29ನೇ ವಯಸ್ಸಿಗೆ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬಾಯ್ ಹೇಳಿ ಕೃಷಿ ಮಾಡಲು ಹೊರಟ ಯುವತಿ: ಕಾರಣವೇನು?

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಗಲಿರುಳು ದುಡಿಯುವ ಕಾರ್ಪೊರೇಟ್ ಉದ್ಯೋಗಿಗಳಿಗೆ ತಮ್ಮ ಜೀವನವನ್ನ ನೆಮ್ಮದಿಯಾಗಿ ಕಳೆಯಲು ಸಮಯವೇ ಸಿಗುತ್ತಿಲ್ಲ. ಕೆಲಸದ ಒತ್ತಡ, ಟಾರ್ಗೆಟ್ ಹಾಗೂ ಜಂಜಾಟದಿಂದ ಬೇಸತ್ತು ಎಷ್ಟೋ ಜನರು ಪ್ರಶಾಂತವಾದ ಬದುಕನ್ನ ಅರಸುತ್ತಿದ್ದಾರೆ.

ಇದೇ ಹಾದಿಯಲ್ಲಿ ಸಾಗಿದ 29 ವರ್ಷದ ಸ್ನೇಹಾ ರಾಜಗುರು ಎಂಬ ಯುವತಿ, ತಮ್ಮ ಕಾರ್ಪೊರೇಟ್ ಕೆಲಸಕ್ಕೆ ವಿದಾಯ ಹೇಳಿ ಕೃಷಿ ಬದುಕಿಗೆ ಮರಳಿದ್ದಾರೆ. ಅವರು ಹಂಚಿಕೊಂಡಿರುವ 4 ಹಂತಗಳ ವಿಭಿನ್ನ ನಿವೃತ್ತಿ ಯೋಜನೆ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.

Sneha Rajguru

ಕಾರ್ಪೊರೇಟ್ ಕೆಲಸದ ಜಂಜಾಟದಿಂದ ಮುಕ್ತಿ

ಕೇವಲ 29ನೇ ವಯಸ್ಸಿಗೆ ತಮ್ಮ ವೃತ್ತಿಜೀವನದಿಂದ ನಿವೃತ್ತಿ ಘೋಷಿಸಿದ ಸ್ನೇಹಾ, ತಮ್ಮ ತಂದೆಯೊಂದಿಗೆ ಸೇರಿ ಬಾಬ್ ಬೇಟಿ ಫಾರ್ಮ್ ಎಂಬ ಸುಂದರವಾದ ಕೃಷಿ ತಾಣವನ್ನ ಆರಂಭಿಸಿದ್ದಾರೆ. ಪರ್ಮಾಕಲ್ಚರ್, ಹಣ್ಣುಗಳ ಕೃಷಿ ಮತ್ತು ಮಾನಸಿಕ ನೆಮ್ಮದಿಗೆ ಒತ್ತು ನೀಡುವ ಮೂಲಕ ಅವರು ಸ್ವಾವಲಂಬಿ ಜೀವನವನ್ನ ಕಟ್ಟಿಕೊಂಡಿದ್ದಾರೆ. ತಮ್ಮ ಈ ಸುಂದರ ಪಯಣದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಪ್ರಕೃತಿಯ ಮಡಿಲಲ್ಲಿ ಬದುಕುವುದು ಎಷ್ಟು ಸುಂದರ ಎಂಬುದನ್ನ ವಿವರಿಸಿದ್ದಾರೆ.

ಸ್ನೇಹಾ ರಾಜಗುರು ಅವರ 4 ಹಂತಗಳ ವಿಭಿನ್ನ ನಿವೃತ್ತಿ ಯೋಜನೆ

ತಮ್ಮ ವೈರಲ್ ವಿಡಿಯೋದಲ್ಲಿ ಸ್ನೇಹಾ ಅವರು ನೆಮ್ಮದಿಯ ಜೀವನಕ್ಕಾಗಿ 4 ಸರಳ ಹಂತಗಳನ್ನ ವಿವರಿಸಿದ್ದಾರೆ:

ಹಂತ 1: ಒಂದು ಸಣ್ಣ ಜಮೀನನ್ನ ಖರೀದಿಸಿ. ಅದಕ್ಕೆ ನಿಮ್ಮ ಮನಸ್ಸಿಗೆ ಹತ್ತಿರವಾದ ಹೆಸರನ್ನಿಡಿ. ನಾನು ನನ್ನ ಜಮೀನಿಗೆ 'ಬಾಬ್ ಬೇಟಿ ಫಾರ್ಮ್' ಎಂದು ಹೆಸರಿಟ್ಟಂತೆ ನೀವೂ ಪ್ರೀತಿಯಿಂದ ಹೆಸರಿಸಿ.

ಹಂತ 2: ಹಣ್ಣಿನ ಗಿಡಗಳನ್ನ ನೆಡಿ. ಅವು ನಿಮ್ಮೊಂದಿಗೇ ಬೆಳೆಯುತ್ತವೆ. ಇವುಗಳಿಗೆ ಹೆಚ್ಚಿನ ಶ್ರಮದ ಅಗತ್ಯವಿರುವುದಿಲ್ಲ, ಆದರೆ ವರ್ಷಗಳ ಕಾಲ ನಿಮಗೆ ರುಚಿಯಾದ ಹಣ್ಣುಗಳನ್ನ ನೀಡುತ್ತಲೇ ಇರುತ್ತವೆ.

ಹಂತ 3: ನಿಮ್ಮ ಆಹಾರವನ್ನ ನೀವೇ ಬೆಳೆಯಲು ಪ್ರಾರಂಭಿಸಿ. ಲಾಕ್‌ಡೌನ್ ಅಥವಾ ಯುದ್ಧದಂತಹ ಪರಿಸ್ಥಿತಿಗಳು ಎದುರಾದರೂ ನೀವು ಆಹಾರಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗಬೇಕಿಲ್ಲ.

ಹಂತ 4: ನಿಮ್ಮ ಜಮೀನಿನ ತುಂಬೆಲ್ಲಾ ಹೂವಿನ ಗಿಡಗಳನ್ನ ಬೆಳೆಸಿ. ದಿನನಿತ್ಯ ನಿಮ್ಮ ಕಣ್ಣುಗಳು ಈ ಸೌಂದರ್ಯವನ್ನ ನೋಡುತ್ತಿದ್ದರೆ, ನಿಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ ಮತ್ತು ಆಸ್ಪತ್ರೆಗಳ ಅಗತ್ಯವೇ ಬರುವುದಿಲ್ಲ. ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಷ್ಟೇ ಅಲ್ಲ, ಆತ್ಮಕ್ಕೂ ತೃಪ್ತಿ ನೀಡುವ ವಾತಾವರಣವನ್ನು ನಿರ್ಮಿಸಿ.

ಒತ್ತಡ ಮುಕ್ತ ಕೃಷಿ ಜೀವನದತ್ತ ಜನರ ಒಲವು

"ನಿವೃತ್ತಿ ಎನ್ನುವುದು ವಯಸ್ಸಿಗೆ ಸಂಬಂಧಿಸಿದ್ದಲ್ಲ, ಅದು ಒತ್ತಡದ ಬದಲಾಗಿ ನೆಮ್ಮದಿಯನ್ನ ಆರಿಸಿಕೊಳ್ಳುವ ಒಂದು ಆಯ್ಕೆ" ಎಂದು ಸ್ನೇಹಾ ರಾಜಗುರು ಹೇಳಿದ್ದಾರೆ. ಅವರ ಈ ಇನ್‌ಸ್ಟಾಗ್ರಾಮ್ ವಿಡಿಯೋ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನ ಪಡೆದುಕೊಂಡಿದೆ. ಕಮೆಂಟ್ ವಿಭಾಗದಲ್ಲಿ ಅನೇಕರು ಈ ಕಲ್ಪನೆಯನ್ನು ಮೆಚ್ಚಿಕೊಂಡಿದ್ದು, "ನಾವು ಕೂಡ ಇಂತಹ ಒತ್ತಡ ಮುಕ್ತ ಜೀವನವನ್ನು ನಡೆಸಲು ಬಯಸುತ್ತೇವೆ" ಎಂದು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+