ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಸುರಕ್ಷತೆಗೆ ಬಾಹ್ಯಾಕಾಶ ತಂತ್ರಜ್ಞಾನ ಬಳಕೆ: ಪಿಯೂಷ್ ಗೋಯೆಲ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 28: ಭಾರತೀಯ ರೈಲ್ವೆ ಇಲಾಖೆಗೆ ದೊಡ್ಡ ಸವಾಲು, ತಲೆ ನೋವಾಗಿ ಪರಿಣಮಿಸಿರುವ ಪ್ರಯಾಣಿಕರ ಸುರಕ್ಷತೆ ಬಗ್ಗೆ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಒತ್ತು ನೀಡಿದ್ದು, ಅದಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಿದ್ದಾರೆ.

19952 RPF ಕಾನ್‌ ಸ್ಟೆಬಲ್ ನೇಮಕಾತಿ ಸುಳ್ಳು: ನೈರುತ್ಯ ರೈಲ್ವೆ ಸ್ಪಷ್ಟನೆ19952 RPF ಕಾನ್‌ ಸ್ಟೆಬಲ್ ನೇಮಕಾತಿ ಸುಳ್ಳು: ನೈರುತ್ಯ ರೈಲ್ವೆ ಸ್ಪಷ್ಟನೆ

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಗೋಯೆಲ್, ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲಗಳ ಬಗ್ಗೆ ಸಚಿವಾಲಯವು ಗಮನ ಕೇಂದ್ರೀಕರಿಸಲಿದೆ. ಬೋಗಿಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

Space technology to be used with the help of ISRO to make train travel safer: Piyush Goyal

ಇಸ್ರೋ, ರೈಲ್ ಟೆಕ್ ಹಾಗೂ ಭಾರತೀಯ ರೈಲ್ವೆ ಒಟ್ಟಿಗೆ ಕೆಲಸ ಮಾಡಿ, ಬಾಹ್ಯಾಕಾಶ ತಂತ್ರಜ್ಞಾನ ಬಳಸಿಕೊಂಡು ಪ್ರಯಾಣಿಕರ ಸುರಕ್ಷತೆಗೆ ಹೇಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ. ಸದ್ಯದ ಸನ್ನಿವೇಶದಲ್ಲಿ ಇದು ತುಂಬಾ ಮುಖ್ಯವಾದದ್ದು ಎಂದು ಗೋಯೆಲ್ ಹೇಳಿದ್ದಾರೆ.

ರೈಲ್ವೆ ಆನ್ ಲೈನ್ ಸೇವೆಗಳಿಗೆ ಡೆಬಿಟ್ ಕಾರ್ಡ್ ನಿರ್ಬಂಧವಿಲ್ಲರೈಲ್ವೆ ಆನ್ ಲೈನ್ ಸೇವೆಗಳಿಗೆ ಡೆಬಿಟ್ ಕಾರ್ಡ್ ನಿರ್ಬಂಧವಿಲ್ಲ

ಗೂಗಲ್ ಜತೆಗೆ ಮಾತುಕತೆ ನಡೆಸುತ್ತಿದ್ದು, ನಾನೂರು ರೈಲು ನಿಲ್ದಾಣದಲ್ಲಿ ವೈಫೈ ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ರೈಲ್ ಟೆಕ್ ಅವರ ಬಳಿ ಮಾತನಾಡಿದ್ದೇವೆ. ಈ ಯೋಜನೆ ಮೂಲಕ ಸಾವಿರಾರು ರೈಲು ನಿಲ್ದಾಣದಲ್ಲಿ ವೈಫೈ ಸಂಪರ್ಕ ಒದಗಿಸಿ, ನಿಲ್ದಾಣದ ಅಕ್ಕಪಕ್ಕ ಇರುವ ಹಳ್ಳಿಗಳಿಗೂ ಸೌಲಭ್ಯ ವಿಸ್ತರಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಇನ್ನು ರೈಲ್ವೆ ಕ್ಷಿಪ್ರ ಪಡೆ ಹಾಗೂ ಪ್ರಯಾಣಿದ ಟಿಕೆಟ್ ಪರೀಕ್ಷಕರಿಗೆ ಸಮವಸ್ತ್ರ ಕಡ್ಡಾಯ ಮಾಡಲಾಗುವುದು ಎಂದಿದ್ದಾರೆ.

English summary
Railway Minister Piyush Goyal on Thursday said passenger safety in the Indian Railways is a pressing and urgent need for the government and that the use of space technology is actively being considered for the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X