ಶ್ರೀ ಸಿಟಿ ಬಾಯ್ಲರ್ ಸ್ಫೋಟ: 'TIL ಹೆಲ್ತ್‌ಕೇರ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ' ಎಂದ ಟ್ಯಾಬ್ಲೆಟ್ಸ್ ಇಂಡಿಯಾ
ಚೆನ್ನೈ: ಆಂಧ್ರಪ್ರದೇಶದ ಶ್ರೀ ಸಿಟಿಯಲ್ಲಿರುವ 'ಟಿಐಎಲ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್' ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟದ ಘಟನೆಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಚೆನ್ನೈ ಮೂಲದ 'ಟ್ಯಾಬ್ಲೆಟ್ಸ್ (ಇಂಡಿಯಾ) ಲಿಮಿಟೆಡ್' ಸ್ಪಷ್ಟಪಡಿಸಿದೆ. ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಂಪನಿಯು, ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನ ಬಗೆಹರಿಸುವ ಪ್ರಯತ್ನ ಮಾಡಿದೆ.
ಆಂಧ್ರಪ್ರದೇಶದ ಪ್ರಮುಖ ಕೈಗಾರಿಕಾ ಪ್ರದೇಶವಾದ ಶ್ರೀ ಸಿಟಿಯಲ್ಲಿರುವ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಯೊಂದರಲ್ಲಿ ಇತ್ತೀಚೆಗೆ ಬಾಯ್ಲರ್ ಸ್ಫೋಟಗೊಂಡು ಭಾರಿ ಅನಾಹುತ ಸೃಷ್ಟಿಯಾಗಿತ್ತು. ಈ ದುರ್ಘಟನೆ ನಡೆದದ್ದು 'ಟಿಐಎಲ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪನಿಯಲ್ಲಿ. ಆದರೆ, ಹೆಸರಿನಲ್ಲಿರುವ 'ಟಿಐಎಲ್' ಎಂಬ ಸಂಕ್ಷಿಪ್ತ ರೂಪ ಒಂದೇ ರೀತಿ ಇರುವುದರಿಂದ, ಇದು ಖ್ಯಾತ ಔಷಧೀಯ ಕಂಪನಿಯಾದ 'ಟ್ಯಾಬ್ಲೆಟ್ಸ್ (ಇಂಡಿಯಾ) ಲಿಮಿಟೆಡ್'ಗೆ ಸೇರಿದ ಘಟಕ ಎಂದು ಅನೇಕರು ಭಾವಿಸಿದ್ದರು.

ಸಾಮಾಜಿಕ ಈ ಗೊಂದಲ ಮೂಡಿತ್ತು. ಇದರಿಂದಾಗಿ ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನೆಯಾಗಿ, ಕಂಪನಿಯ ಹೆಸರಿಗೆ ಧಕ್ಕೆಯಾಗುವ ವಾತಾವರಣ ನಿರ್ಮಾಣವಾಗಿತ್ತು.
ಟ್ಯಾಬ್ಲೆಟ್ಸ್ (ಇಂಡಿಯಾ) ಲಿಮಿಟೆಡ್ ಸ್ಪಷ್ಟನೆ
ಈ ಗೊಂದಲವನ್ನಾ ಸಂಪೂರ್ಣವಾಗಿ ಹೋಗಲಾಡಿಸಲು ಟ್ಯಾಬ್ಲೆಟ್ಸ್ (ಇಂಡಿಯಾ) ಲಿಮಿಟೆಡ್ ಅಕ್ಟೋಬರ್ 4ರಂದು ಸ್ಪಷ್ಟನೆ ನೀಡಿದೆ. "ಶ್ರೀ ಸಿಟಿಯಲ್ಲಿ ನಡೆದ ಕೈಗಾರಿಕಾ ದುರಂತಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ, ಆಂಧ್ರಪ್ರದೇಶದ ಶ್ರೀ ಸಿಟಿಯಲ್ಲಿ ಟ್ಯಾಬ್ಲೆಟ್ಸ್ (ಇಂಡಿಯಾ) ಲಿಮಿಟೆಡ್‌ನ ಯಾವುದೇ ಉತ್ಪಾದನಾ ಘಟಕ ಅಥವಾ ಕಾರ್ಖಾನೆ ಇಲ್ಲ. ನಾವು ಅಲ್ಲಿ ಯಾವುದೇ ರೀತಿಯ ಕಾರ್ಯಾಚರಣೆ ನಡೆಸುತ್ತಿಲ್ಲ" ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಎರಡೂ ಸಂಪೂರ್ಣ ಪ್ರತ್ಯೇಕ ಕಂಪನಿಗಳು: ಆಡಳಿತ ಮಂಡಳಿ ಭಿನ್ನ
ಜನರಲ್ಲಿ ಮನೆಮಾಡಿರುವ ಇನ್ನೊಂದು ದೊಡ್ಡ ಗೊಂದಲವೆಂದರೆ, ಈ ಎರಡೂ ಕಂಪನಿಗಳು ಒಂದೇ ಒಡೆತನಕ್ಕೆ ಅಥವಾ ಆಡಳಿತ ಮಂಡಳಿಗೆ ಸೇರಿವೆ ಎಂಬುದು. ಆದರೆ, ಇದನ್ನೂ ಕಂಪನಿ ಸ್ಪಷ್ಟವಾಗಿ ತಳ್ಳಿಹಾಕಿದೆ. "ಟ್ಯಾಬ್ಲೆಟ್ಸ್ (ಇಂಡಿಯಾ) ಲಿಮಿಟೆಡ್ ಹಾಗೂ ಟಿಐಎಲ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ ಎರಡೂ ಸಂಪೂರ್ಣವಾಗಿ ವಿಭಿನ್ನ ಹಾಗೂ ಸ್ವತಂತ್ರ ಸಂಸ್ಥೆಗಳಾಗಿವೆ. ಈ ಎರಡೂ ಕಂಪನಿಗಳ ನಡುವೆ ಯಾವುದೇ ರೀತಿಯ ಸಾಮಾನ್ಯ ಮಾಲೀಕತ್ವ ಅಥವಾ ಆಡಳಿತ ಮಂಡಳಿ ಹಂಚಿಕೆ ಇಲ್ಲ. ಇವೆರಡೂ ಪ್ರತ್ಯೇಕ ಅಸ್ತಿತ್ವವನ್ನ ಹೊಂದಿರುವ, ಬೇರೆ ಬೇರೆ ಆಡಳಿತಕ್ಕೆ ಒಳಪಟ್ಟ ಸಂಸ್ಥೆಗಳು" ಎಂದು ಸ್ಪಷ್ಟಪಡಿಸಲಾಗಿದೆ. ಕೇವಲ ಹೆಸರಿನಲ್ಲಿರುವ ಸಣ್ಣ ಹೋಲಿಕೆಯಿಂದಾಗಿ ಈ ಅನಗತ್ಯ ಗೊಂದಲ ಸೃಷ್ಟಿಯಾಗಿದೆ ಎಂದು ವಿವರಿಸಲಾಗಿದೆ.
ಸಂತ್ರಸ್ತ ಕುಟುಂಬಗಳಿಗೆ ಸಂತಾಪ
ಶ್ರೀ ಸಿಟಿಯ ಕಾರ್ಖಾನೆಯಲ್ಲಿ ನಡೆದ ಭೀಕರ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಟ್ಯಾಬ್ಲೆಟ್ಸ್ (ಇಂಡಿಯಾ) ಲಿಮಿಟೆಡ್ ಸಂತಾಪ ಸೂಚಿಸಿದೆ. ಹಾಗೆಯೇ ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದೆ.
https://t.co/AI1TWA0oP6
— Tablets (India) Ltd (@TabletsIndiaLtd) October 4, 2026
"ಮಾಧ್ಯಮಗಳು ಮತ್ತು ಸಾರ್ವಜನಿಕರು ಈ ಎರಡೂ ಕಂಪನಿಗಳ ನಡುವಿನ ವ್ಯತ್ಯಾಸವನ್ನ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮುಂದೆ ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗದಂತೆ ನಿಖರವಾದ ಮಾಹಿತಿಯನ್ನ ಮಾತ್ರ ಹಂಚಿಕೊಳ್ಳಬೇಕು. ಓದುಗರಿಗೆ ಮತ್ತು ಸಾರ್ವಜನಿಕರಿಗೆ ಸರಿಯಾದ ವಾಸ್ತವಾಂಶ ತಿಳಿಯಲಿ ಎಂಬ ಏಕೈಕ ಉದ್ದೇಶದಿಂದ ಈ ಪ್ರಕಟಣೆಯನ್ನ ಬಿಡುಗಡೆ ಮಾಡಲಾಗುತ್ತಿದೆ" ಎಂದು ಸಂಸ್ಥೆ ಮನವಿ ಮಾಡಿದೆ.


Click it and Unblock the Notifications
