• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆ.1 ರಿಂದ ಹೊಸ ತೆರಿಗೆ ನಿಯಮಗಳು ಜಾರಿ: ಹೆಚ್ಚಲಿದೆ ಹೊರೆ

|

ನವದೆಹಲಿ, ಆಗಸ್ಟ್ 31: ಹೊಸ ತೆರಿಗೆ ನಿಯಮಗಳು ಸೆಪ್ಟೆಂಬರ್ 01 ರಿಂದ ದೇಶದಾದ್ಯಂತ ಚಾಲ್ತಿಗೆ ಬರಲಿವೆ. ಹೊಸ ತೆರಿಗೆ ನಿಯಮಗಳು ಗ್ರಾಹಕರಿಗೆ ಇನ್ನಷ್ಟು ಹೊರೆಯನ್ನು ಹೆಚ್ಚಿಸಲಿವೆ.

ರೈಲ್ವೆ ಟಿಕೆಟ್ ಆನ್‌ಲೈನ್ ಬುಕಿಂಗ್ ದುಬಾರಿ ಆಗಲಿದ್ದು, ಎಸಿ ಟಿಕೆಟ್ ಬುಕ್ ಮಾಡಿದರೆ 30 ರೂಪಾಯಿ, ನಾನ್ ಎಸಿ ಬುಕ್ ಮಾಡಿದರೆ 15 ರೂ. ಹೆಚ್ಚುವರಿ ಹಣ ನೀಡಬೇಕಾಗುತ್ತದೆ.

ಒಂದು ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡರೆ ಮೂಲದಲ್ಲಿಯೇ 2% ತೆರಿಗೆ ಕಟ್ ಆಗಲಿದೆ. ಅಕಸ್ಮಾತ್ ಈ ಹಣಕಾಸು ವರ್ಷದಲ್ಲಿ ಈಗಾಗಲೇ ಒಂದು ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ಹಣ ತೆಗೆದುಕೊಂಡಿದ್ದರೆ, ಇನ್ನು ಮುಂದಿನ ಪ್ರತಿ ವ್ಯವಹಾರದಲ್ಲೂ ಮೂಲದಲ್ಲಿ ತೆರಿಗೆ ಕಟ್ ಆಗಲಿದೆ.

ಆರ್‌ಬಿಐನ ರೆಪೊ ದರ ಆಧರಿಸಿ ಗೃಹ, ವಾಹನ ಸಾಲಗಳ ಬಡ್ಡಿ ನಿಗದಿ ಮಾಡಲಾಗುತ್ತದೆ. ಇದು ಅಲ್ಪ ಮಟ್ಟಿಗೆ ಗ್ರಾಹಕರಿಗೆ ಅನುಕೂಲ ತರಲಿದ್ದು, ಗೃಹ ಮತ್ತು ಇತರೆ ಸಾಲಗಳ ಇಎಂಐ ಅನ್ನು ಕಡಿಮೆಗೊಳಿಸಲಿದೆ.

ಮದುವೆ, ಇತರ ಸಮಾರಂಭಗಳಿಗೆ ಕೊಟ್ಟ ಮೊತ್ತಕ್ಕೆ ತೆರಿಗೆ

ಮದುವೆ, ಇತರ ಸಮಾರಂಭಗಳಿಗೆ ಕೊಟ್ಟ ಮೊತ್ತಕ್ಕೆ ತೆರಿಗೆ

ಮದುವೆ ಮತ್ತಿತರ ಸಮಾರಂಭಗಳ ಗುತ್ತಿಗೆದಾರಿಗೆ 50 ಲಕ್ಷ ರೂಪಾಯಿಗೂ ಮೀರಿದ ಪಾವತಿ ಮಾಡಿದರೆ 5% ತೆರಿಗೆ ಕಡಿತವಾಗಲಿದೆ.

ಪ್ಯಾನ್ ಬದಲು ಆಧಾರ್ ಸಹ ಬಳಸಬಹುದು

ಪ್ಯಾನ್ ಬದಲು ಆಧಾರ್ ಸಹ ಬಳಸಬಹುದು

ಆಧಾರ್ ಜೋಡಣೆ ಕಡ್ಡಾಯವಾಗಿದ್ದು, ಇನ್ನೂ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಲ್ಲವೆಂದರೆ ಪ್ಯಾನ್ ನಿಷ್ಕ್ರಿಯಗೊಳ್ಳಲಿದೆ. ನಾಳೆ (ಸೆ.01) ರಿಂದ ಕೆಲವು ವ್ಯವಹಾರಗಳಿಗೆ ಪ್ಯಾನ್ ಕಾರ್‌ ಬದಲು ಆಧಾರ್ ಕಾರ್ಡ್ ಸಹ ಬಳಸಬಹುದು.

ಸ್ಥಿರಾಸ್ತಿ ಖರೀದಿಸಿದರೆ ತೆರಿಗೆ ಕಡಿತ

ಸ್ಥಿರಾಸ್ತಿ ಖರೀದಿಸಿದರೆ ತೆರಿಗೆ ಕಡಿತ

ಸ್ಥಿರಾಸ್ತಿ ಖರೀದಿ ಮಾಡುವಾಗಲೂ ಸಹ ಮೂಲದಲ್ಲಿ 1% ತೆರಿಗೆ ಕಡಿತ ಆಗಲಿದೆ. 50 ಲಕ್ಷ ಮೌಲ್ಯಕ್ಕೂ ಮೀರಿದ ಸ್ಥಿರಾಸ್ತಿ ಖರೀದಿ ಮಾಡಿದರೆ 1% ಟಿಡಿಎಸ್ ಕಡಿತ ಆಗಲಿದೆ.

ಹಿಂಪಡೆದ ವಿಮೆ ಹಣದ ಮೇಲೆ ತೆರಿಗೆ

ಹಿಂಪಡೆದ ವಿಮೆ ಹಣದ ಮೇಲೆ ತೆರಿಗೆ

ವಾಪಸ್ ಪಡೆಯುವ ವಿಮೆಯ ಹಣ (ಮೆಚುರಿಟಿ) ದ ಮೇಲೂ ಟಿಡಿಎಸ್ ಹೇರಿದೆ ಸರ್ಕಾರ. ಮೆಚುರಿಟಿ ಹಣದಲ್ಲಿನ ನಿವ್ವಳ ಆದಾಯ (ಕಂತುಗಳ ಹಣ ಹೊರತು ಪಡಿಸಿ, ಬಡ್ಡಿ ರೂಪದಲ್ಲಿ ಬಂದಿರುವ ಆದಾಯ)ದ ಮೇಲೆ 5% ತೆರಗೆ ಮೂಲದಲ್ಲಿಯೇ ಕಡಿತ ಆಗಲಿದೆ.

ಮೋಟಾರ್ ವಾಹನ ಕಾಯ್ದೆ ಜಾರಿ

ಮೋಟಾರ್ ವಾಹನ ಕಾಯ್ದೆ ಜಾರಿ

ಇದರ ಜೊತೆಗೆ ತಿದ್ದುಪಡಿ ಆಗಿರುವ ಮೋಟಾರು ವಾಹನ ಕಾಯ್ದೆಯೂ ಸಹ ನಾಳೆಯಿಂದಲೇ ದೇಶದಾದ್ಯಂತ ಜಾರಿಗೆ ಬರಲಿದ್ದು, ನಾಳೆಯಿಂದ ಸಂಚಾರ ನಿಯಮ ಉಲ್ಲಂಘನೆ ದುಬಾರಿ ಆಗಲಿದೆ.

English summary
Some new tax rules applying from September 1st. Train ticket online booking prices are going to more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X