ಆಧ್ಯಾತ್ಮ ಗುರು ದಾದಾ ಜೆ.ಪಿ ವಾಸ್ವಾನಿ (99) ಅಸ್ತಂಗತ
ಬೆಂಗಳೂರು, ಜುಲೈ 12: ಆಧ್ಯಾತ್ಮ ಕುರಿತ ಟಿವಿ ವಾಹಿನಿ ನೋಡುವವರಿಗೆ, ಸಿಂಧಿ ಸಮುದಾಯದವರಿಗೆ ಚಿರಪರಿಚಿತರಾಗಿದ್ದ ಆಧ್ಯಾತ್ಮ ಗುರು ದಾದಾ ಜೆ.ಪಿ ವಾಸ್ವಾನಿ ಅವರು ಗುರುವಾರ ಬೆಳಗ್ಗೆ ಇಹಲೋಕ ವ್ಯಾಪಾರ ಮುಗಿಸಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.
ಶಾಖಾಹಾರ, ಪ್ರಾಣಿಗಳ ಹಕ್ಕು, ಆಧ್ಯಾತ್ಮ ಚಿಂತನೆಯ ಪ್ರಚಾರಕರು, ಉತ್ತಮ ವಾಗ್ಮಿಗಳು ಆಗಿದ್ದ ವಾಸ್ವಾನಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಆಗಸ್ಟ್ 02, 1918ರಂದು ಸಿಂಧ್ ಪ್ರಾಂತ್ಯದ(ಈಗ ಪಾಕಿಸ್ತಾನದಲ್ಲಿದೆ) ಹೈದಾರಾಬಾದ್ ನಲ್ಲಿ ಜನಿಸಿದ ವಾಸ್ವಾನಿ ಅವರು ಎಂಎಸ್ ಮಾಡಿದ್ದು, ಇವರ ಥೀಸಿಸ್ ಅನ್ನು ನೊಬೆಲ್ ಪುರಸ್ಕೃತ ಡಾ. ಸಿ.ವಿ ರಾಮನ್ ಅವರು ಪರಿಶೀಲಿಸಿದ್ದರು.
ಸೋದರ ಸಂಬಂಧಿ ಸಾಧು ಟಿ.ಎಲ್ ವಾಸ್ವಾನಿ ಅವರ ಹಾದಿಯನ್ನು ತುಳಿದ ಜೆಪಿ ವಾಸ್ವಾನಿ ಅವರು ಆಧಾತ್ಮ, ಸಮಾಜ ಸೇವೆ ಮಾರ್ಗದಲ್ಲಿ ಸಾಧಿಸಿದರು.












Click it and Unblock the Notifications