Monsoon Rain Alert: ಮುಂಗಾರು ಮಳೆಯ ದೀರ್ಘಾವಧಿ ಮುನ್ಸೂಚನೆ: ಈ ರಾಜ್ಯಗಳಿಗೆ ಭಾರೀ ಮಳೆ: Skymet
ಬೆಂಗಳೂರು, ಏಪ್ರಿಲ್ 09: ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಸಿಲಿನ ಶಾಖ ಹೆಚ್ಚಾಗಿದೆ. ಉತ್ತರ ಭಾರತದ ಒಂದೆರಡು ರಾಜ್ಯಗಳಲ್ಲಿ ಮಳೆ ಆಗಿದೆ. ಈ ಬಾರಿ ಜೂನ್ ನಿಂದ ಆಗಮಿಸುವ ಮುಂಗಾರು ಮಳೆ (Monsoon Rain) ಶೇಕಡಾ 102ರಷ್ಟು ಸುರಿಯಲಿದೆ ಎಂದು 'ಸ್ಕೈಮೇಟ್' (Skymet) ಹವಾಮಾನ ಸೇವಾ ಕಂಪನಿ ಮಾಹಿತಿ ನೀಡಿದೆ.
ದೇಶದಲ್ಲಿ ಜೂನ್ ನಿಂದ ಸೆಪ್ಟಂಬರ್ ವರೆಗೆ ದೀರ್ಘಾವಧಿಯ ಸರಾಸರಿಯ (LPA) ಪ್ರಮಾಣ ನೋಡಿದರೆ ವಾಡಿಕೆ ಯಷ್ಟು ಮುಂಗಾರು ಮಳೆ (ಶೇ.102) ಆಗಲಿದೆ. ಮಳೆಗಾಲದ ಈ ನಾಲ್ಕು ತಿಂಗಳ ಅವಧಿಯಲ್ಲಿ (LPA) ಹವಾಮಾನ ಇಲಾಖೆ ಪ್ರಕಾರ 868.6mm ವಾಡಿಕೆ ಮಳೆ ಆಗಬೇಕು. ಮುನ್ಸೂಚನೆ ಪ್ರಕಾರ ಶೇಕಡಾ 96-104ರಷ್ಟು ಆಗುವ ಸಂಭವವಿದೆ. ಇದು ವಾಡಿಕೆಯ ಪ್ರಮಾಣದ ಮಳೆ ಎಂದು ಮಂಗಳವಾರ ಖಾಸಗಿ ಕಂಪನಿಯ ತಜ್ಞರು ತಿಳಿಸಿದ್ದಾರೆ.

ಮುಂಗಾರು ಮಳೆಗೆ ಉತ್ತಮ ವಾತಾವರಣ
ಪೆಸಿಫಿಕ್ ಮಹಾಸಾಗರದ ಎಲ್‌ನಿನೋ ವಾತಾವರಣವು ಅಸಾಮಾನ್ಯ ತಾಪಮಾನದಿಂದ ನಿರೂಪಿಸಲ್ಪಟ್ಟಿದೆ. ಇದರಿಂದಲೇ ಭಾರತದಲ್ಲಿ ಬೇಸಿಗೆ ವಾತಾವರಣ ಸೃಷ್ಟಿಯಾಗಿದೆ. ಲಾ ನಿನಾಗೆ ವೇಗವಾಗಿ ತಿರುಗುತ್ತಿದ್ದು, ಎಲ್‌ನಿನೋ ವಿರುದ್ಧವಾಗಿ ಇದು ಪೂರ್ವ ಪೆಸಿಫಿಕ್ ಸಾಗರದಲ್ಲಿ ತಂಪು ಪ್ರವಾಹಗಳಿಂದ ರೂಪಿತವಾಗಿದೆ. ಇವುಗಳು ಜೂನ್ ವೇಳೆಗೆ ಮುಂಗಾರು ಆರ್ಭಟಕ್ಕೆ ಪೂರಕವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.
ವಿಶ್ವ ಹವಾಮಾನ ಸಂಸ್ಥೆ (WMO) ಮಾರ್ಚ್‌ನಲ್ಲಿ ಎಲ್ ನಿನೊ ದಾಖಲೆಯಲ್ಲಿ ಪ್ರಬಲವಾಗಿದೆ ಎಂದು ಹೇಳಿತ್ತು. ಅದು ಈಗ ದುರ್ಬಲಗೊಳ್ಳುತ್ತಿದೆ. ಇದು ಈಗಾಗಲೇ ಕನಿಷ್ಠ ಅರ್ಧದಷ್ಟು ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಜೂನ್ ಸಮೀಪಿಸುತ್ತಿದ್ದಂತೆ ಈ ಎಲ್‌ನಿನೋ ಮಾನ್ಸೂನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂಗಾರು ಮಳೆಗೆ ಸಕಾರಾತ್ಮಕ ವಾತಾವರಣ ನಿರ್ಮಿಸಿಕೊಡಲಿದೆ ಎನ್ನಲಾಗಿದೆ.

ಈ ರಾಜ್ಯಗಳಲ್ಲಿ ಹೆಚ್ಚು ಮಳೆ
ಈ ವರ್ಷ ಮುಂಗಾರು ಮಳೆಯು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸುರಿಯಲಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜುಲೈ ಮತ್ತು ಆಗಸ್ಟ್‌ನ ಗರಿಷ್ಠ ಮಳೆ ಕೊರೆ ಎದುರಾಗಬಹುದು. ದೇಶದ ಭಾರತದ ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಉತ್ತಮ ಮಳೆಯ ಸಂಭವಗಳು ಇವೆ ಎಂದು ಸ್ಕೈಮೇಟ್ ಊಹಿಸಿದೆ.
ಮುಂದಿನ ಒಂದು ವಾರ ದೇಶ ಕರಾವಳಿ ಭಾಗ ರಾಜ್ಯದಲ್ಲಿ ಶಾಖದ ಅಲೆಯ ವಾತಾವರಣ ನಿರ್ಮಾಣವಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಇದರ ಬೆನ್ನೆಲ್ಲೆ ಗೋವಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಡೆಗಟ್ಟಲು ಪ್ಲಾನ್ ಮಾಡಿಕೊಳ್ಳುತ್ತಿದೆ.
ಬಿಸಿ ಅಲೆಯ ಆರ್ಭಟದ ಎಚ್ಚರಿಕೆ
ಕರೂರ್ ಮತ್ತು ಧರ್ಮಪುರಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರಿಮದ ತಮಿಳುನಾಡಿನಲ್ಲಿ ಶಾಖದ ಅಲೆ ಬೀಸುತ್ತಿದೆ. ಇದೇ ರೀತಿ ಕರ್ನಾಟಕ, ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ಜಾರ್ಖಂಡ್ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ಬಿಸಿಗಾಳಿ ಮೇಲುಗೈ ಸಾಧಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ವಿವಿಧೆಡೆ ಪೂರ್ವ ಮುಂಗಾರು
ಸದ್ಯ ದೇಶದ ವಿವಿಧೆಡೆ ಪೂರ್ವ ಮುಂಗಾರು ಮಳೆ ಆರ್ಭಟಿಸುತ್ತಿದೆ. ಒಂದೆರಡು ದಿನಗಳಿಂದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಪೂರ್ವ ಮುಂಗಾರು ಮಳೆ ಆಗುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಲ್ಲಲ್ಲಿ ವರುಣನ ದರ್ಶನ ಆಗುತ್ತಿದೆ. ಇದರಿಂದ ಆಯಾ ಜಿಲ್ಲೆಗಳ ಪ್ರದೇಶಗಳಲ್ಲಿ ವರುಣನ ದರ್ಶನವಾಗುತ್ತಿದೆ. ಮುಂಗಾರಿನ ವರೆಗೆ ಬಿಸಿಲ ಝಳ ಮುಂದುವರಿಯಬಹುದು ಅಂತಲೂ ಹೇಳಲಾಗುತ್ತಿದೆ.












Click it and Unblock the Notifications