ಅಕ್ಟೋಬರ್ 1ರಿಂದ ನವದೆಹಲಿ-ಶಿರಡಿ ನಡುವೆ ನೇರ ವಿಮಾನ ಸೇವೆ
Recommended Video

ನವದೆಹಲಿ, ಸೆಪ್ಟೆಂಬರ್ 26 : ನವದೆಹಲಿ ಮತ್ತು ಶಿರಡಿ ನಡುವೆ ಅಕ್ಟೋಬರ್ 1ರಿಂದ ನೇರ ವಿಮಾನ ಹಾರಾಟ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ ಶಿರಡಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಒಂದು ವರ್ಷ ಪೂರೈಸುತ್ತಿದೆ.
ಸ್ಪೈಸ್ ಜೆಟ್ ನವದೆಹಲಿ ಮತ್ತು ಶಿರಡಿ ನಡುವೆ 4 ವಿಮಾನಗಳ ಹಾರಾಟ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಸ್ಪೈಸ್ ಜೆಟ್ ದೆಹಲಿಯಿಂದ ಶಿರಡಿಗೆ ನೇರ ವಿಮಾನ ಸೇವೆ ನೀಡುತ್ತಿರುವ ಮೊದಲ ಕಂಪನಿಯಾಗಿದೆ.
ಬೋಯಿಂಗ್ 737 ವಿಮಾನ ಅಕ್ಟೋಬರ್ 1ರಿಂದ ದೆಹಲಿ ಮತ್ತು ಶಿರಡಿ ನಡುವೆ ನೇರವಾಗಿ ಸಂಪರ್ಕ ಕಲ್ಪಿಸಲಿದೆ. ಧಾರ್ಮಿಕ ಕ್ಷೇತ್ರವಾದ ಶಿರಡಿಗೆ ಪ್ರತಿದಿನ ಸುಮಾರು 60 ಸಾವಿರ ಜನರು ಭೇಟಿ ನೀಡುತ್ತಾರೆ.

ದೆಹಲಿಯಿಂದ ನೇರ ವಿಮಾನ ಸೇವೆ ಆರಂಭವಾದರೆ ಪ್ರತಿದಿನ ಸಾಯಿ ಬಾಬಾ ದರ್ಶನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ. ವಿಮಾನ ಸೇವೆ ಆರಂಭವಾಗುವುದಕ್ಕೂ ಮುನ್ನ ರೈಲು ಮತ್ತು ರಸ್ತೆ ಮಾರ್ಗದಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದರು.
ಅಕ್ಟೋಬರ್ 1, 2017ರಲ್ಲಿ ಶಿರಡಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಿತು. ಏರ್ ಇಂಡಿಯಾದ ಅಲಯನ್ಸ್ ಏರ್‌ನ ಮೂರು ವಿಮಾನಗಳು ಶಿರಡಿಯಿಂದ ಹೈಬರಾಬಾದ್, ಮುಂಬೈಗೆ ಹಾರಾಟ ನಡೆಸುತ್ತಿವೆ.
ಅಂದಹಾಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿರಡಿಗೆ ಸ್ಪೈಸ್ ಜೆಟ್ ವಿಮಾನ ಸೇವೆ ಆರಂಭವಾಗಲಿದೆ. ಅಕ್ಟೋಬರ್ 1ರಂದು ಈ ಸೇವೆಗೆ ಚಾಲನೆ ದೊರೆಯಲಿದೆ.












Click it and Unblock the Notifications