಾರಾಮನ್ ಸಂಸತ್ ಸದಸ್ಯರಲ್ಲ, ತಮಿಳುನಾಡು/ಆಂಧ್ರಪ್ರದೇಶ
11 ಜಿಎಂ ಸಿದ್ದೇಶ್ವರ್ ದಾವಣಗೆರೆ (ಕರ್ನಾಟಕ)
12 ಮನೋಜ್ ಸಿನ್ಹಾ ಉತ್ತರಪ್ರದೇಶ
13 ನಿಹಾಲ್ ಚಂದ್ ರಾಜಸ್ಥಾನ
14 ಉಪೇಂದ್ರ ಕುಶ್ವಾಹ ಬಿಹಾರ
15 ಪಿ ರಾಧಾಕೃಷ್ಣನ್ ತಮಿಳುನಾಡು
16 ಕಿರಣ್ ರಿಜಿಜು ಅರುಣಾಚಲ ಪ್ರದೇಶ
17 ಕೃಷ್ಣನ್ ಪಾಲ್ ಹರ್ಯಾಣ
18 ಡಾ.ಸಂಜೀವ್ ಕುಮಾರ್ ಬಾಲಿಯಾ ಉತ್ತರಪ್ರದೇಶ
19 ರಾವ್ ಸಾಹೇಬ್ ದನ್ವೆ ಮಹಾರಾಷ್ಟ್ರ
20 ಮನಸುಖ್ ಭಾಯ್ ಧಾಂಜಿಭಾಯ್ ವಾಸವಾ ಗುಜರಾತ್
21 ವಿಷ್ಣು ದೇವ್ ಸಾಯಿ ಛತ್ತೀಸ್ ಗಢ
22 ಸುದರ್ಶನ್ ಭಗತ್ ಜಾರ್ಖಂಡ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+