viral video: ತಾಂತ್ರಿಕ ದೋಷದಿಂದ 'ಪ್ರತಿನಿತ್ಯ ಗಾಂಜಾ ಸೇದು' ಎಂಬ ತಪ್ಪು ಸಂದೇಶ: ಕಂಪನಿ ಸ್ಪಷ್ಟನೆ
ಮುಂಬೈ, ಡಿಸೆಂಬರ್ 20: 'ಪ್ರತಿನಿತ್ಯ ಗಾಂಜಾ (ವೀಡ್) ಸೇದು' ಎಂಬ ನಾಮಫಲಕ ಕಂಡು ಪ್ರಯಾಣಿಕರು ಆಶ್ಚರ್ಯಗೊಂಡ ಘಟನೆ ಮುಂಬೈನ ಪ್ರಮುಖ ರಸ್ತೆಯೊಂದರಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಮುಂಬೈನ ಪ್ರಮುಖ ರಸ್ತೆಯೊಂದರಲ್ಲಿ ಅಳವಡಿಸಲಾಗಿದ್ದ ಎಲ್‌ಇಡಿ ಪರದೆಯಲ್ಲಿ ಈ ರೀತಿ 'ಪ್ರತಿನಿತ್ಯ ಗಾಂಜಾ ಸೇದು' ಎಂಬ ಸಂದೇಶ ಪ್ರದರ್ಶನವಾಗಿದೆ. ಈ ವೇಳೆ ಆ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಸಾವಿರಾರು ಪ್ರಯಾಣಿಕರು ಆಶ್ಚರ್ಯಗೊಂಡಿದ್ದಾರೆ. ಜೊತೆಗೆ ಈ ಘಟನೆಯನ್ನು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಈ ವಡಿಯೋ ಭಾರೀ ವೈರಲ್ ಆಗುತ್ತಿದೆ. ಮುಂಬೈನ ಹಾಜಿ ಅಲಿ ಕಡೆಯಿಂದ ವರ್ಲಿ-ಬೌಂಡ್ ರಸ್ತೆಯ ಕಡೆಗೆ ಸಾಗುವವ ಪ್ರಯಾಣಿಕರು ಈ ದೃಶ್ಯಕ್ಕೆ ಕಾರಣರಾಗಿದ್ದಾರೆ. ಆದರೆ ಈ ಘಟನೆಗೆ ತಾಂತ್ರಿಕ ದೋಷದಿಂದ ಎಲ್‌ಇಡಿ ಪರದೇ ಮೇಲೆ 'ಪ್ರತಿನಿತ್ಯ ಗಾಂಜಾ (ವೀಡ್) ಸೇದು' ಎಂದು ಕೆಂಪು ಅಕ್ಷರದಲ್ಲಿ ಸಂದೇಶ ಕಂಡು ಬಂದಿದೆ.

ನಗರದ ಹಾಜಿ ಅಲಿ ದರ್ಗಾದಿಂದ ಸಿಟಿ ಬೇಕರಿ/ವರ್ಲಿ ನಾಕಾ ಜಂಕ್ಷನ್ ಕಡೆಗೆ ಪ್ರಾರಂಭವಾಗುವ ರಸ್ತೆಯಲ್ಲಿ ಮುಂಬೈ ಕೊಸ್ಟಲ್ ರೋಡ್ ಪ್ರಾಜೆಕ್ಟ್ (ಎಂಸಿಆರ್‌ಪಿ) ನಡಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯಲ್ಲಿ ಲಾರ್ಸೆನ್ ಮತ್ತು ಟೂಬ್ರೊ ಕಂಪನಿ (ಎಲ್ ಆಂಡ್ ಟಿ)ಯಿಂದ ಕಾರ್ಯನಿರ್ವಹಿಸುತ್ತಿರುವ ಈ ಎಲ್‌ಇಡಿ ಪರದೇಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ.
ತಾಂತ್ರಿಕ ದೋಷದಿಂದ ತಪ್ಪು ಸಂದೇಶ
ಆದರೆ ಆ ಎಲ್‌ಇಡಿ ಪರದೆಯನ್ನು ಸ್ಥಗಿತಗೊಳಿಸದೇ ಕಾಮಗಾರಿ ಕೆಲಸ ನಡೆಯುತ್ತಿರುವ ಪ್ರಯುಕ್ತ ರಸ್ತೆ ಪಕ್ಕದಲ್ಲೇ ಹಾಗೇ ಬಿಡಲಾಗಿದೆ. ತಾಂತ್ರಿಕ ದೋಷದಿಂದಾಗಿ 'ಪ್ರತಿನಿತ್ಯ ಗಾಂಜಾ (ವೀಡ್) ಸೇದು' ಎಂಬ ಗ್ಲಿಚ್ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸಂಚಾರ ವಿಭಾಗದ ಜಂಟಿ ಆಯುಕ್ತ ಪ್ರವೀಣ್ ಪಡವಾಲ್ ಮಾತನಾಡಿ, ಲಾರ್ಸೆನ್ ಮತ್ತು ಟೂಬ್ರೊ ಕಂಪಯು ಹಾಜಿ ಅಲಿಯಿಂದ ಲೋಟಸ್ ಜಂಕ್ಷನ್‌ವರೆಗೆ ಎಲ್‌ಇಡಿ ಡಿಸ್‌ಪ್ಲೇ ಬೋರ್ಡ್ ಅಳವಡಿಸಿದೆ. ಹೀಗಾಗಿ ಕಂಪನಿ ಸಿಬ್ಬಂದಿ ಜತೆಗೆ ಈ ಬಗ್ಗೆ ಚರ್ಚಿಸಲಾಗಿದೆ. ಕೆಲವು ತಾಂತ್ರಿಕ ಕಾರಣಗಳು/ಗ್ಲಿಚ್‌ನಿಂದಾಗಿ ಎಲ್‌ಇಡಿ ಪರದೆ ಮೇಲೆ ತಪ್ಪು ಸಂದೇಶ ಕಂಡು ಬಂದಿದೆ. ಕೂಡಲೇ ಅದನ್ನು ಸರಿಪಡಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲಿಯವರೆಗೆ ಎಲ್‌ಇಡಿ ಪರದೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.











Click it and Unblock the Notifications