ಅಮೃತ್ ಸರ್, ಜಮ್ಮು, ಶ್ರೀನಗರ್, ಲೇಹ್ ಏರ್ ಪೋರ್ಟ್ 3 ತಿಂಗಳು ಬಂದ್

ನವದೆಹಲಿ, ಫೆಬ್ರವರಿ 27: ಪಾಕಿಸ್ತಾನದ ಗಡಿ ಪ್ರದೇಶಕ್ಕೆ ಹತ್ತಿರ ಇರುವ ಅಮೃತ್ ಸರ್, ಜಮ್ಮು, ಶ್ರೀನಗರ್ ಮತ್ತು ಲೇಹ್ ನ ವಿಮಾನ ನಿಲ್ದಾಣಗಳನ್ನು ಇನ್ನು ಮೂರು ತಿಂಗಳ ಕಾಲ ಬಂದ್ ಮಾಡಲಾಗುವುದು. ಬುಧವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ಬುಡ್ಗಾಂನಲ್ಲಿ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ದುರಂತ ಆದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

ಈ ದುರ್ಘಟನೆಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಗಡಿ ನಿಯಂತ್ರಣ ರೇಖೆ ದಾಟಿ ಹೋದ ಭಾರತೀಯ ವಾಯುಸೇನೆ ಯುದ್ಧ ವಿಮಾನಗಳು, ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಒಂದು ದಿನದ ನಂತರ ಪಾಕಿಸ್ತಾನದಿಂದ ಭಾರೀ ಶೆಲ್ಲಿಂಗ್ ಹಾಗೂ ಗುಂಡಿನ ಚಕಮಕಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿತ್ತು.

ಮಂಗಳವಾರ ಪಾಕಿಸ್ತಾನದ ನೆಲದಲ್ಲಿ ಭಾರತ ನಡೆಸಿದ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಕ್ರಮಕ್ಕೆ ಮುಂದಾಗಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಾಯುಪ್ರದೇಶದ ನಿರ್ಬಂಧದ ಕಾರಣಕ್ಕೆ ಅಮೃತ್ ಸರ್, ಶ್ರೀನಗರ್, ಚಂಡೀಗಢ ಹಾಗೂ ಜಮ್ಮುವಿಗೆ ತೆರಳಬೇಕಿದ್ದ ವಿಮಾನವನ್ನು ತಡೆಯಲಾಗಿದೆ ಎಂದು ಏರ್ ವಿಸ್ತಾರಾ ಟ್ಬೀಟ್ ಮಾಡಿದೆ.

Srinagar, Jammu, Amritsar airports shut till May

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಮತ್ತು ರಜೌರಿ ವಲಯದಲ್ಲಿ ಪಾಕಿಸ್ತಾನಕ್ಕೆ ಸೇರಿದ ಯುದ್ಧ ವಿಮಾನಗಳು ಭಾರತೀಯ ವಾಯುಪ್ರದೇಶದ ಸೀಮೆ ಉಲ್ಲಂಘನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+