ಮೇ 31ರವರೆಗೆ ಎಲ್ಲಾ ಇಲಾಖೆಗಳಲ್ಲಿ ಶೇ.50 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಣೆ: ಕೇಂದ್ರ

ನವದೆಹಲಿ, ಮೇ 4: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 31ರವರೆಗೆ ಎಲ್ಲಾ ಇಲಾಖೆಗಳಲ್ಲೂ ಶೇ.50ರಷ್ಟು ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ನೀಡಿದೆ.

ಪರಿಸ್ಥಿತಿ ಇನ್ನೂ ಸುಧಾರಿಸದ ಕಾರಣ, ಒಎಂನ ಮಾನ್ಯತೆಯನ್ನು ಮೇ 31, 2021 ರವರೆಗೆ ವಿಸ್ತರಿಸಬಹುದು ಎಂದು ಕೇಂದ್ರ ಹೇಳಿದೆ.

ಕಳೆದ ತಿಂಗಳು ಗ್ರೂಪ್‌ ಬಿ ಮತ್ತು ಸಿ ದರ್ಜೆಯ ನೌಕರರ ಕಾರ್ಯನಿರ್ವಹಣೆಗೆ ವಾರದ ರೋಸ್ಟರ್‌ ರೂಪಿಸುವಂತೆ ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಲಾಗಿತ್ತು. ಶೇ 50ರಷ್ಟು ನೌಕರರು ಮನೆಯಿಂದ ಕಾರ್ಯನಿರ್ವಹಿಸಿದರೆ, ಉಳಿದವರು ಕಚೇರಿಗೆ ಬರಬೇಕು.

Staggered Office Hours, 50 Per Cent Attendance Till May-End: Centre To All Departments

ಒಂದು ವಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದವರು, ಮುಂದಿನ ವಾರ ಮನೆಯಲ್ಲಿ ಹಾಗೂ ಮನೆಯಿಂದ ಕಾರ್ಯಾಚರಿಸಿದವರು ಕಚೇರಿಗೆ ಬರುವಂತೆ ರೋಸ್ಟರ್‌ ಸಿದ್ಧಪಡಿಸುವಂತೆ ತಿಳಿಸಲಾಗಿತ್ತು.

ಈ ಸಿಬ್ಬಂದಿ ಸಚಿವಾಲಯ ಇಂದು ಕೇಂದ್ರ ಸರ್ಕಾರದ ಕಚೇರಿಗಳಿಗೆ ಹೊಸ ಸುತ್ತೋಲೆ ಹೊರಡಿಸಿದ್ದು, ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದು ತಿಂಗಳು ಹೊರಡಿಸಿದ್ದ ಮಾರ್ಗಸೂಚಿಗಳನ್ನು ಮೇ 31ರ ವರೆಗೂ ವಿಸ್ತರಿಸುವಂತೆ ಸೂಚಿಸಿದೆ.

ಕಚೇರಿಗೆ ಬರುವವರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಕಾರ್ಯನಿರ್ವಹಣೆಗೆ ಪ್ರತ್ಯೇಕ ಸಮಯ ನಿಗದಿ ಪಡಿಸಬೇಕಿದೆ. ಬೆಳಿಗ್ಗೆ 9ರಿಂದ ಸಂಜೆ 5:30, ಬೆಳಿಗ್ಗೆ 9:30ರಿಂದ 6 ಗಂಟೆ ಹಾಗೂ 10ರಿಂದ 6:30ರ ವರೆಗೂ ಮೂರು ಪಾಳಿಯ ಸಮಯ ತಿಳಿಸಲಾಗಿದೆ.

ಮೊದಲ ವಾರದ ರೋಸ್ಟರ್‌ ಸಿದ್ಧಪಡಿಸುವಾಗ, ಕಚೇರಿಗೆ ಸಮೀಪದಲ್ಲಿರುವವರು ಹಾಗೂ ಕಚೇರಿಗೆ ಬರಲು ಸ್ವಂತ ವಾಹನಗಳನ್ನು ಬಳಸುತ್ತಿರುವವರನ್ನು ಮೊದಲು ಪರಿಗಣಿಸುವಂತೆ ವಿಭಾಗದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ನೌಕರರ ಕಾರ್ಯನಿರ್ವಹಣೆ ಸಮಯದಲ್ಲಿಯೂ ಬದಲಾವಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+