ಸ್ತ್ರೀಯೇ ನೀನೇ ಒಡವೆ, ನಿನಗೇಕೆ ಮತ್ತೊಂದು ಒಡವೆ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ, 16: ಮದುವೆ ಮುಂಜಿಗಳ ಸಮಾರಂಭ ಪ್ರಾರಂಭ. ಬಂಗಾರದೊಡವೆಗಳದ್ದೇ ಕಾರುಬಾರು. ಮಹಿಳೆಯರಿಗೆ ಒಡವೆ ಇಲ್ಲದೆ ಕಾರ್ಯಕ್ರಮಗಳು ಪರಿಪೂರ್ಣಗೊಂಡಂತಾಗುವುದಿಲ್ಲ. ಮಹಿಳೆಯರು ಸಮಾರಂಭಕ್ಕೆ ಹೋದಾಗ ಊಟಮಾಡದೇ ಬರುತ್ತಾರೆ. ಆದರೆ ತಾವು ತೊಟ್ಟ ಒಡವೆಗಳ ಭಾಷಣ ಮಾಡದೇ ಬರುವುದೇ ಇಲ್ಲ.

ಮಾರುಕಟ್ಟೆಗೆ ನವೀನ ವಿನ್ಯಾಸದ ಒಡವೆಗಳು ಲಗ್ಗೆ ಇಡುವುದೇ ತಡ ಮಹಿಳಾ ಮಣಿಗಳ ದಂಡೇ ಎಲ್ಲಾ ಬಂಗಾರದ ಅಂಗಡಿಗಳಲ್ಲಿ ನೆರೆದಿರುತ್ತದೆ. ಒಡವೆಗಳ ಮಾರಾಟ ಹೆಚ್ಚಳಕ್ಕಾಗಿ ರೂಪದರ್ಶಿಗಳ ಕಸರತ್ತು ಮುಂದುವರೆದಿರುತ್ತದೆ.

ಜೆಎನ್ ಯು ಪ್ರಕರಣ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳ ಪ್ರತಿಭಟನೆಗಳು ಮುಂದುವರೆಯುತ್ತಿದೆ. ಜೆಎನ್ ಯು ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಘೋಷಣೆ ಕೂಗಿದಾಗ ನ್ಯಾಯವಾದಿಗಳು ವಿದ್ಯಾರ್ಥಿಗಳು ಪರಸ್ಪರ ಕಾದಾಡಿದರು.[JNU: ರಾಹುಲ್ ಗಾಂಧಿಗೆ ಅಮಿತ್ ಶಾ ಎಸೆದ 8 ಪ್ರಶ್ನೆ]

ಮೈಸೂರು ಸೇರಿದಂತೆ ಹಲವಾರು ನಗರಗಳು ಸ್ಚಚ್ಛ ನಗರಿ ಎಂಬ ಕಿರೀಟ ಧರಿಸಿದ್ದು, ಪ್ರಶಸ್ತಿ ವಿಜೇತ ನಗರದ ಸಂತಸ ಮುಗಿಲು ಮುಟ್ಟಿರುತ್ತದೆ. ಹೀಗೆ ಹಲವು ಸುದ್ದಿಗಳಿಗೆ ಭಾರತ ವೇದಿಕೆ ಆಗಿದೆ. ಮೇಲಿನ ಸುದ್ದಿಗಳ ವಿಸ್ತಾರ ಮಾಹಿತಿ ಜೊತೆಗೆ ಇನ್ನಿತರ ಸುದ್ದಿಗಳು ಇಲ್ಲಿವೆ. [ಪಿಟಿಐ]

Ramp ವಾಕ್ ಗೆ ತಯಾರಾಗುತ್ತಿದ್ದೇನೆ

Ramp ವಾಕ್ ಗೆ ತಯಾರಾಗುತ್ತಿದ್ದೇನೆ

ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ವಿನ್ಯಾಸದ ಒಡವೆಗಳನ್ನು ಜನರೆದೆರುವ ಪ್ರದರ್ಶಿಸುವ ಸಲುವಾಗಿ ರೂಪದರ್ಶಿ ಒಡವೆಗಳನ್ನು ತೊಡುತ್ತಿರುವುದು. ಆಗ ಅನಿಸಿದ್ದು ಹುಡುಗಿಯೇ ನನಗೆ ನೀನು ಒಡವೆ. ನಿನಗೇಕೆ ಒಡವೆ.

ಒಡವೆಗಳ ನಡುವೆ ಪ್ರಿಯಾಮಣಿ

ಒಡವೆಗಳ ನಡುವೆ ಪ್ರಿಯಾಮಣಿ

ನಟಿ ಪ್ರಿಯಾಮಣಿ ಮಾರುಕಟ್ಟೆಗೆ ಬಂದ ನವೀನ ವಿನ್ಯಾಸದ ಒಡವೆಗಳನ್ನು ಹಿಡಿದು ರೂಪದರ್ಶಿಯರ ನಡುವೆ ಫೋಸ್ ಕೊಟ್ಟಿದ್ದು ಹೀಗೆ. ಬೆಂಗಳೂರಲ್ಲಿ ನಡೆದ ಚಿನ್ನಾಭರಣಗಳ ಮೇಳದಲ್ಲಿ ನಟಿ ಪ್ರಿಯಾಮಣಿ ಭಾಗವಹಿಸಿದ್ದರು.

ಬಾಲಿವುಡ್ ಹಿರಿಯರ ಸಮಾಗಮ

ಬಾಲಿವುಡ್ ಹಿರಿಯರ ಸಮಾಗಮ

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ನಟಿ ಜಯಾ ಬಚ್ಚನ್, ಧರ್ಮೇಂದ್ರ, ಹೇಮಾಮಾಲಿನಿ ಅವರ ಸಮಾಗಮ ಒಂದೇ ವೇದಿಕೆಯಲ್ಲಿ ಆಯಿತು. ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಾ ಹೇಮಾಮಾಲಿನಿ ಅವರ ಹೊಸ ಅಲ್ಬಮ್ ಪ್ರಮೋಷನ್ ನಲ್ಲಿ ಪಾಲ್ಗೊಂಡು ಶುಭ ಹಾರೈಸಿ ಸಂತೋಷಪಟ್ಟರು.

ಮಹಿಳಾ ಹಾಸ್ಟೆಲ್ ಒಳಗೆ ಪ್ರವೇಶವಿಲ್ಲ

ಮಹಿಳಾ ಹಾಸ್ಟೆಲ್ ಒಳಗೆ ಪ್ರವೇಶವಿಲ್ಲ

ಮಹಿಳಾ ಪಾಕಿಸ್ತಾನಿ ಕಮಾಂಡೋಗಳು ಚರ್ಸಾದ ಬಳಿಯಿರುವ ಬಚ್ಚಾ ಖಾನ್ ವಿಶ್ವ ವಿದ್ಯಾಲಯದ ಹಾಸ್ಟೆಲ್ ಎದುರು ಗನ್ ಹಿಡಿದು ಕಾಯುತ್ತಿರುವುದು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ 21ಜನರ ಮೇಲೆ ದಾಳಿ ನಡೆದ ಮೇಲೆ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಗಳಿಗೆ ಮಹಿಳಾ ಕಮಾಂಡೋಗಳು ನಿಯೋಜನೆಯಾದರು.

ವಿದ್ಯಾರ್ಥಿಗಳು ಮತ್ತು ನ್ಯಾಯವಾದಿಗಳ ನಡುವೆ ಕಾದಾಟ

ವಿದ್ಯಾರ್ಥಿಗಳು ಮತ್ತು ನ್ಯಾಯವಾದಿಗಳ ನಡುವೆ ಕಾದಾಟ

ಜೆಎನ್ ಯು ಸಂಘಟನೆ ಅಧ್ಯಕ್ಷ ಬಂಧನ ನಿರಾಕರಿಸಿದ ಜವಾಹರಲಾಲ್ ವಿವಿಯ ವಿದ್ಯಾರ್ಥಿಗಳು ನ್ಯಾಯಾವಾದಿಗಳೊಂದಿಗೆ ಕಾದಾಡಿದ್ದು, ನೀನಾ ನಾನಾ ಎಂಬ ವಾತಾವರಣ ನವದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ನಿರ್ಮಾಣವಾಗಿತ್ತು

ಸ್ವಚ್ಚಾ ಸುರಕ್ಷಾ ಪ್ರಶಸ್ತಿ-2016

ಸ್ವಚ್ಚಾ ಸುರಕ್ಷಾ ಪ್ರಶಸ್ತಿ-2016

ಕೇಂದ್ರ ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯನಾಯ್ಡು ನವದೆಹಲಿಯಲ್ಲಿ ಸ್ವಚ್ಚಾ ಸುರಕ್ಷಾ ಪ್ರಶಸ್ತಿ-2016 ಪ್ರಶಸ್ತಿ ನೀಡಿದರು. ಪ್ರಶಸ್ತಿಯು ಗಾಂಧಿ ಪ್ರತಿಮೆಯನ್ನು ಒಳಗೊಂಡಿತ್ತು. ವಿಜೇತರು ಗಾಂಧಿ ಪ್ರತಿಮೆ ಪಡೆದು ಸಂಭ್ರಮಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor Priyamani with models at a fashion show during Jewels Exotica in Bengaluru. Female Pakistani commandos stand guard outside a hostel for girls at the Bacha Khan University in Charsadda.Union Urban Development Minister M Venkaiah Naidu hands over the Swachh Survekshan-2016 award to recipients in New Delhi
Please Wait while comments are loading...