ಕೆಲವರು ಆರ್.ವಿ.ದೇಶಪಾಂಡೆ ಸಿಎಂ ಆಗ್ತಾರೆ ಅಂತಿದ್ದಾರೆ: ಸಿದ್ದುಗೆ ಎಚ್‌ಡಿಕೆ ಟಾಂಗ್
ನವದೆಹಲಿ, ಆಗಸ್ಟ್ 30: ಮತ್ತೆ ಸಿಎಂ ಆಗ್ತೀನಿ ಎಂದ ಸಿದ್ದರಾಮಯ್ಯ ಅವರ ಹೇಳಿಕೆಗೆ ಕುಮಾರಸ್ವಾಮಿ ಜಾಣತನದಿಂದ ಪ್ರತಿ ಹೇಳಿಕೆ ನೀಡಿದ್ದಾರೆ.
ನವದೆಹಲಿಯ ಸುದ್ದಿಗಾರರಿಂದ ಎದುರಾದ ಈ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ನಾನು ಸಿಎಂ ಆಗ್ತೀನಿ ಅಂತಿದ್ದಾರೆ, ಕೆಲವರು ಆರ್.ವಿ.ದೇಶಪಾಂಡೆ ಸಿಎಂ ಆಗ್ತಾರೆ ಅಂತಿದ್ದಾರೆ' ಎಂದಿದ್ದಾರೆ.
ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ವಲಯದಲ್ಲೇ ಗೊಂದಲ ಮೂಡಿಸಿದ್ದಾರೆ. ಕಾಂಗ್ರೆಸ್ ಪಕ್ಷವೆಲ್ಲಾ ಸಿದ್ದರಾಮಯ್ಯ ಅವರ ಸಿಎಂ ಹೇಳಿಕೆ ಬಗ್ಗೆ ಚರ್ಚೆ ಮಾಡುತ್ತಿರುವಾಗಲೇ ಅದೇ ಸಿಎಂ ರೇಸಿಗೆ ಆರ್.ವಿ.ದೇಶಪಾಂಡೆ ಹೆಸರನ್ನು ಸಿಎಂ ಜೋಡಿಸಿಬಿಟ್ಟಿದ್ದಾರೆ.

ದೇಶಪಾಂಡೆ ಹೆಸರು ಹೇಳಿ ಸುಮ್ಮನಾಗದ ಕುಮಾರಸ್ವಾಮಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ತಮ್ಮದೇನೂ ಅಭ್ಯಂತರವಿಲ್ಲ. ಆದರೆ ಸಿದ್ದರಾಮಯ್ಯ ಅವರು ಈಗಾಗಲೇ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ ಎಂದು ವಿವಾದಕ್ಕೆ ತೆರೆ ಎಳೆಯುವ ಮಾತುಗಳನ್ನೂ ಆಡಿದ್ದಾರೆ.












Click it and Unblock the Notifications