ಪಟೇಲರ ಪ್ರತಿಮೆಯನ್ನು ವಿರೋಧಿಸುತ್ತಿರುವವರು ಯಾರು? ಅವರ ವಾದ ಏನು?
ನವದೆಹಲಿ, ಅಕ್ಟೋಬರ್ 31: ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ವಿಶ್ವದ ಅತಿ ದೊಡ್ಡ ಪ್ರತಿಮೆಯನ್ನು ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಿದ್ದಾರೆ.
ಸುಮಾರು ಮೂರು ಸಾವಿರ ಕೋಟಿ ವೆಚ್ಚದ 183 ಮೀಟರ್ ಎತ್ತರದ ಈ ಪ್ರತಿಮೆಯನ್ನು ನಿರ್ಮಿಸಿದ್ದಕ್ಕೆ ಮೋದಿ ಸರ್ಕಾರಕ್ಕೆ ಭಾರಿ ಪ್ರಶಂಸೆಗಳ ಸುರಿಮಳೆಯೇ ಆಗುತ್ತಿದೆ.
ಪ್ರಶಂಸೆಗಳ ಜೊತೆ-ಜೊತೆಗೆ ಹಲವರು ಈ ಮೂರ್ತಿ ನಿರ್ಮಾಣದ ವಿರೋಧವನ್ನೂ ಮಾಡಿದ್ದಾರೆ. ಇವರು ಮೂರ್ತಿ ನಿರ್ಮಾಣವನ್ನು ಮಾತ್ರವೇ ವಿರೋಧಿಸಿದ್ದಾರೆಯೇ ಹೊರತು ಸರ್ದಾರ್ ವಲ್ಲಬಬಾಯ್ ಪಟೇಲರನ್ನಾಗಲಿ, ಅವರ ವ್ಯಕ್ತತ್ವವನ್ನಾಗಲಿ ಅಲ್ಲ ಎಂಬುದು ಮೊದಲಿಗೆ ತಿಳಿದುಕೊಳ್ಳಬೇಕು.
ಟ್ವಿಟ್ಟರ್‌ನಲ್ಲಿ #statueofunity ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಲಕ್ಷಾಂತರ ಜನ ಏಕತಾಪ್ರತಿಮೆ ಬಗ್ಗೆ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಪರವಾಗಿ ಹಲವರು ಅಭಿಪ್ರಾಯ ಪ್ರಟಿಸಿದ್ದರೆ ವಿರೋಧ ವ್ಯಕ್ತಪಡಿಸಿ ಸಹ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವು ವಿರೋಧದ ಟ್ವೀಟ್‌ಗಳು ಇಲ್ಲಿವೆ.
| Array |
ವಿಭಜಿಸಿದ ವ್ಯಕ್ತಿಯಿಂದ ಏಕತೆಯ ಮೂರ್ತಿ ಉದ್ಘಾಟನೆ
ಯಾವ ವ್ಯಕ್ತಿ ತನ್ನ ಜೀವನ ಪೂರ್ತಿ ಜನರನ್ನು ವಿಭಜಿಸಿ ಆಡಳಿತ ಮಾಡುತ್ತಾ ಬಂದಿದ್ದಾರೆಯೋ ಆ ವ್ಯಕ್ತಿ ಇಂದು ಏಕತಾ ಮೂರ್ತಿ ಉದ್ಘಾಟಿಸುತ್ತಿದ್ದಾರೆ ಎಂತಹಾ ವಿರೋಧಾಭಾಸ ಎಂದು ಟ್ವೀಟ್ ಮಾಡಿದ್ದಾರೆ ದಲಿತ ಹೋರಾಟಗಾರ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ. ಏಕತಾ ಪ್ರತಿಮೆ ಬಗ್ಗೆ ಹಲವು ಟ್ವೀಟ್ ಮಾಡಿರುವ ಮೆವಾನಿ ಬುಡಕಟ್ಟು ಜನಾಂಗದವರು ಏಕತಾಮೂರ್ತಿ ವಿರೋಧಿಸಿ ಮೋದಿಗೆ ರಕ್ತದಲ್ಲಿ ಬರೆದಿರುವ ಪತ್ರದ ಚಿತ್ರವನ್ನೂ ಹಾಕಿದ್ದಾರೆ.
| Array |
ರಾಹುಲ್ ಗಾಂಧಿ ಟ್ವೀಟ್ ಬಾಣ
ಏಕತಾ ಪ್ರತಿಮೆ ಉದ್ಘಾಟನೆ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿದ್ದು, ವಲ್ಲಬಬಾಯ್ ಪಟೇಲ್ ಅವರು ನಿರ್ಮಿಸಿದ್ದ ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಒಡೆಯುವ ಕೆಲಸ ಮಾಡುತ್ತಿರುವ ಸರ್ಕಾರವೇ ಪಟೇಲರ ಮೂರ್ತಿ ನಿರ್ಮಿಸುತ್ತಿರುವುದು ವ್ಯಂಗ್ಯ. ಸರ್ಕಾರಿ ಸಂಸ್ಥೆಗಳನ್ನು ಹಳ್ಳ ಹಿಡಿಸುತ್ತಿರುವುದು ಪಟೇಲರಿಗೆ ಮಾಡುವ ವಿಶ್ವಾಸ ದ್ರೋಹ ಎಂದು ಅವರು ಟ್ವೀಟಿಸಿದ್ದಾರೆ.
| Array |
ರಕ್ತದ ರಾಜಕೀಯ ನಡೆದಿದ್ದ ಕಡೆ ಏಕತೆಯ ಪ್ರತಿಮೆ
ರಕ್ತ ಚೆಲ್ಲಿ ರಾಜಕೀಯ ನಡೆಸಿದ್ದ ಗುಜರಾತ್‌ನಲ್ಲಿ ಇಂದು ದೇಶವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿಯ ಮೂರ್ತಿ ಅನಾವರಣ ಆಗುತ್ತಿದೆ. ಯಾವ ವ್ಯಕ್ತಿ ರಕ್ತದ ರಾಜಕೀಯ ಭಾಗವಾಗಿದ್ದರೋ ಅದೇ ವ್ಯಕ್ತಿ ಏಕತಾ ಮೂರ್ತಿ ಉದ್ಘಾಟಿಸುತ್ತಿದ್ದಾರೆ ಎಂದು ಗೋಧ್ರಾ ಹತ್ಯಾಕಾಂಡದ ನೆನಪು ಮಾಡಿ ಮೋದಿಯನ್ನು ಕುಟುಕಿದ್ದಾರೆ ಪತ್ರಕರ್ತೆ ರಾನಾ ಅಯೂಬ್.
|
ಪ್ರತಿಮೆ ಬದಲು ವಿಶ್ವವಿದ್ಯಾಲಯ ಕಟ್ಟಬಹುದಿತ್ತು
ದಕ್ಷಿಣ ಭಾರತದ ಖ್ಯಾತ ನಟ ಸಿದ್ಧಾರ್ತ್ ಟ್ವೀಟ್ ಮಾಡಿ ಅಷ್ಟೋಂದು ಕೋಟ್ಯಂತರ ಹಣ ವೆಚ್ಚ ಮಾಡಿ ಪ್ರತಿಮೆ ನಿರ್ಮಿಸುವ ಬದಲಿಗೆ ಅದೇ ವೆಚ್ಚದಲ್ಲಿ ಪಟೇಲರ ಹೆಸರಿನಲ್ಲಿ ವಿಶ್ವವಿದ್ಯಾಲಯವೊಂದನ್ನು ನಿರ್ಮಿಸಿದ್ದರೆ ಒಳ್ಳೆಯದಾಗಿತ್ತು. ಪ್ರತಿಮೆ ನಿರ್ಮಾಣದ ಹಿಂದೆ ಮೋದಿ ಅವರ ತಮಗೆ ತಾವೇ ಪ್ರಚಾರ ಕೊಟ್ಟುಕೊಳ್ಳುವ 'ಮಾರ್ಕೆಂಟಿಂಗ್ ತಂತ್ರ' ಅಡಗಿದೆ ಅಷ್ಟೆ ಎಂದು ಹೇಳಿದರು.
|
ಕೇರಳದಲ್ಲಿ ಕಾಣಿ ಅಚ್ಛೆ ದಿನ್
ಮೋದಿ ಅವರು ಇಂದು 3000 ಕೋಟಿ ಎಚ್ಚದ ಭವ್ಯ ಮೂರ್ತಿ ಅನಾವರಣ ಮಾಡುತ್ತಿದ್ದರೆ ಅತ್ತ ಕೇರಳದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗಾಗಿ 20 ಕೋಟಿ ವೆಚ್ಚದಲ್ಲಿ 192 ಹೊಸ ಮನೆಗಳನ್ನು ಕಟ್ಟಿರುವ ಅಲ್ಲಿನ ಪಿಣರಾಯಿ ವಿಜಯನ್ ಸರ್ಕಾರ ಅದನ್ನು ಫಲಾನುಭವಿಗಳಿಗೆ ಹಸ್ತಾಂತರಿಸುತ್ತಿದೆ. ಇದು ನಿಜವಾದ ಅಚ್ಛೆ ದಿನ್ ಎಂದು ಟ್ವೀಟ್ ಮಾಡಿದ್ದಾರೆ ರಿಜಾಯ್ ಎನ್ನುವರು.
|
ಭಾರತೀಯ ಭಾಷೆಗಳಿಗೆ ಆದ್ಯತೆ ಇಲ್ಲ ಏಕೆ?
ಏಕತಾ ಪ್ರತಿಮೆಯ ಬಳಿ ಹಾಕಲಾಗಿರುವ ಫಲಕದಲ್ಲಿ ರಶಿಯಾ, ಸ್ಪಾನಿಷ್, ಮ್ಯಾಂಡರಿನ್, ಫ್ರೆಂಚ್ ಭಾಷೆಗಳಲ್ಲೆಲ್ಲಾ 'ಏಕತಾ ಮೂರ್ತಿ' ಎಂದು ಬರೆಯಲಾಗಿದೆ. ಆದರೆ ಹಲವು ಭಾರತೀಯ ಭಾಷೆಗಳು ಅದರಲ್ಲಿಲ್ಲ ಈ ಬಗ್ಗೆ ಒಡಿಶಾದ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಪ್ರಶ್ನೆ ಮಾಡಿದ್ದಾರೆ. ಈ ಫಲಕದಲ್ಲಿ ಕನ್ನಡವೂ ಇಲ್ಲ.












Click it and Unblock the Notifications