ವಿಚಕ್ಷಣಾ ವಿಮಾನ ನಿರ್ಮಾಣಕ್ಕೆ ಸಜ್ಜಾದ ಡಿಆರ್‌ಡಿಒ: ವಾಯುಸೇನೆ ಮತ್ತಷ್ಟು ಬಲಿಷ್ಠ

ನವದೆಹಲಿ, ಡಿಸೆಂಬರ್ 16: ಡಿಆರ್‌ಡಿಒ ವಾಯುಸೇನೆಗಾಗಿ 6 ವಿಚಕ್ಷಣಾ ವಿಮಾನಗಳನ್ನು ನಿರ್ಮಾಣ ಮಾಡಲಿದ್ದು,ವಾಯುಸೇನೆಗೆ ಮತ್ತಷ್ಟು ಬಲ ಬರಲಿದೆ.

ನೂತನ ಯೋಜನೆಯೊಂದಿಗೆ ವಾಯುಸೇನೆ ಈ ಹಿಂದೆ ಉದ್ದೇಶಿಸಲಾಗಿದ್ದ ಯೂರೋಪಿಯನ್ ಮೂಲದ ಸಂಸ್ಥೆಯಿಂದ 6 ಏರ್ ಬಸ್ 330 ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ಕೈ ಬಿಡುವ ಸಾಧ್ಯತೆ ಇದೆ.

ಈ ಮೊದಲು ದೇಶೀಯ ಯುದ್ಧ ನೌಕೆಗಳ ನಿರ್ಮಾಣಕ್ಕೆ ಒತ್ತು ನೀಡಿದ್ದ ಸೇನೆ, ಇದೀಗ ತನ್ನ ವಿಚಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದೆ. ಗಡಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಸೇನೆಗಳು ಪ್ರಚೋದನೆ ನೀಡುತ್ತಿರುವ ಹೊತ್ತಿನಲ್ಲೇ ಭಾರತ ತನ್ನ ದೇಶೀಯ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವತ್ತ ಸಾಗಿದೆ.

Six New Eyes In The Sky For IAF To Be Built By DRDO On Air India planes

ವಾಯುಸೇನೆಯ ಬಲ ಹೆಚ್ಚಿಸಲು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ವಾಯುಸೇನೆಗೆ ಆರು ವಿಚಕ್ಷಣಾ ವಿಮಾನಗಳನ್ನು ತಯಾರಿಸಿ ಕೊಡಲಿದೆ.

ಈ ಯೋಜನೆಗಾಗಿ ಡಿಆರ್ ಡಿಒ ಮತ್ತು ವಾಯು ಸೇನೆ ಸುಮಾರು 10,500 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿದ್ದು. ಎಇಯು ಮತ್ತು ಸಿ ಬ್ಲಾಕ್ 2 ಮಾದರಿಯ 6 ವಿಮಾನಗಳನ್ನು ತಯಾರಿಸಲು ಡಿಆರ್ ಡಿಒ ಮುಂದಾಗಿದೆ.

ಎಯಿಡಬ್ಲ್ಯೂ ಮತ್ತು C ಬ್ಲಾಕ್ 2 ವಿಮಾನಗಳು ಸೇನೆಯಲ್ಲಿ ಹಾಲಿ ಇರುವ ನೆಟ್ರಾ ವಿಮಾನಕ್ಕಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿವೆ. ಈ ವಿಮಾನದಲ್ಲಿ 360 ಡಿಗ್ರಿ ಸಾಮರ್ಥ್ಯದ ಅತ್ಯಾಧುನಿಕ ರಡಾರ್ ಇದ್ದು ಯಾವುದೇ ರೀತಿಯ ಅಪಾಯಗಳನ್ನು ಮೊದಲೇ ಗ್ರಹಿಸಿ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+