ಸೋಲಾರ್ ಹಗರಣ: ಸೆಕ್ಸ್ ಆಫರ್ ಬದಲಿಗೆ ಕೋಟಿ ರು ಲಂಚ?
ತಿರುವನಂತಪುರಂ, ಜ. 27: ಬಹುಕೋಟಿ ಸೋಲಾರ್ ಹಗರಣದ ಪ್ರಮುಖ ಆರೋಪಿಗಳಾದ ಸರಿತಾ ಎಸ್ ನಾಯರ್ ಅವರು ನನಗೆ ಸಿಎಂ ಕಚೇರಿಯಿಂದ ಸೆಕ್ಸ್ ಆಫರ್ ಏನು ಬಂದಿರಲಿಲ್ಲ. ಬದಲಿಗೆ ಕೋಟ್ಯಂತರ ರುಪಾಯಿ ಲಂಚದ ಬೇಡಿಕೆ ಬಂದಿತ್ತು ಎಂದಿದ್ದಾರೆ.
ಮತ್ತೊಬ್ಬ ಆರೋಪಿ ಬಿಜು ರಾಧಾಕೃಷ್ಣನ್ ಅವರು ಈ ಹಿಂದೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಮೇಲೆ ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ರು ಎಂದು ಆರೋಪಿಸಿದ್ದರು. ಆದರೆ, ಎಲ್ಲಾ ಆರೋಪಗಳನ್ನು ಮುಖ್ಯಮಂತ್ರಿಗಳ ಕಚೇರಿ ಅಲ್ಲಗೆಳೆದಿತ್ತು.[ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು]
ಆದರೆ, ಸೋಮವಾರ (ಜನವರಿ 27) ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಕೊಚ್ಚಿಗೆ ಬಂದಿದ್ದ ಸರಿತಾ ಅವರು ಜಸ್ಟೀಸ್ ಶಿವರಾಜನ್ ಆಯೋಗದ ಎದುರು ನೀಡಿದ ಹೇಳಿಕೆ ಎಲ್ಲರ ಹುಬ್ಬೇರಿಸಿದೆ. ['ನನಗೆ ಗಲ್ಲು ಶಿಕ್ಷೆ ಕೊಡಿ' ಎಂದ 'ಸೋಲಾರ್' ಅಪರಾಧಿ]
ಕೇರಳ ಸಿಎಂ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯ ಆರ್ಯದಾನ್ ಮೊಹಮ್ಮದ್ ಅವರು 1.90 ಕೋಟಿ ರು ಲಂಚ ಕೇಳಿದ್ದರು. ಲಂಚದ ಮೊತ್ತ ಪಾವತಿಸಿದ ಮೇಲೆ ಬಹುಕೋಟಿ ಸೋಲಾರ್ ಯೋಜನೆಯನ್ನು ವಹಿಸಲಾಯಿತು. ಇದಲ್ಲದೆ ಇಂಧನ ಸಚಿವ ಅರ್ಯದಾನ್ ಮೊಹಮ್ಮದ್ ಅವರ ಪಿಎಗೂ 40 ಲಕ್ಷ ರು ಲಂಚ ನೀಡಲಾಗಿದೆ ಎಂದು ಸರಿತಾ ಹೇಳಿದ್ದಾರೆ.
ಚಾಂಡಿ ಅವರ ಮಾಜಿ ಪಿಎ ಜಿಕುಮೊನ್ ಅವರಿಂದ 7 ಕೋಟಿ ರು ಲಂಚ ಬೇಡಿಕೆ ಬಂದಿತ್ತು. ಈ ಮೊತ್ತವನ್ನು ಚಾಂಡಿ ಅವರ ಅನಧಿಕೃತ ಸಾಥಿ ದೆಹಲಿ ನಿವಾಸಿ ಕುರುವಿಲ್ಲ ಎಂಬುವವರಿಗೆ ನೀಡಬೇಕಿತ್ತು. ಮುಂದೇನಾಯ್ತು? ಓದಿ...

ಸಿಎಂ ಉಮ್ಮನ್ ಚಾಂಡಿ ಪ್ರತಿಕ್ರಿಯೆ
ನಾನು ಯಾವುದೇ ರೀತಿ ಆಕೆಗೆ ನೆರವಾಗಿಲ್ಲ. ಸಮಿತಿ ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರಲಿದೆ. ''ಸರಿತಾ ಹಾಗೂ ಸಹ ಆರೋಪಿ ಬಿಜು ರಾಧಾಕೃಷ್ಣನ್ ಅವರಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿರುವುದು ರಾಜ್ಯ ಸರಕಾರದ ನಿಲುವನ್ನು ಸಮರ್ಥಿಸಿದಂತಾಗಿದೆ. ಸಮಿತಿ ಮುಂದೆ ಸಾಮಾನ್ಯ ಆರೋಪಿಯಾಗಿ ಹಾಜರಾಗಿ ಹೇಳಿಕೆ ನೀಡುತ್ತೇನೆ ಎಂದಿದ್ದಾರೆ. ಸಿಎಂ ಪರಿಹಾರ ನಿಧಿಗೆ ಸರಿತಾ ನೀಡಿದ ಚೆಕ್ ಬೌನ್ಸ್ ಆಗಿದೆ ಎಂಬುದು ಬೇರೆ ವಿಷಯ.

ಲೈಂಗಿಕ ಕಿರುಕುಳಕ್ಕೆ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ
ಸಚಿವರಾದ ಶಿಬು ಬೇಬಿ ಜಾನ್ ಮತ್ತು ಎ.ಪಿ.ಅನಿಲ್ ಕುಮಾರ,ಕಾಂಗ್ರೆಸ್ ಶಾಸಕರಾದ ಹೈಬಿ ಎಡೆನ್ ಮತ್ತು ಎ.ಪಿ.ಅಬ್ದುಲ್ಲಾ ಕುಟ್ಟಿ,ಕಾಂಗ್ರೆಸ್ ನಾಯಕ ಆರ್ಯದನ್ ಶೌಕತ್ತು ಮತ್ತು ಅನಿಲ್ ಕುಮಾರರ ಆಪ್ತ ಕಾರ್ಯದರ್ಶಿ ಕೂಡ ನಾಯರ್‌ಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಬಿಜು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ಸರಿತಾ ಯಾವುದೇ ಹೇಳಿಕೆ ನೀಡಿಲ್ಲ. ಹಾಗೂ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ.

ಲೆಕ್ಕಕ್ಕೆ ಸಿಗದ ಲಂಚದ ಮೊತ್ತ
ಬಿಜು ನೀಡಿದ ಹೇಳಿಕೆಯಂತೆ.. ಮೂರು ಕಂತುಗಳಲ್ಲಿ 5.5 ಕೋ.ರೂ.ಗಳನ್ನು ಲಂಚವಾಗಿ ಚಾಂಡಿಯವರಿಗೆ ನೀಡಿದ್ದೇನೆ ಎಂದಿದ್ದಾರೆ. ನಂತರ ಸಿಎಂ ಅವರ ಗನ್ ಮ್ಯಾನ್ ಸಲೀಂ ರಾಜ್ ಹಾಗೂ ಆಪ್ತ ಸಹಾಯಕ ಟಿ ಜೊಪೆನ್ ಜಿಕುಮೊನ್ ಜೋಕಬ್ ಅವರಿಗೆ ಇನ್ನೂ 5 ಲಕ್ಷ ಲಂಚ ಸಂದಾಯವಾಗಿದೆ. ಆದರೆ, ಸರಿತಾ ನೀಡಿದ ಲೆಕ್ಕ ಈ ಸಂಖ್ಯೆಯನ್ನು ದಾಟುತ್ತಿದೆ. 7 ಕೋಟಿ ಲಂಚದ ಪ್ರಕರಣ ಎಂಬುದು ಈಗ ಲೆಕ್ಕಕ್ಕಿಲ್ಲ.

ಬಿಜು ರಾಧಾಕೃಷ್ಣನ್ ಮೇಲೆ ಭಾರಿ ಆರೋಪಗಳಿವೆ
ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್ ಅವರು ಪತ್ನಿ ಹತ್ಯೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಪಡೆದುಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಬಿಜು ಅವರ ತಾಯಿ ರಾಜಾಮ್ಮಲ್ ಅವರಿಗೆ ಮೂರು ವರ್ಷ ಜೈಲುಶಿಕ್ಷೆ ಹಾಗೂ 50 ಸಾವಿರ ರು ದಂಡ ಹಾಕಿದೆ.
ಶಾಲು ಮೆನನ್, ಉತ್ತರಾ ಸೇರಿದಂತೆ ಹಲವು ಸೆಲೆಬ್ರಿಟಿ, ರಾಜಕೀಯ ಮುಖಂಡರ ಹೆಸರುಗಳು ಕೇಳಿ ಬಂದಿವೆ. ಸಿಎಂ ಕಚೇರಿ ಕಂಪ್ಯೂಟರ್ ಕೂಡಾ ತನಿಖೆಗೊಳಪಟ್ಟಿದೆ.

ಚಾಂಡಿ ಅವರ ಮಾಜಿ ಪಿಎಗೂ ಲಂಚ
ಚಾಂದಿನಿ ಚೌಕ್ ನ ಶಾಪಿಂಗ್ ಮಾಲ್ ನಲ್ಲಿ 1.10 ಕೋಟಿ ರು ಕುರುವಿಲ್ಲಾಗೆ ನಾನೇ ಕೊಟ್ಟೆ ಎಂದು ಸರಿತಾ ಹೇಳಿದ್ದಾರೆ. ನಂತರ ದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 27, 2012ರಂದು ಸಿಎಂ ಚಾಂಡಿರನ್ನು ಭೇಟಿ ಮಾಡಿದೆ. ಎಲ್ಲಾ ಹೇಗೆ ನಡೆದಿದೆ ಎಂದು ಪ್ರಶ್ನಿಸಿದರು. ನಂತರ ಕುರುವಿಲ್ಲಾ ನನ್ನ ತವರು ಮನೆಯಿಂದಲೂ ಲಕ್ಷಾಂತರ ದುಡ್ಡು ಪಡೆದುಕೊಂಡಿದ್ದಾನೆ ಎಂದು ಸರಿತಾ ಹೇಳಿಕೆ ನೀಡಿದ್ದಾರೆ.











Click it and Unblock the Notifications